
ತೀರ್ಥಹಳ್ಳಿ: ತಾಲೂಕಿನ ಗುಡ್ಡೇಕೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ತೀರ್ಥಹಳ್ಳಿ ತಾಲ್ಲೂಕು ನ್ಯಾಯಾಂಗ ಇಲಾಖೆ ಮತ್ತು ತೀರ್ಥಹಳ್ಳಿ ತಾಲ್ಲೂಕು ಪೋಲಿಸ್ ಇಲಾಖೆ ವತಿಯಿಂದ ಅತ್ಯಂತ ಯಶಸ್ವಿಯಾಗಿ ನಡೆದ,
ಪೋಕ್ಸೋ ಕಾಯ್ದೆ,ಮಾನವ ಕಳ್ಳಸಾಗಣೆ ಜಾಗೃತಿ, ಮತ್ತು ಮಕ್ಕಳ ಸ್ನೇಹಿ ಕಾನೂನುಗಳ ” ಬಗ್ಗೆ ಕಾನೂನು ಸೇವಾ ಮಾಹಿತಿ ಕಾರ್ಯಾಗಾರ.
ಕಾರ್ಯಕ್ರಮದ ಉದ್ಘಾಟಕರಾಗಿ,ಆಗಮಿಸಿದ , ತೀರ್ಥಹಳ್ಳಿ Dy,sp. ಶಾಂತವೀರ್ KSPS, ಮಾತನಾಡಿ ಮಕ್ಕಳಿಗೆ, ಅಪರಾಧಗಳು ಕಾನೂನು ತಿಳುವಳಿಕೆ, ವಿಧ್ಯಾಭ್ಯಾಸ ಮಾಡುವ ಬಗ್ಗೆ ಮಾಹಿತಿ ನೀಡಿ, ಇತ್ತೀಚಿಗೆ ಪೋಲೀಸ್ ಇಲಾಖೆಯಿಂದ ನಡೆದ , ತಾಲ್ಲೂಕು ಮಟ್ಟದ ವಿವಿಧ ಸ್ಪರ್ಧೆಯಲ್ಲಿ ಗೆದ್ದಿದ್ದ ಮಕ್ಕಳಿಗೆ ಬಹುಮಾನ ವಿತರಿಸಿದರು.

ಕಾನೂನುಗಳ ಬಗ್ಗೆ ಮಕ್ಕಳಿಗೆ ವಿಶೇಷ ಮಾಹಿತಿಯನ್ನು ನೀಡಿದ ಗೌರವನ್ವಿತ ವೆಂಕಟೇಶ್ ಕೆ ಎನ್, 1ನೇ ಹೆಚ್ಚುವರಿ ವ್ಯವಹಾರಗಳ ನ್ಯಾಯಾಧೀಶರು JMFC,
ಶ್ರೀಮತಿ ನಿವೇದಿತಾ ಎನ್, 2ನೇ ಹೆಚ್ಚುವರಿ ವ್ಯವಹಾರಗಳ ನ್ಯಾಯಾಧೀಶರು JMFC,
ಫೋಕ್ಸೋ ಕಾಯ್ದೆ ಮತ್ತು ಮಕ್ಕಳ ಜಾಗೃತಿ ಬಗ್ಗೆ ಶ್ರೀಮತಿ ಪ್ರೇಮಲೀಲಾ, ಸಹಾಯಕ ಸರ್ಕಾರಿ ಅಭಿಯೋಜಕರು, ತೀರ್ಥಹಳ್ಳಿ ಇವರು ಅತ್ಯಂತ ಉತ್ತಮವಾಗಿ ಮಾಹಿತಿ ನೀಡಿದರು.
ಕೊನೆಯಲ್ಲಿ ಮಾತಾಡಿದ ,
ಶ್ರೀಮತಿ ಗೀತಾಂಜಲಿ ಜಿ, ಹಿರಿಯ ವ್ಯವಹಾರಗಳ ನ್ಯಾಯಾಧೀಶರು JMFC & ಅಧ್ಯಕ್ಷರು ಕಾನೂನು ಸೇವಾ ಸಮಿತಿ ತೀರ್ಥಹಳ್ಳಿ, ಇವರು, ಮಕ್ಕಳ ಹಕ್ಕುಗಳು, ಕಾನೂನು ತಿಳುವಳಿಕೆ, ಶಿಕ್ಷಣದ ಜಾಗೃತಿ, ಪರಿಸರದ ಬಗ್ಗೆ ತುಂಬಾ ಅಚ್ಚುಕಟ್ಟಾಗಿ ಮಾತಾನಾಡಿ, ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ ಶಾಲಾ ಚಿತ್ರಣವನ್ನು, ಶ್ರಮಿಸಿದ ಸರ್ವರನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು,
ಜೊತೆಗೆ ಶಾಲಾ ಮಕ್ಕಳು, ” ಶಾಲಾ ಮಕ್ಕಳ ರಕ್ಷಣಾ ಸಮಿತಿ ” ವತಿಯಿಂದ ಶಾಲಾ ಆಸ್ತಿ, ಪಹಣಿ ವಿಳಂಭ ಹಾಗೂ ಖಾಸಗಿ ವ್ಯಕ್ತಿಗಳಿಂದ ಶಾಲಾ ಜಾಗದ ಒತ್ತುವರಿಯ ಬಗ್ಗೆ ಅದನ್ನು ಇದುವರೆಗೂ ಖುಲ್ಲಾ ಮಾಡದಿರುವ ಬಗ್ಗೆ, ಮಾನ್ಯ ನ್ಯಾಯಾಧೀಶರಿಗೆ ವೇದಿಕೆಯಲ್ಲಿ ಮನವಿ ನೀಡಿದರು, ಮನವಿ ಸ್ವೀಕರಿಸಿ ಮಾತಾಡಿದ ಮಾನ್ಯ ನ್ಯಾಯಾಧೀಶರು, ಮಕ್ಕಳ ಮನವಿಯನ್ನು ಅತೀ ಜರೂರು ಎಂದು ಭಾವಿಸಿ, ಸಂಬಂಧಿಸಿದ ಇಲಾಖೆ ಸೂಕ್ತ ಮಾರ್ಗದರ್ಶನ ನೀಡಿ, ಮಕ್ಕಳ ಮನವಿಗೆ ನ್ಯಾಯ ಒದಗಿಸುತ್ತೇನೆ ಎಂದು ತಿಳಿಸಿದರು.
ಪ್ರಜಾವಾಣಿ ವರ್ಷದ ಸಾಧಕ ಪ್ರಶಸ್ತಿ _2022 ಪುರಸ್ಕೃತ ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್ ಪಿ ಅವರಿಗೆ ನ್ಯಾಯಾಧೀಶರ ಸಮ್ಮುಖದಲ್ಲಿ ಪೊಲೀಸ್ ಇಲಾಖೆಯು ವತಿಯಿಂದ ಸನ್ಮಾನಿಸಲಾಯಿತು..

ವೇದಿಕೆಯ ಮೇಲಿದ್ದ ಶಾಲಾ ಬಳಗದ ಪರವಾಗಿ ಗ್ರಾಮ ಪಂಚಾಯತಿ ಸದಸ್ಯರಾದ ಶಶಾಂಕ್ ಹೆಗಡೆ ಗುಡ್ಡೇಕೇರಿ ಮಾತಾನಾಡಿ, ಇಂತಹ ಕಾರ್ಯಕ್ರಮ ಗಳ ಮೂಲಕ ಮಕ್ಕಳಿಗೆ ಕಾನೂನು ತಿಳಿವಳಿಕೆ ಹೆಚ್ಚಾಗುತ್ತದೆ, ಇದರ ಸದುಪಯೋಗ ಪಡೆದುಕೊಳ್ಳಬೇಕು, ಎಂದು ಅಭಿಪ್ರಾಯ ಪಟ್ಟರು,
ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಶೋಕ್ ಓಣಿಮನೆ, ನಿಕಟ ಪೂರ್ವ ಅಧ್ಯಕ್ಷರಾದ ಜಯೇಶ್ ಹೆಗಡೆ, ಎ ಪಿ ಎಂ ಸಿ ಸದಸ್ಯರಾದ ಹಸಿರುಮನೆ ಮಹಾಬಲೇಶ್, ಹೊನ್ನೆತಾಳು ಸೊಸೈಟಿಯ ನಿರ್ದೇಶಕರಾದ ಗಿರೀಶ್ ಹೆಗಡೆ ಹೊಸೂರು, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ಶ್ವೇತಾ ಗಿರೀಶ್ ಹೆಗಡೆ , ನಿತ್ಯಾನಂದ್ ಅಣುಗೋಡು, ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್ ಪಿ, ಫೊಷಕರಾದ ಆಲಿದ್ ಹೊಸೂರು, ಅಬ್ದುಲ್ ಹೊಸೂರು, ನ್ಯಾಯಾಂಗ ಸಿಬ್ಬಂದಿಗಳು, ಫೋಲೀಸ್ ಸಿಬ್ಬಂದಿಗಳು, ಫೊಷಕರು, ಮಕ್ಕಳು ಶಿಕ್ಷಕರಾದ ಸುಬ್ರಹ್ಮಣ್ಯ ಎಸ್ ವೀರೆಶ್ ಟಿ, ಬೀರಪ್ಪ ಇಟಗಿ, ಪ್ರದೀಪ್ ಬಿ ಟಿ ಹಾಜರಿದ್ದರು.
ಕಾರ್ಯಕ್ರಮಕ್ಕೆ ಸಹಕರಿಸಿದ ಹಾಗೂ ಆಗಮಿಸಿದ ಸರ್ವರಿಗೂ ಗುಡ್ಡೆಕೆರಿ ಸರ್ಕಾರಿ ಪ್ರೌಢಶಾಲೆಯ ತಂಡ ವಂದನೆಗಳನ್ನು ಸಲ್ಲಿಸಿದೆ.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…