ತೀರ್ಥಹಳ್ಳಿ: ತಾಲೂಕಿನ ಹೊನ್ನೆತಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೀರ್ಥಹಳ್ಳಿ ತಾಲ್ಲೂಕು ನ್ಯಾಯಾಂಗ ಇಲಾಖೆ ಮತ್ತು ತೀರ್ಥಹಳ್ಳಿ ತಾಲ್ಲೂಕು ಪೊಲೀಸ್ ಇಲಾಖೆ ವತಿಯಿಂದ ತೀರ್ಥಹಳ್ಳಿ DYSP ಶಾಂತವೀರ್ , ಶ್ರೀಮತಿ ಗೀತಾಂಜಲಿ. ಜೆ ಹಿರಿಯ ವ್ಯವಹಾರ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ಹಾಗೂ ಅಧ್ಯಕ್ಷರು ತಾಲ್ಲೂಕು ಕಾನೂನು ಸೇವಾ ಸಮಿತಿ ತೀರ್ಥಹಳ್ಳಿ, ಶ್ರೀ ವೆಂಕಟೇಶ್ ಕೆ ಎಸ್ 1ನೇ ಹೆಚ್ಚುವರಿ ವ್ಯವಹಾರಗಳ ನ್ಯಾಯಾಧೀಶರು JMFC,ಶ್ರೀಮತಿ ನಿವೇದಿತಾ ಎನ್,2 ನೇಹೆಚ್ಚುವರಿ ವ್ಯವಹಾರಗಳ ನ್ಯಾಯಾಧೀಶರು JMFC, ಶ್ರೀಮತಿ ಪ್ರೇಮಲತಾ,ಸಹಾಯಕ ಸರ್ಕಾರಿ ಅಭಿಯೋಜಕರು ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಶಾಲಾ ಅಭಿವೃದ್ಧಿ ಕಂಡು ಮೆಚ್ಚುಗೆ ವ್ಯಕ್ತಪಡಿಸಿ ಮುಕ್ತ ಕಂಠದಿಂದ ಶ್ಲಾಘಿಸಿದರು.

ಮುಂದಿನ ದಿನಗಳಲ್ಲಿ ತಮ್ಮ ಇಲಾಖೆಯ ವತಿಯಿಂದ ಕಾನೂನು ಬಗ್ಗೆ ಅರಿವು ಕಾರ್ಯಾಗಾರ ಮಾಡುವುದಾಗಿ ತಿಳಿಸಿದರು
ಈ ಸಂದರ್ಭದಲ್ಲಿ ಶಾಲಾ SDMC ಅಧ್ಯಕ್ಷರು ಮತ್ತು ಸದಸ್ಯರು ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗೆ ಭೇಟಿ ನೀಡಿ ಶಾಲೆಯ ಬಗ್ಗೆ ಅಭಿಮಾನದ ಹಾಗೂ ಪ್ರೇರಣೆಯ ಮಾತುಗಳನ್ನು ಆಡಿದ ಇವರುಗಳಿಗೆ ಧನ್ಯವಾದಗಳನ್ನು ಸಮರ್ಪಿಸಿದರು.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…