ಶಿವಮೊಗ್ಗ: ಭಾರತ ವಿವಿಧ ಧರ್ಮಗಳ ಸಮಾನತೆಯ ಐಕ್ಯತೆಯ ದೇಶ ಇಲ್ಲಿಯವರೆಗೂ ನಾವೆಂದೂ ಕಂಡಿರದ, ಕೇಳಿರದ, ಹಿಜಾಬ್ ವಿವಾದ ಇದ್ದಕ್ಕಿದ್ದಂತೆ ಮುಂಚೂಣಿಗೆ ಬಂದಿದೆ.
ಇದು ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಬಿಜೆಪಿ ಸರ್ಕಾರದ ಮುಂದಿನ ಚುನಾವಣೆಗೆ ನಡೆಸಿರುವ ಅಜೆಂಡಾ , ಪ್ರಸ್ತುತ ಆಡಳಿತ ನಡೆಸುತ್ತಿರುವ ಸರ್ಕಾರಕ್ಕೆ ಯುವಕರಿಗೆ ಕೊಟ್ಟ ಭರವಸೆಯಂತೆ ಯಾವುದೇ ರೀತಿಯ ಉದ್ಯೋಗ ಸೃಷ್ಟಿಸಲು ಇಲ್ಲಿಯವರೆಗೂ ಸಾಧ್ಯವಾಗಿಲ್ಲ.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು:
ಪ್ರಸ್ತುತ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅವಧಿ ಪೂರ್ಣಗೊಂಡ ಬಳಿಕ ಉದ್ಯೋಗ ಕೇಳಿದರೆ ಈ ಸರ್ಕಾರದ ಬಳಿ ಉತ್ತರವಿಲ್ಲ ಆದ್ದರಿಂದ ಯುವಕರ ಗಮನ ಬೇರೆಡೆ ಸೆಳೆಯಲು ಈ ರೀತಿಯ ಕೋಮು ವಿವಾದಗಳು ಸೃಷ್ಟಿ ಮಾಡುತ್ತಿದ್ದಾರೆ.
ಶಾಲೆ ಒಂದು ವಿದ್ಯಾಮಂದಿರ:
ಶಾಲೆಯ ಒಂದು ವಿದ್ಯಾಮಂದಿರ ವಾಗಿದ್ದು ಇಲ್ಲಿ ಕೇವಲ ಶೈಕ್ಷಣಿಕ ಪ್ರಗತಿಗೆ ಅಷ್ಟೇ ಅವಕಾಶ ನೀಡಬೇಕು. ಹೆಣ್ಣುಮಕ್ಕಳ ಧಾರ್ಮಿಕ ಹಕ್ಕನ್ನು ಯಾವುದೇ ಕಾರಣಕ್ಕೂ ಕಸಿದುಕೊಳ್ಳಬಾರದು. ಒಬ್ಬ ಹಿಂದು ಮಹಿಳೆಗೆ ಹಣೆಗೆ ಕುಂಕುಮ ಇಡುವ, ಕೈಗೆ ಬಳೆ ಹಾಕುವ, ಧಾರ್ಮಿಕ ಸ್ವಾತಂತ್ರ್ಯ ಇದೆ. ಎಂದಾದಲ್ಲಿ ಬೇರೆ ಧರ್ಮದ ಮಹಿಳೆಯರಿಗೆ ಅವರು ಧಾರ್ಮಿಕ ಪದ್ಧತಿಗಳನ್ನು ಅನುಸರಿಸುವ ಸ್ವಾತಂತ್ರ್ಯ ಕೂಡ ಇರುತ್ತದೆ.
ಈ ನಿಟ್ಟಿನಲ್ಲಿ ಶಿಕ್ಷಣಸಸ್ಥೆಗಳು ಮತ್ತು ಪೋಷಕರು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದುಕೊಂಡು ವಿದ್ಯಾರ್ಥಿಗಳಿಗೆ ಧರ್ಮ ಸಹಿಷ್ಣತೆ ಭಾವ ಬೆಳೆಸ ಬೇಕಾಗಿದ್ದು. ಶೈಕ್ಷಣಿಕ ಅವಧಿಯಲ್ಲಿ ಕೋಮು ವಿವಾದಗಳಲ್ಲಿ ಪಾಲ್ಗೊಳ್ಳುವ ಬದಲು ಶೈಕ್ಷಣಿಕ ಅಭಿವೃದ್ಧಿಗೆ ಗಮನಹರಿಸಬೇಕಿದೆ.
ಈ ನಿಟ್ಟಿನಲ್ಲಿ ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು ಅವರು ಜವಾಬ್ದಾರಿಯಾಗಿರುತ್ತದೆ. ರಾಜಕೀಯ ಪಿತೂರಿಗಳಿಗೆ ವಿದ್ಯಾರ್ಥಿಗಳು ಬಲಿಯಾಗದೆ ಪ್ರಸ್ತುತ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ.

ಯಮುನಾ ರಂಗೇಗೌಡ ಮಹಾನಗರಪಲಿಕೆ ವಿರೋಧಪಕ್ಷದ ನಾಯಕಿ…
______________________________________________________________________________________________________
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…