
ರಾಜ್ಯಾದ್ಯಂತ ಹಿಜಾಬ್ ಕೇಸರಿ ವಿವಾದದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ಮೂರು ದಿನಗಳ ರಜೆ ಘೋಷಿಸಲಾಗಿದೆ.
ಇದರ ನಡುವೆಯೇ ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೆರಿ ಹೊಸೂರು ಸರ್ಕಾರಿ ಪ್ರೌಢ ಶಾಲೆ ಈ ರಜೆಯಲ್ಲೂ ವಿಭಿನ್ನವಾಗಿ ಇತರ ಶಾಲೆಗಳಿಗೆ ಮಾದರಿಯಾಗುವ ಕಾರ್ಯ ಮಾಡಿದೆ.
ಏನಿದು ಸರ್ಕಾರಿ ಶಾಲೆಯ ಕಾರ್ಯ:
ಎಸ್ ಎಸ್ ಎಲ್ ಸಿ ಸೇರಿದಂತೆ 8 & 9 ನೇ ತರಗತಿಯ ಮಕ್ಕಳ ಮನೆಗೆ ಭೇಟಿ ಮಾಡಲು ಯೋಜನೆ ರೂಪಿಸಿ, ಆರಂಭಿಕವಾಗಿ ಗುಡ್ಡೇಕೇರಿಯ ಕಲ್ಕೋಡ್ ಮನೆಗೆ ಭೇಟಿ ಮಾಡಿ ನಂತರ ಗುಡ್ಡೇಕೇರಿ, ಕೆಂದಾಳಬೈಲು, ಹೊನ್ನೆತಾಳು, ಕುಂದಾ, ನಂಟೂರು, ಹೆಬ್ಬೈಲ್ , ತಿಪ್ಪೊಡ್ಲು, ಕುಂದಾದ್ರಿ, ಭಾಗದ ಮಕ್ಕಳ ಮನೆಗೆ ಭೇಟಿ ನೀಡಿದ ಶಾಲೆಯ ತಂಡ ಮಕ್ಕಳ ಮುಂದಿನ ಶೈಕ್ಷಣಿಕ ದೃಷ್ಟಿಯಿಂದ ಒಂದಷ್ಟು ಉಪಯುಕ್ತ ಮಾಹಿತಿಗಳನ್ನು ನೀಡುವುದರ ಜೊತೆಗೆ ಮಕ್ಕಳ ಕಲಿಕೆಗೆ ಅನುಕೂಲವಾಗುವ ರೀತಿ ದಿನನಿತ್ಯ ಓದುವ ಕ್ರಮದ ಬಗ್ಗೆ ಹಾಗೂ ಪರೀಕ್ಷೆಗಳಿಗೆ ತಯಾರು ಆಗುವ ಬಗ್ಗೆ ಮನೆಯಲ್ಲಿನ ಇತರ ಸಮಸ್ಯೆಗಳ ಬಗ್ಗೆ ಕೂಲಂಕುಶವಾಗಿ ಚರ್ಚೆ ಮಾಡಿ ಒಂದಷ್ಟು ಸೂಕ್ತ ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸುಬ್ರಹ್ಮಣ್ಯ ಎಸ್, ವೀರೇಶ್ ಟಿ, ರೇವತಿ ಹೆಚ್ ಬಿ ಬೀರಪ್ಪ ಇಟಗಿ, ಶೌಕತ್ ಆಲಿ, ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್ ಪಿ ಮುಂತಾದವರು ಭಾಗವಹಿಸಿದ್ದರು,
ರಜೆಯನ್ನು ಇತರ ಸದುಪಯೋಗಪಡಿಸಿಕೊಂಡು ಇತರ ಶಾಲೆಗಳಿಗೂ ಮಾದರಿಯಾಗಿದ್ದು ಹೆಮ್ಮೆಯ ಸಂಗತಿ ಉಳಿದ ಶಾಲೆಯ ಶಿಕ್ಷಕರಿಗೆ ಇದು ಮಾದರಿಯಾಗಲಿ…
##########################################################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…