
ಶಿವಮೊಗ್ಗ: ಹಿಜಾಬ್ ಸಂಘರ್ಷ ಕೇಸರಿ ಸಂಘರ್ಷ ನ್ಯಾಯಾಲಯದಲ್ಲಿದ್ದು.ಇಂದು ಅಥವಾ ನಾಳೆ ತೀರ್ಪು ಹೊರಬೀಳುವ ಸಾಧ್ಯತೆ ಇದೆ. ಇದರ ನಡುವೆ ಇಂದು ಶಿವಮೊಗ್ಗದ ಮೇನ್ ಮಿಡ್ಲ್ ಸ್ಕೂಲ್ನಲ್ಲಿ ಎಸ್ಎಸ್ಎಲ್ಸಿ ಪೂರ್ವಸಿದ್ಧತಾ ಪರೀಕ್ಷೆ ನಡೆಸಲಾಗುತ್ತಿದೆ. ಈ ಪರೀಕ್ಷೆಗೆ 13 ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಬಂದಿದ್ದರು. ಈ ವೇಳೆ ಸಿಬ್ಬಂದಿ ಹಿಜಾಬ್ ತೆಗೆದು ಪರೀಕ್ಷೆಗೆ ಹಾಜರಾಗಲು ಸೂಚಿಸಿದ್ದಾರೆ. ಆದರೆ, ಇದಕ್ಕೆ ವಿದ್ಯಾರ್ಥಿಗಳು ಒಪ್ಪಿಗೆ ಸೂಚಿಸಿಲ್ಲ. ಇವರ ಮನವೊಲಿಸಲು ಯತ್ನಿಸಿದ ಸಿಬ್ಬಂದಿಗಳು.
ಕೋರ್ಟ್ ಆದೇಶವಿದೆ ಎಂದು ಹೇಳಿದರೂ ಕೇಳದ ವಿದ್ಯಾರ್ಥಿನಿಯರು:
ಕೋರ್ಟ್ ಆದೇಶ ಪಾಲಿಸುವಂತೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದ ಶಾಲಾ ಆಡಳಿತ ಮಂಡಳಿ ಆದರೂ ಕೇಳದ 13 ವಿದ್ಯಾರ್ಥಿನಿಯರು, ಹಿಜಾಬ್ ಧರಿಸಲು ಅವಕಾಶ ನೀಡಿದರೆ ಮಾತ್ರ ಪರೀಕ್ಷೆ ಬರೆಯುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಶಾಲಾ ಸಿಬ್ಬಂದಿ ಅವಕಾಶ ನೀಡದ ಕಾರಣ ಪರೀಕ್ಷೆಯನ್ನೇ ಬಹಿಷ್ಕರಿಸಿ ಮನೆಗೆ ತೆರಳಿದ್ದಾರೆ.
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305….