ಫೆ.20 ರಂದು ಶಿವಮೊಗ್ಗದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಿಶೇಷ ಮಹಾಸಭೆ..!
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ತನ್ನ 2012ರ ಉಪವಿಧಿಗಳನ್ನು ತಿದ್ದುಪಡಿ ಮಾಡಲು ಉದ್ದೇಶಿಸಿದ್ದು, ಬೆಂಗಳೂರಿನ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು ದಿನಾಂಕ: 20-12-2021 ರಲ್ಲಿ ನೀಡಿರುವ ಸೂಚನೆಯಂತೆ ಸಂಘದ ಸರ್ವ ಸದಸ್ಯರ ವಾಸ್ತವ ಮತ್ತು ವರ್ಚುಯಲ್ ವಿಧಾನದ ಮೂಲಕ ವಿಶೇಷ ಮಹಾಸಭೆಯು ಸಂಘದ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಾಕ್ಷರಿಯವರ ಅಧ್ಯಕ್ಷತೆಯಲ್ಲಿ ಶಿವಮೊಗ್ಗ ನಗರದ ಸಾಗರ ರಸ್ತೆ ಆಟೋ ಕಾಂಪ್ಲೆಕ್ಸ್‍ನಲ್ಲಿರುವ ದ್ವಾರಕ ಕನ್ವೆನ್ಸನ್ ಹಾಲ್ ನಲ್ಲಿ ಫೆಬ್ರವರಿ 20, 2022 ರ ಭಾನುವಾರ, ಬೆಳಿಗ್ಗೆ 11 ಗಂಟೆಗೆ ಜರುಗಲಿದೆ.
ತೀರ್ಥಹಳ್ಳಿ ತಾಲ್ಲೂಕಿನ ಸಂಘದ ಪದಾಧಿಕಾರಿಗಳು,ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಎಲ್ಲಾ ಸದಸ್ಯರು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಿಕೊಡುವಂತೆ ಸಂಘದ ತಾಲೂಕು ಅಧ್ಯಕ್ಷ ಟಿ ವಿ ಸತೀಶ ಕೋರಿದ್ದಾರೆ.
ಉದ್ದೇಶಿತ ತಿದ್ದುಪಡಿ ಉಪವಿಧಿಗಳ ಸಂಪೂರ್ಣ ವಿವರಗಳನ್ನು ನೋಟೀಸ್‍ನೊಂದಿಗೆ ಸದಸ್ಯರ ಮೊಬೈಲ್ ಸಂಖ್ಯೆಗೆ ಪಿಡಿಎಫ್ ಸಾಪ್ಟ್ ಕಾಪಿ (pdf-soft copy) ಯನ್ನು ಸಮೂಹ ವಾಟ್ಸ್ ಅಪ್ (whatsapp) ಸಂಖ್ಯೆಗಳ ಮೂಲಕ ಈಗಾಗಲೇ ರಾಜ್ಯ ಸಂಘದಿಂದ ಕಳುಹಿಸಲಾಗಿದೆ. ಹೆಚ್ಚುವರಿಯಾಗಿ ಕೇಂದ್ರ ಸಂಘದ ಜಾಲತಾಣ, ಸಂಘದ ಕೇಂದ್ರ ಕಚೇರಿ ಕಾರ್ಯಾಲಯ, ಎಲ್ಲಾ ಜಿಲ್ಲಾ ಹಾಗೂ ತಾಲೂಕು ಸಂಘಗಳ ಕಚೇರಿಗಳಲ್ಲಿ ಲಭ್ಯವಿದ್ದು, ಸದಸ್ಯರು ಮುಕ್ತವಾಗಿ ಪಡೆದುಕೊಳ್ಳಬಹುದಾಗಿದೆ.
ವರ್ಚುಯಲ್ ವೇದಿಕೆಯ ಮೂಲಕ ಸದಸ್ಯರಿಗೆ ಸಭೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದ್ದು, https://us02web.zoom.us/81805162152 ಲಿಂಕ್ ಅನ್ನು ಬಳಸಿ ಸಭೆಯಲ್ಲಿ ಭಾಗವಹಿಸಬಹುದಾಗಿದೆ. ಈ ವಿಶೇಷ ಮಹಾಸಭೆಯನ್ನು ಸಂಘದ ಫೇಸ್‍ಬುಕ್ ಲಿಂಕ್:https://www.facebook.com/ksgeaofficial/ ಹಾಗೂ https://www.facebook.com/ksgeabng/ ನಲ್ಲಿಯೂ ಸಹ ವೀಕ್ಷಿಸಬಹುದಾಗಿದೆ.ಸಂಘದ ಸದಸ್ಯರು ಹೆಚ್ಚಿನ ಮಾಹಿತಿಗಾಗಿ ಕೇಂದ್ರ ಸಂಘದ ಮ್ಯಾನೇಜರ್ ಸುರೇಶ್ ಅವರನ್ನು ಮೊಬೈಲ್ ಸಂಖ್ಯೆ: 9448617400 ರ ಮೂಲಕ ಮತ್ತು ದೂರವಾಣಿ 080-22354784, 080-22354783 ನ್ನು ಸಂಪರ್ಕಿಸಬಹುದಾಗಿದೆ ಎಂದವರು ತಿಳಿಸಿದ್ದಾರೆ.
###################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305….