# ಟಿ ವಿ ಸತೀಶ #

ಹಣದ ಹಿಂದೆ ಹೋಗದೆ ಜನರ ಜೊತೆ ಹೋದವರನ್ನು, ಜನಪರ ಕಾಳಜಿಗಳಿಂದ ಶ್ರಮಿಸಿದವರನ್ನು ಸಮಾಜ ಎಂದಿಗೂ ಮರೆಯದು ಮಾತ್ರವಲ್ಲ ಅಂತವರನ್ನು ಖುಷಿಯಿಂದ ನೆನಪಿಸಿಕೊಳ್ಳುತ್ತದೆ ಮತ್ತು ಅಂತವರ ಖುಷಿಯನ್ನು ಸಂಭ್ರಮಿಸುತ್ತದೆ ಎಂಬುದಕ್ಕೆ ಡಾ.ಉಪಾಧ್ಯಾಯರವರ ಬದುಕೇ ಸಾಕ್ಷಿ.
ವೃತ್ತಿ ಬದುಕಿನಿಂದ ನಿವೃತ್ತರಾಗಿ ಸುಮಾರು ಎರಡು ದಶಕಗಳಷ್ಟಾಗಿದ್ದರೂ ಸಹೋದ್ಯೋಗಿಗಳು ಮತ್ತು ಜನಮಾನಸದಲ್ಲಿ ಇಂದಿಗೂ ಇವರು ಸ್ಥಾನ ಪಡೆದಿರುವುದು ಇವರ ಜನಪರ ಕಾಳಜಿ, ಬದ್ದತೆಗಳಿಂದಲೇ ಹೊರತು ಬೇರೆ ಯಾವುದರಿಂದಲೂ ಅಲ್ಲ. ಬದುಕಿಗೆ ಹಣ ಬೇಕು ನಿಜ ,ಆದರೆ ಹಣವೇ ಬದುಕಾಗಬಾರದು.ಹಣದ ಹಿಂದೆ ಹೋದವರು ಎಷ್ಟೇ ಗುಡ್ಡೆ ಹಾಕಿಟ್ಟರೂ ಅತೃಪ್ತಿಯಲ್ಲೇ ಬದುಕು ಮುಗಿಸಿ ಹೊರಡಬೇಕಾದೀತೇ ಹೊರತು ಬದುಕಿನ ನೈಜ ತೃಪ್ತಿಯನ್ನೆಂದೂ ಪಡೆಯಲಾರರು ಎಂದು ತಾಲ್ಲೂಕು ಸರ್ಕಾರಿ ನೌಕರರ ಸಂಘ ಹಾಗೂ ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ ನುಡಿದರು.ಅವರು ತೀರ್ಥಹಳ್ಳಿಯ ಜನಪ್ರಿಯ ವೈದ್ಯ ಡಾ.ಪಿ ಎಸ್ ಉಪಾಧ್ಯಾಯರ ಜನ್ಮದಿನದಂದು ಅವರ ಸ್ವಗೃಹದಲ್ಲಿ ಆತ್ಮೀಯವಾಗಿ ಗೌರವಿಸಿ, ಶುಭಹಾರೈಸಿ ಮಾತನಾಡಿದರು.
ಮುಂದುವರೆದು, ಡಾ.ಉಪಾಧ್ಯಾಯರವರ ಬದುಕು ನಮಗೆ ಮಾದರಿ.ನಮ್ಮ ಯುವ ಜನತೆ ಇಂತವರಿಂದ ಪ್ರೇರಣೆ ಪಡೆಯುವಂತಾಗಲಿ,ಅದರಿಂದ ಸಮಾಜಕ್ಕೆ ಹೆಚ್ಚಿನ ಸೇವೆ ದೊರಕುವಂತಾಗಲಿ ಎಂದು ಆಶಿಸಿದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ರಾಮು ಬಿ,ಖಜಾಂಚಿ ಪವಿತ್ರ ಹೆಚ್ ಸಿ, ಆರೋಗ್ಯ ಇಲಾಖಾ ನೌಕರರ ಸಂಘದ ಕಾರ್ಯದರ್ಶಿ ಸುಭಾಷ್, ಉಪಾಧ್ಯಕ್ಷೆ ತಿಲಕಮ್ಮ, ಪದಾಧಿಕಾರಿಗಳಾದ ಶಿವಶಂಕರ್, ಶ್ರೀಲತಾ, ಪ್ರಾ.ಆ.ಕೇಂದ್ರ ಮೇಗರವಳ್ಳಿಯ ವೈದ್ಯಾಧಿಕಾರಿ ಡಾ.ಅರವಿಂದ್, ಜೆ ಸಿ ಆಸ್ಪತ್ರೆ ಸಹಾಯಕ ಆಡಳಿತಾಧಿಕಾರಿ ರಾಮಕೃಷ್ಣ, ಮೇಟ್ರನ್ ಪಾರ್ವತಿ ಭಟ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಮತ್ತು ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ಖಜಾಂಚಿ ಉಷಾ, ಸಮಾಜ ಸೇವಕರಾದ ಟಿ ಜಿ ಸೋಮಶೇಖರ್, ಅವಿನಾಶ್, ಕಾಡಪ್ಪ ಗೌಡ ಮತ್ತಿತರತಿದ್ದರು.
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…