
ಸಾಗರ:- ಶಿವಮೊಗ್ಗ ಜಿಲ್ಲೆ ಸಾಗರದ ಪೊಲೀಸ್ ಇಲಾಖೆಯ ವಸತಿ ಗೃಹಗಳ ಚರಂಡಿಗಳು ಕೊಳೆತು ನಾರುತ್ತಿದ್ದೂ, ವಿಪರೀತ ಸೊಳ್ಳೆ ಹಾವು ಹುಪಡಿಗಳಿಂದ ಪೊಲೀಸ್ ಕುಟುಂಬ ಹೈರಾಣಾಗಿದ್ದೂ, ವಸತಿಯಲ್ಲಿರುವ ಪೊಲೀಸರ ಕೆಲ ಕುಟುಂಬ ಅನಾರೋಗ್ಯ ಪೀಡಿತರಾಗಿದ್ದು ದುಡಿದ ಸಂಬಳವೆಲ್ಲಾ ಆಸ್ಪತ್ರೆಗೆ ವ್ಯಯಿಸುವ ಸ್ಥಿತಿಗೆ ತಲುಪಿರುವ ಪೊಲೀಸರು. ಇತ್ತ ಕರ್ತವ್ಯದ ಚಿಂತೆ – ಅತ್ತ ಕುಟುಂಬದ ಅನಾರೋಗ್ಯ ಚಿಂತೆಯಿಂದ ಮಾನಸಿಕವಾಗಿ ಜರ್ಜಿತರಾದ ಪೊಲೀಸ್ ಇಲಾಖೆ.
ಈ ಬಗ್ಗೆ ನೂರಾರು ಬಾರಿ ಸಾಗರ ನಗರಸಭೆ ಆಡಳಿತ ಹಾಗೂ ಸಾಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಹರತಾಳು ಹಾಲಪ್ಪ ರವರಿಗೆ ಸಾಗರ ಪೊಲೀಸ್ ವಸತಿ ಗೃಹಗಳ ಸುತ್ತಮುತ್ತಲಿನ ಚರಂಡಿ ಅವ್ಯವಸ್ಥೆ ಬಗ್ಗೆ ಎಷ್ಟೇ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದೂ ಹೆಸರು ಹೇಳಲು ಇಚ್ಚಿಸದ ಪೊಲೀಸ್ ವಸತಿಯಲ್ಲಿ ವಾಸವಿದ್ದ ಹತ್ತಾರು ಪೊಲೀಸ್ ಇಲಾಖೆಯವರು ಮಾಧ್ಯಮ ಹೇಳಿಕೆ ನೀಡಿದ್ದೂ, ಸಮಾಜದ ರಕ್ಷಣೆಗಾಗಿ ತಮ್ಮ ಹಬ್ಬ ಹರಿದಿನ ದಿನ ನಿತ್ಯ ಒಂದಾರೊಂದು ಸಮಾಜದ ಅಹಿತಕರ ಘಟನೆಗಳಿಂದ ಕರ್ತವ್ಯದಲ್ಲೇ ತೊಡಗಿಸಿಕೊಂಡು ಕುಟುಂಬದ ಜೊತೆಗೆ ಸಮಯವನ್ನೇ ಕಳೆಯಲು ಅಸಹಾಯಕರಾದ ಪೊಲೀಸರ ವಸತಿ ಗೃಹಗಳ ಸುತ್ತಮುತ್ತಲಿನ ಚರಂಡಿಗಳು ಹಾಗೂ ಗಿಡ ಗಂಟಿಗಳನ್ನೂ ಸ್ಥಳೀಯ ಆಡಳಿತ ಹಾಗೂ ಸ್ಥಳೀಯ ಶಾಸಕರು ಇತ್ತ ಗಮನಹರಿಸದೇ ಇರುವುದು ಮಾನ್ಯ ಪೊಲೀಸ್ ಇಲಾಖೆಯವರಿಂದ ಬೇಸರಮೂಡಿರುವುದು ಕಾಲದ ವಿಪರ್ಯಾಸ….
ಇನ್ನಾದರೂ ಜನಪ್ರಿಯ ಅಭಿವೃದ್ಧಿ ಹರಿಕಾರ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪ ರವರು ಹಾಗೂ ಸ್ಥಳೀಯ ಆಡಳಿತವಾದ ಸಾಗರ ನಗರಸಭೆ ಆಡಳಿತ ಇತ್ತ ಗಮನಹರಿಸಿ ಪೊಲೀಸ್ ಇಲಾಖೆಯ ವಸತಿ ಗೃಹ ಸುತ್ತಮುತ್ತಲಿನ ವಾತಾವರಣ ಸುಂದರ – ಸ್ವಚ್ಛ ವಾತಾವರಣವಾಗಿಡುವಂತೆ ಕ್ರಮಕ್ಕೆ ಮುಂದಾಗುವರಾ ಕಾದು ನೋಡೋಣ.

ಗಣೇಶ್ ಪ್ರಸಾದ್ ನಗರಸಭೆ ಸದಸ್ಯರು…
#####################################
ವರದಿ:ಓಂಕಾರ ಎಸ್. ವಿ. ತಾಳಗುಪ್ಪ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305...