ಎಸ್. ಎಸ್. ಎಸ್. ಸಿ. ಪರೀಕ್ಷಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ ಆದೇಶ ಹೊರಡಿಸಿದ ಕರ್ನಾಟಕ ಸರ್ಕಾರ…!!
ಬೆಂಗಳೂರು:- ದಿನಾಂಕ 25/03/2022 ರಂದು ಕರ್ನಾಟಕ ಸರ್ಕಾರದ ಸಚಿವಾಲಯ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ನೆಡೆಯುವ ಎಸ್. ಎಸ್. ಎಲ್. ಸಿ. ಮುಖ್ಯ ಪರೀಕ್ಷೆಯು ದಿನಾಂಕ 28/03/2022 ರಿಂದ 11/04/2022 ರ ವರೆಗೆ ನೆಡೆಯುತ್ತಿದ್ದೂ ಪರೀಕ್ಷಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯವಾಗಿರುವ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದು, ವಸ್ತ್ರ ಸಂಹಿತೆ ಕುರಿತು ಸರ್ಕಾರದ ಆದೇಶ ಸಂಖ್ಯೆ :- ಇ ಪಿ 14 ಎಸ್ ಎಚ್ ಎಚ್ 2022 ದಿನಾಂಕ 05/02/2022 ಹಾಗೂ ಇದೇ ಸಮ ಸಂಖ್ಯೆಯ ತಿದ್ದುಪಡಿ /ಸೇರ್ಪಡೆ ಆದೇಶ ದಿನಾಂಕ 05/02/2022 ಕರ್ನಾಟಕ ಶಿಕ್ಷಣ ಕಾಯಿದೆ 1983 ಕಲಂ 133 ಉಪ ಕಂಡಿಕೆ (2) ಹಾಗೂ ಕಲಂ 7(1)(1), 7(2)(g)(v) ಮತ್ತು ಕರ್ನಾಟಕ ಶಿಕ್ಷಣ ಸಂಸ್ಥೆಗಳ (ವರ್ಗಿಕರಣ, ನಿಯಂತ್ರಣ,ಪಠ್ಯ ನಿಗದಿ ಪಡಿಸುವಿಕೆ,ಇತರೇ )ನಿಯಮಗಳು 1985 ರ ನಿಯಮ 11 ರಲ್ಲಿ ಪ್ರದತ್ತವಾಗಿರುವ ಅನ್ವಯ ಹಾಗೂ ಮಾನ್ಯ ಹೈ ಕೋರ್ಟ್ ಆದೇಶದ ಮೇರೆಗೆ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಪರೀಕ್ಷಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ ಎಂದು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.

ವರದಿ:ಓಂಕಾರ ಎಸ್. ವಿ. ತಾಳಗುಪ್ಪ….
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…