
ನಗರದ ಲಾಲ್ ಬಹುದ್ದೂರ್ ಶಾಸ್ತ್ರೀ . ಬಡಾವಣೆಯಲ್ಲಿ ಉದ್ಯಾನವನವನ್ನು ದತ್ತು ಪಡೆಯುವ ಕಾರ್ಯಕ್ರಮದಲ್ಲಿ. ಮಹಾನಗರ ಪಾಲಿಕೆ ಸದಸ್ಯರಾದ ವಿಶ್ವಾಸ್ ಅವರು ಕಾರ್ಯಕ್ರಮ ಉದ್ಘಾಟಿಸಿ ಜೆಸಿ ಸಂಸ್ಥೆಗಳಿಂದ ಸಮಾಜಮುಖಿ ಕಾರ್ಯಕ್ರಮ ಹೀಗೆ ಮುಂದುವರೆಯಲಿ ಉದ್ಯಾನವನದ ಅಭಿವೃದ್ಧಿ ನಿರಂತರವಾಗಿ ನಡೆಯಲಿ ಎಂದು ಶುಭಕೋರಿದರು. ಈ ಸಂದರ್ಭದಲ್ಲಿ ಜೆಸಿ ಎಂ. ಶ್ರೀಕಾಂತ್, ಜಿಲ್ಲಾ ನ್ಯಾಯಾಧೀಶರಾದ ಸೆಲ್ವ ಕುಮಾರ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಘಟಕದ ಜೆಸಿ ಸದಸ್ಯರು ಹಾಗೂ ನಾಗರೀಕರು. ಪಾಲ್ಗೊಂಡಿದ್ದರು ,
ಚೇಂಬರ್ ಆಫ್ ಕಾಮರ್ಸ್ ಆವರಣದಲ್ಲಿ ಹಮ್ಮಿಕೊಂಡಿದ್ದ ಮಂಗಳಮುಖಿಯರ ವಿಶೇಷ ಪರಿಚಯ ಅವರ ಸಂಸ್ಕೃತಿ ಹಾಗೂ ಅವರನ್ನು ಬಲಪಡಿಸುವ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ರಂಗಗಳಲ್ಲಿ ಭಾಗವಹಿಸಿ ಉತ್ತಮ ಸ್ಥಾನಕ್ಕೆ ತಲುಪಲು ಜೆಸಿಐ ಪಿಪಿಪಿ ಸವಿತಾ ರಮೇಶ್ ಅವರು ತಮ್ಮ ಭಾಷಣದ ಮೂಲಕ ಮಂಗಳಮುಖಿಯರ ಮನಸ್ಥೈರ್ಯವನ್ನು ಹೆಚ್ಚಿಸಿದರು.
ಜೆಸಿಐ ಶಿವಮೊಗ್ಗ ಶ್ರೀರಕ್ಷೆ ಹೊಸ ಘಟಕ ಅರ್ಜುನ್ ಪಂಡಿತ್ ಅಧ್ಯಕ್ಷತೆಯಲ್ಲಿ, ಮಂಜುನಾಥ್ ಕಾರ್ಯದರ್ಶಿಗಳಾಗಿ ಹಾಗೂ ನೂತನ ಜೆಸಿ ಸದಸ್ಯರಿಗೆ ಪ್ರಮಾಣವಚನ ಭೋದಿಸಲಾಯಿತು
ಜೆಸಿಐ ಶಿವಮೊಗ್ಗ ಶರಾವತಿ ಘಟಕದ. ಅಧ್ಯಕ್ಷರಾದ ಸೌಮ್ಯ ಅರಳಪ್ಪ ಮತ್ತು ಕಾರ್ಯದರ್ಶಿಗಳಾದ ಮಮತಾ ಶಿವಣ್ಣ, ವಲಯಾಧ್ಯಕ್ಷರಾದ ಜೆಸಿ ದೀಪಿಕಾ ಎನ್ ಬಿದರಿ, ನೋಮ್ ಕೋ-ಆರ್ಡಿನೇಟರ್ ಜೆಸಿಐ ಪಿಪಿಪಿ ಸವಿತಾ ರಮೇಶ್ , ವಲಯ ಉಪಾಧ್ಯಕ್ಷರಾದ ಜೆಸಿ.ಚೆನ್ನವೀರೇಶ್ ಹಾವಣಗಿ, ಮುಖ್ಯ ಅತಿಥಿಗಳಾದ ಜೆಸಿ ಎಂ ಶ್ರೀಕಾಂತ್, ಫೌಂಡರ್ ಪ್ರೆಸಿಡೆಂಟ್ ಜೆಸಿ ಜ್ಯೋತಿ ಅರಳಪ್ಪ, ಪೂರ್ವ ವಲಯ ನಿರ್ದೇಶಕರಾದ ಜೆಸಿ ಗಾರಾ.ಶ್ರೀನಿವಾಸ್, ಐಪಿಪಿ ಜೆಸಿ ಮೋಹನ್ ಹಾಗೂ ನಗರದ ಎಂಟು ಎಲ್.ಒ ಘಟಕಗಳ ಅಧ್ಯಕ್ಷರುಗಳು ಮತ್ತು ಜೆಸಿಐ ಶಿವಮೊಗ್ಗ ಶರಾವತಿ ಘಟಕದ ಎಲ್ಲಾ ಜೆಸಿಗಳು ಸೇರಿದಂತೆ ಮಂಗಳಮುಖಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಜೆಸಿಐ ನ ಎಲ್ಲಾ ಸದಸ್ಯರಿಗೂ ಪದಾಧಿಕಾರಿಗಳಿಗೂ ಧನ್ಯವಾದಗಳು.
*ಜೆಸಿ.ಸೌಮ್ಯ ಅರಳಪ್ಪ ಅಧ್ಯಕ್ಷರು, ಜೆಸಿ ಮಮತಾ ಶಿವಣ್ಣ. ಕಾರ್ಯದರ್ಶಿ.
ಜೆಸಿಐ ಶಿವಮೊಗ್ಗ ಶರಾವತಿ…
####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ: 9449553305..