
ಎಂ ಎ ನಟರಾಜ್ .
ಸಹಾಯಕ ಪೋಲಿಸ್ ಆಯುಕ್ತರು,
ಸಂಚಾರಿ ವಿಭಾಗ, ಮಂಗಳೂರು.
ಮಂಗಳೂರು: ಎಂ ಎ ನಟರಾಜ್ ಅವರಿಗೆ ಅವರ ಪೋಲಿಸ್ ಇಲಾಖೆಯಲ್ಲಿನ ಗುರುತರ ಸೇವೆಗಾಗಿ, ಮುಖ್ಯ ಮಂತ್ರಿ ಪದಕ ಗೌರವ ಸಿಕ್ಕಿರುವುದಕ್ಕೆ ಅವರ ಅಪಾರ ಸ್ನೇಹಿತರು, ಅಭಿಮಾನಿಗಳು, ಬಂಧುಗಳು, ಇಲಾಖಾ ಅಧಿಕಾರಿಗಳು ಶುಭ ಹಾರೈಸಿದ್ದಾರೆ…
ಎಂ, ಎ ನಟರಾಜ್ ಅವರು ತೀರ್ಥಹಳ್ಳಿ ತಾಲೂಕು ಕೋಣಂದೂರು ಸಮೀಪದ ಮಂಗಳದ ಅಣ್ಣಪ್ಪ ಗೌಡ ಮತ್ತು ಶ್ರೀಮತಿ ಕಮಲಮ್ಮ ರವರ ಪುತ್ರರಾಗಿದ್ದು,
ತಮ್ಮ ಸೇವಾವಧಿಯಲ್ಲಿ ಅತ್ಯುತ್ತಮ ಸೇವೆ ಮೂಲಕ ಪೋಲಿಸ್ ಇಲಾಖೆಯಲ್ಲಿ ಹೆಸರು ಮಾಡಿರುವ ಇವರು, ಶೃಂಗೇರಿ, ಸಾಗರ, ದಾವಣಗೆರೆ, ಚಿತ್ರದುರ್ಗ, ಬೆಂಗಳೂರು, ಮಂಗಳೂರಿನ ಸುರತ್ಕಲ್ ನಲ್ಲಿ PSI,CPI, ಆಗಿ ಸೇವೆ ಸಲ್ಲಿಸಿ,
ಅಪಾರ ಸಾರ್ವಜನಿಕ ಮನ್ನಣೆಗಳಿಸಿದ್ದರು,
ಅನೇಕ ಅಪರಾಧ ಪ್ರಕರಣಗಳನ್ನು ಭೇಧಿಸಿ, ಖಡಕ್ ಪೋಲಿಸ್ ಅಧಿಕಾರಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು..
ಜನರೊಂದಿಗೆ ಸರಳವಾಗಿ ಬೆರೆಯುವ ಮನೋಭಾವದ ಇವರು ಜನಸ್ನೇಹಿ ಪೋಲಿಸ್ ಆಗಿಯೂ ಹೆಸರು ಪಡೆದಿದ್ದು ಉಲ್ಲೇಖಾರ್ಹ ಮತ್ತು ಅಭಿನಂದನೀಯ..
ಪ್ರಸ್ತುತ ಮಂಗಳೂರಿನ ಸಂಚಾರಿ ವಿಭಾಗದ ಸಹಾಯಕ ಪೋಲಿಸ್ ಆಯುಕ್ತರಾಗಿ, ಸೇವೆ ಸಲ್ಲಿಸುತ್ತಿದ್ದು, ಸಂಚಾರಿ ವಿಭಾಗದ ಅನೇಕ ಸಮಸ್ಯೆಗಳನ್ನು ಪರಿಶೀಲಿಸಿ ಅವುಗಳಿಗೆ ಸುಧಾರಣೆ ತಂದು ಅನೇಕ ಬದಲಾವಣೆ, ಮಂಗಳೂರಿನಲ್ಲಿ ಹೊಸ ಬದಲಾವಣೆಗೆ ಮುನ್ನುಡಿ ಬರೆದಿದ್ದಾರೆ..
ಇಂತಹ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಶಿವಮೊಗ್ಗ ಜಿಲ್ಲೆಗೆ ಬಂದರೆ ಜಿಲ್ಲೆಯಲ್ಲಿ ನಡೆಯುತ್ತಿರುವ ಒಂದಷ್ಟು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬೀಳಬಹುದು…
####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…