
ಶಿವಮೊಗ್ಗ: ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಶಿವಮೊಗ್ಗ ಮೊದಲನೇ ಸ್ಥಾನದಲ್ಲಿ ಬರುವುದರಲ್ಲಿ ಯಾವುದೇ ಸಂಶಯವಿಲ್ಲ.
ಏಕೆಂದರೆ ಸ್ಮಾರ್ಟ್ ಸಿಟಿ ಕಾಮಗಾರಿ ಅಷ್ಟು ಸ್ಮಾರ್ಟಾಗಿ ನಡೆಯುತ್ತಿದೆ. ಈಗಾಗಲೇ ಹಲವಾರು ಅನಾಹುತಗಳನ್ನು ನೋಡಿರುವ ಶಿವಮೊಗ್ಗದ ಜನತೆಗೆ ಈಗ ಒಂದು ಹೊಸ ಸುದ್ದಿ ಕೋಟೆ ರಸ್ತೆಯ ಕೋರ್ಪಲಯ್ಯ ಛತ್ರದ ಬಳಿ ಪುರಾತನ ಕಾಲದಿಂದಿರುವ ಇರುವ ಅರಳಿ ಮರಕ್ಕೆ ಸ್ಮಾರ್ಟ್ ಸಿಟಿ ಕಾಮಗಾರಿ ಅವರು ಉಸಿರಾಡಲು ಬಿಡದೆ ಸುತ್ತಲೂ ಕಾಂಕ್ರೀಟ್ ಹಾಕಿ ಮುಚ್ಚಿರುವುದು ಇವರ ಸ್ಮಾರ್ಟ್ ಕಾಮಗಾರಿಯನ್ನು ತೋರಿಸುತ್ತದೆ.
ಸಾಮಾನ್ಯವಾಗಿ ಮರಗಳ ಸುತ್ತಲು ಕಾಂಕ್ರೀಟ್ ಹಾಕುವಾಗ ಮರಗಳ ಮಧ್ಯ ಜಾಗಬಿಟ್ಟು ಒಂದಷ್ಟು ಮಣ್ಣನ್ನು ಇಟ್ಟು ಸುತ್ತಲೂ ಕಟ್ಟೆ ಕಟ್ಟುತ್ತಾರೆ.
ಆದರೆ ಪುರಾತನ ಕಾಲದಿಂದಲೂ ಇರುವ ಜನರಿಗೆ ವೈಜ್ಞಾನಿಕವಾಗಿ ಉಸಿರಾಟಕ್ಕೆ ಅನುಕೂಲವಾಗುವ ಅರಳಿಮರಕ್ಕೆ ಸುತ್ತಲೂ ಜಾಗ ಬಿಡದೆ ಕಾಂಕ್ರೀಟ್ ನಿಂದ ನಿರ್ಮಾಣ ವಾಗಿರುವ ಕಟ್ಟಡ ಕಟ್ಟೆಕಟ್ಟಿ ಮರಕ್ಕೆ ಉಸಿರಾಟ ಕ್ರಿಯೆ ತೊಂದರೆ ಯಾಗುವಂತಹ ಮಹಾತ್ಕಾರ್ಯವನ್ನು ಸ್ಮಾರ್ಟ್ ಸಿಟಿ ಅಧಿಕಾರಿಗಳು ಮಾಡಿರುತ್ತಾರೆ .
ಕೂಡಲೇ ಸ್ಮಾರ್ಟ್ ಸಿಟಿ ಅಧಿಕಾರಿಗಳು ಗಂಭೀರವಾಗಿ ಗಮನಿಸಿ ತೆರವುಗೊಳಿಸಬೇಕು ಮುಂದೆ ಕೂಡ ಇಂತಹ ಕೆಲಸವನ್ನು ಮಾಡುವಾಗ ಜಾಗೃತಿ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಬೇಕು.
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…