
ಆತ್ಮೀಯ ವಿದ್ಯಾರ್ಥಿಗಳು ಪೋಷಕರು, ಹಿರಿಯ ವಿದ್ಯಾರ್ಥಿಗಳು ಮತ್ತು ಶಾಲಾಭಿಮಾನಿಗಳ ಗಮನಕ್ಕೆ ಕಾಳಿಂಗ ಫೌಂಡೇಶನ್ ಮತ್ತು ಚಿಟ್ಟೆವನ ನಿರ್ಮಾಣ ಸಂಸ್ಥೆ ಕಾಳಿಂಗಮನೆ ಇವರ ಸಹಯೋಗದೊಂದಿಗೆ ಶಾಲೆಯಲ್ಲಿ ದಿನಾಂಕ 04-04-2022 ರಿಂದ ಶಾಲೆಯಲ್ಲಿ ಬೆಂಗಳೂರಿನ ಖಾಸಗಿ ಶಾಲಾ ಹೆಸರಾಂತ ಸಂಪನ್ಮೂಲ ಬೋಧಕರಿಂದ ಉಚಿತ ಸ್ಪೋಕನ್ ಇಂಗ್ಲೀಷ್ ತರಗತಿ 20 ದಿನಗಳ ಕಾಲ ನಿರಂತರವಾಗಿ ಸಮಯ ಬೆಳಿಗ್ಗೆ 9ಗಂಟೆಯಿಂದ 12ಗಂಟೆಯ ವರೆಗೆ ನಡೆಯಲಿದ್ದು.
ಈ ಕಾರ್ಯಾಗಾರವನ್ನು ವಲಯ ಅರಣ್ಯ ಅಧಿಕಾರಿಗಳು ಮಧುಕುಮಾರ್ ಮತ್ತು DYSP ಶಾಂತವೀರ್ ಹಾಗೂ ಗೌರಿಶಂಕರ್, ಸಂಸ್ಥಾಪಕರು, ಕಾಳಿಂಗ ಮನೆ ಫೌಂಡೇಶನ್ ಗುಡ್ಡೇಕೇರಿ ಇವರುಗಳು ಉದ್ಘಾಟನೆಯನ್ನು ಮಾಡಲಿದ್ದಾರೆ ಎಲ್ಲಾ ಮಕ್ಕಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಈ ಮೂಲಕ ಕೋರಿದ್ದಾರೆ.

ಸ್ಥಳ:-ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಚಿಣ್ಣರ ಕಲರವ ವೇದಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನೇತಾಳು..
ವಿಶೇಷ ಸೂಚನೆ:-1ರಿಂದ 7ನೇ ತರಗತಿ ಮಕ್ಕಳು ಯಾವ ಶಾಲೆಯ ಮಕ್ಕಳು ಬೇಕಾದರೆ ಭಾಗವಹಿಸಬಹುದು, ಮುಂಚಿತವಾಗಿ ಹೆಸರನ್ನು ನೊಂದಾಯಿಸಲು ಸಂಪರ್ಕಿಸಿ:-8105239157
ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಕಲಿಕಾ ಹಿನ್ನಡೆಯನ್ನು ಅನುಭವಿಸುತ್ತಿದ್ದು ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಹಾಗೂ ಬೇಸಿಗೆ ರಜೆಯನ್ನು ಸದುಪಯೋಗ ಮಾಡುವ ನಿಟ್ಟಿನಲ್ಲಿ ಜೊತೆಗೆ ಅತೀ ಅಗತ್ಯ ಎನಿಸಿರುವ ಇಂಗ್ಲಿಷ್ ಕಲಿಕೆ ಗ್ರಾಮೀಣ ಮಕ್ಕಳು ಹಿನ್ನಡೆಯಲ್ಲಿ ಇಲ್ಲದೇ ಎಲ್ಲರೊಂದಿಗೂ ಸಮಾನ ಸ್ಪರ್ಧೆಯನ್ನು ಮಾಡುವಂತ ಕೌಶಲವನ್ನು ಹೊಂದುವ ಆಲೋಚನೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಿಮ್ಮ ಮಕ್ಕಳನ್ನು ಕರೆತಂದು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಿರಿ ಎಂದು ಶಾಲಾ ಶಿಕ್ಷಕವೃಂದ ಮತ್ತು ಶಾಲಾ SDMC, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನೇತಾಳು ಇವರ ವತಿಯಿಂದ ಆತ್ಮೀಯ ಆಮಂತ್ರಣ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…