ಶಿವಮೊಗ್ಗ: ನಗರದ ಹೊರವಲಯದ ಸೋಗಾನೆ ಯಲ್ಲಿ ನೂತನವಾಗಿ ನಿರ್ಮಾಣದ ಹಂತದಲ್ಲಿರುವ ಇನ್ನೇನು ಕೆಲವೇ ತಿಂಗಳಲ್ಲಿ ಕೆಲಸ ಮುಗಿದು ಲೋಕಾರ್ಪಣೆಗೊಳ್ಳುವ ನೂತನ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಹೆಸರು ಇಡಲಾಗುವುದು.
ಈ ಸಂಬಂಧ ಈಗಾಗಲೇ ಸಂಪುಟ ತಿರ್ಮಾನ ತೆಗೆದುಕೊಂಡಿದೆ ಕೇಂದ್ರ ಸರ್ಕಾರಕ್ಕೆ ಕಳಿಸಿ ಕೊಳ್ಳಲಾಗುವುದು ಎಂದು ಶಿವಮೊಗ್ಗಕ್ಕೆ ಆಗಮಿಸಿ ವಿಮಾನನಿಲ್ದಾಣವನ್ನು ವೀಕ್ಷಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಘೋಷಿಸಿದ್ದರು.
ಹಲವರ ವಿರೋಧ:
ಇದಾದ ನಂತರ ಹಲವು ಸಂಘ ಸಂಸ್ಥೆಗಳು, ಸಂಘಟನೆಗಳು, ವಿವಿಧ ಪಕ್ಷಗಳು ಯಾವುದೇ ರಾಜಕಾರಣಿಗಳ ಹೆಸರುಗಳನ್ನು ಇಡಬಾರದು. ಬದಲು ಕರ್ನಾಟಕದ ಕೀರ್ತಿಯನ್ನು ಇಡೀ ರಾಷ್ಟ್ರಕ್ಕೆ ಮನವರಿಕೆ ಮಾಡಿಕೊಟ್ಟಂತಹ ಕುವೆಂಪುರಂತಹ ಮಹಾನ್ ಚೇತನಗಳ ಹೆಸರಿಡಬೇಕೆಂದು ಆಗ್ರಹಿಸಿದರು.
ನನ್ನ ಹೆಸರು ಬೇಡ ನಾಡಿಗೆ ರಾಷ್ಟ್ರಕ್ಕೆ ಹೆಸರು ತಂದುಕೊಟ್ಟಂತಹ ಮಹಾನ್ ಚೇತನಗಳ ಹೆಸರಿಡಿ ಎಂದು ಮನವಿ ಮಾಡಿಕೊಂಡ ಬಿಎಸ್ವೈ:

ಈ ಮೂಲಕ ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ನೂತನವಾಗಿ ಲೋಕರ್ಪಣೆ ಯಾಗುವ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಬೇಡ ಅದರ ಬದಲು ನಾಡಿಗೆ ರಾಷ್ಟ್ರಕ್ಕೆ ಹಿರಿಮೆ ತಂದುಕೊಟ್ಟಂತಹ ಮಹನೀಯರ ಹೆಸರಿಡಿ ಎಂದು ಕೋರಿಕೊಂಡಿದ್ದಾರೆ.
ತನ್ನ ಹೆಸರು ಬೇಡವೆಂದು ದೊಡ್ಡತನ ಮೆರೆದ ಬಿಎಸ್ವೈ:
ಇಡೀ ಸಚಿವ ಸಂಪುಟದ ಒಪ್ಪಿಗೆ ಸೂಚಿಸಿದ್ದರು ಸ್ವತಃ ಮುಖ್ಯಮಂತ್ರಿಗಳೇ ಘೋಷಣೆ ಮಾಡಿದ್ದರು ಕೂಡ ಬಿಎಸ್ವೈ ನನ್ನ ಹೆಸರು ಬೇಡ ಮಹನೀಯರ ಹೆಸರಿಡಿ ಎಂದು ಕೋರಿ ಕೊಂಡಿರುವುದು ಅವರ ದೊಡ್ಡತನಕ್ಕೆ ಸಾಕ್ಷಿಯಾಗಿದೆ.
ರಾಜ್ಯ ಸರ್ಕಾರ ಬಿಎಸ್ವೈ ಮಾತಿಗೆ ಬೆಲೆ ಕೊಟ್ಟು ಹೆಸರು ಬದಲಾಯಿಸುತ್ತಾ?
ಸ್ವತಃ ಬಿಎಸ್ವೈ ಅವರೇ ತನ್ನ ಹೆಸರು ಬೇಡ ಎಂದಿರುವುದರಿಂದ ಸರ್ಕಾರ ಪುನಃ ಪರಶೀಲನೆ ನಡೆಸಿ ನಾಡಿನ ಕೀರ್ತಿಯನ್ನು ರಾಷ್ಟ್ರಕ್ಕೆ ಮನವರಿಕೆ ಮಾಡಿಕೊಟ್ಟಂತಹ ಕುವೆಂಪುರಂತಹ ದಿಗ್ಗಜರ ಹೆಸರನ್ನು ಇಟ್ಟು ತಮ್ಮ ಘನತೆಯನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಉಳಿದವರ ಭಾವನೆಗಳಿಗೂ ಬೆಲೆ ಕೊಡುತ್ತಾ ಕಾದುನೋಡಬೇಕು..
ರಘುರಾಜ್ ಹೆಚ್, ಕೆ…
#####################################ಸುದ್ದಿ ನೀಡಲು ಸಂಪರ್ಕಿಸಿ:9449553305…