
ಹರಿಹರ ತಾಲೂಕಿನ ಹನಗವಾಡಿ ಅಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವ ಎನ್ ,ರೂಪಾ ಎಂಬ ಯುವತಿ ಅಂಗವಿಕಲಯಾಗಿದ್ದು ಕೊಂಡೆ, ದುಡಿಯುವುದರ ಜೊತೆಗೆ ಕ್ರೀಡೆಯಲ್ಲೂ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಅದ್ಭುತ ಸಾಧನೆಗೈದ ಮಹಿಳೆಗೆ ಇಂದು ಹರಿಹರದ ಶಾಸಕ ಎಸ್ ,ರಾಮಪ್ಪನವರು ಕರೆಸಿ ಸನ್ಮಾನ ಮಾಡಿ ನಿರಂತರವಾಗಿ ನಿಮ್ಮ ಬೆಳವಣಿಗೆ ಹೀಗೆ ಸಾಗಲಿ ಎಂದು ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಸ್ ರಾಮಪ್ಪ, ಮಾಜಿ ಎಂಎಲ್ಸಿ ಅಬ್ದುಲ್ ಜಬ್ಬರ್, ಶಾಸಕರ ಆಪ್ತ ಸಹಾಯಕರಾದ ಮಹಾಂತೇಶ್, ಹಿರಿಯ ಪತ್ರಕರ್ತರಾದ ವೈ ,ನಾಗರಾಜ್, ಕಾಂಗ್ರೆಸ್ಸಿನ ಕಾರ್ಯಕರ್ತರಾದ ಭಾಷಾ ಹಾಜರಿದ್ದರು.ಈ ಸಮಯದಲ್ಲಿ ಪತ್ರಿಕೆ ಜೊತೆ ತನ್ನ ಅನುಭವವನ್ನು ಹಂಚಿಕೊಂಡ ರೂಪಾ ಅವರು ತಮ್ಮ ಸಾಧನೆಯ ವಿವರಗಳನ್ನು ನೀಡಿದರು. 1)ಕೊಯಿಮುತ್ತುರ್ ನಲ್ಲಿ ಸಿಟ್ಟಿಂಗ್ ವಾಲಿಬಾಲ್ ನಲ್ಲಿ ಎರಡನೇ ಪ್ರಶಸ್ತಿ,2) ಮಂಡ್ಯದಲ್ಲಿ ನಡೆದ ಕ್ರೀಡೆಯಲ್ಲಿ ಮೊದಲನೇ ಪ್ರಶಸ್ತಿ, 3) ತಮಿಳುನಾಡಿನಲ್ಲಿ ಮೂರನೇ ಪ್ರಶಸ್ತಿ, 4) ದೆಹಲಿಯಲ್ಲಿ ನಡೆದ ಕ್ರೀಡೆಯಲ್ಲಿ ಎರಡನೇ ಪ್ರಶಸ್ತಿ, 5) ಬೆಳಗಾಂ ನಲ್ಲಿ ಮೂರನೇ ಪ್ರಶಸ್ತಿ ತನ್ನ ಮುಡಿಗೇರಿಸಿಕೊಂಡ ಈ ಅದ್ಭುತ ಅಂಗವಿಕಲ ಮಹಿಳೆಗೆ ಇನ್ನಷ್ಟು ಪ್ರಶಸ್ತಿ-ಪುರಸ್ಕಾರಗಳು ಸಲ್ಲಲಿ ಹಾಗೆ ತಾನು ಮಾಡುತ್ತಿರುವ ವೃತ್ತಿಯಲ್ಲಿ ಕಾಯಂ ನೌಕರರ ಆಗಿ ಮುಂದುವರಿಯಲಿ. ಎನ್ನುವುದು ಪತ್ರಿಕೆ ಆಶಯ ಕೂಡ ಹೌದು….(ರಘುರಾಜ್ ಹೆಚ್, ಕೆ)…