
ತೀರ್ಥಹಳ್ಳಿ: ತಾಲೂಕಿನಲ್ಲಿ ಒಂದು ಅಮಾನವೀಯ ಘಟನೆ ನಡೆದಿದ್ದು. ಆಶಾ ಕಾರ್ಯಕರ್ತೆಯ ಒಬ್ಬಳ ಕೈ ಮುರಿದ ಆರೋಪಿಯನ್ನು ಬಂದಿಸಿ ಜೈಲಿಗೆ ಕಳಿಸ ಬೇಕಾಗಿದ್ದ ಪೊಲೀಸರು ಆರೋಪಿಯನ್ನು ಓಡಾಡಲು ಬಿಟ್ಟಿರುವುದು ಎಷ್ಟು ಸರಿ?
ಘಟನೆಯ ಹಿನ್ನೆಲೆ:
ತಾಲೂಕಿನ ಕನ್ನಂಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವ ಲಕ್ಷ್ಮಿ ಎಂಬ ಮಹಿಳೆಯ ಗಂಡ ಶ್ರೀಧರ್ ಎಂಬಾತನು ಆಯನೂರಿನಲ್ಲಿ ಹೋಟೆಲೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ. ಈತ ಪ್ರತಿನಿತ್ಯ ಕೆಲಸ ಮುಗಿಸಿ ಬಸವನಗದ್ದೆಯ ಮನೆಗೆ ಓಡಾಡುತ್ತಾನೆ. ಬರುವಾಗ ಕುಡಿಯುವ ಅಭ್ಯಾಸ ಇರುವ ಈತ ಹಣಗೇರಿ ಕಟ್ಟೆಯಲ್ಲಿ ಅನಧಿಕೃತವಾಗಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ದಿವಾಕರ ಎಂಬುವ ವ್ಯಕ್ತಿಯ ಹತ್ತಿರ ಮಧ್ಯ ಕುಡಿದು ಬರುವುದು ರೂಢಿ ಇದೇ ರೀತಿ ಮೊನ್ನೆ ಅಂದರೆ 30ನೇ ತಾರೀಕು ರಾತ್ರಿ ಹತ್ತು ಗಂಟೆ ಸುಮಾರಿಗೆ ಹಣಗೆರಿ ಕಟ್ಟೆಯ ದಿವಾಕರನ ಮನೆಗೆ ಅಕ್ರಮ ಮದ್ಯ ಕುಡಿಯಲು ಬಂದಿದ್ದಾನೆ.
ಮಧ್ಯ ಕುಡಿಯುವ ಮೊದಲು ಮೂತ್ರ ವಿಸರ್ಜನೆ ಮಾಡಿದ ಶ್ರೀಧರ:
ಅಕ್ರಮ ಮದ್ಯ ಕುಡಿಯಲು ಹಣ ಗೇರಿ ಕಟ್ಟೆಯ ದಿವಾಕರನ ಮನೆಯ ಹತ್ತಿರ ಬಂದ ಶ್ರೀಧರ ಮಧ್ಯ ಕುಡಿಯುವ ಮೊದಲು ಶ್ರೀಧರನ ಮನೆಯ ಹತ್ತಿರ ಸ್ವಲ್ಪ ಮುಂದೆ ಮೂತ್ರ ವಿಸರ್ಜನೆ ಮಾಡುತ್ತಾ ನಿಂತಿರುತ್ತಾನೆ. ಇದನ್ನು ಗಮನಿಸಿದ ದಿವಾಕರ ಏಕಾಏಕಿ ಹಿಂದಿನಿಂದ ಬಂದು ಶ್ರೀಧರನಿಗೆ ಹೂಡೆಯುತ್ತಾನೆ. ಇದನ್ನು ಪ್ರಶ್ನಿಸಿದ ಶ್ರೀಧರನಿಗೆ ಮೃಗದ ರೀತಿ ಮೈಯನ್ನೆಲ್ಲ ಪರಿಚಿ, ಯಾರು ಬಿಡಿಸಿಕೊಳ್ಳಲು ಬಂದರೂ ಅವರನ್ನು ಎದುರಿಸಿ ಹಿಂಸಿಸುತ್ತಾನೆ. ಅಕ್ರಮ ಮದ್ಯ ಮಾರಾಟ ಮಾಡುವುದರ ಜೊತೆಗೆ ಸ್ವತಃ ಕುಡುಕ ನಾಗಿರುವ ದಿವಾಕರನಿಗೆ ಕುಡಿದ ಮತ್ತಿನಲ್ಲಿ ಏನು ಮಾಡುತ್ತಿದ್ದೇನೆ ಎನ್ನುವ ಅರಿವಿಲ್ಲದೆ ತನ್ನ ದಿನನಿತ್ಯದ ಗಿರಾಕಿ ಎನ್ನುವುದನ್ನು ಮರೆತು ಹೂಡೆಯುತ್ತಾನೆ.
ಗಂಡನನ್ನು ಹೊಡೆದಿದ್ದಕ್ಕೆ ಪ್ರಶ್ನಿಸಲು ಬಂದ ಆಶಾ ಕಾರ್ಯಕರ್ತೆ ಹಾಗೂ ಆಕೆಯ ತಮ್ಮನ ಮೇಲೆ ಹಲ್ಲೆ:
ದಿವಾಕರ ನಿಂದ ಹೊಡೆತ ತಿಂದ ಶ್ರೀಧರ ಸೀದಾ ಮನೆಗೆ ಹೋಗಿ ಆಶಾ ಕಾರ್ಯಕರ್ತೆ ಯಾಗಿರುವ ತನ್ನ ಮಡದಿ ಲಕ್ಷ್ಮಿಗೆ ವಿಷಯ ತಿಳಿಸುತ್ತಾನೆ.
ಶ್ರೀಧರನ ಮಡದಿ ಆಶಾ ಕಾರ್ಯಕರ್ತೆ ಲಕ್ಷ್ಮಿ ಹಾಗೂ ಆಕೆಯ ತಮ್ಮ ದಿವಾಕರನ ಮನೆಗೆ ರಾತ್ರಿ ಹತ್ತು ಮೂವತ್ತರ ಸುಮಾರಿಗೆ ಹೋಗಿ ಏಕೆ ನನ್ನ ಗಂಡನನ್ನು ಹೊಡೆದೆ ಎಂದು ಪ್ರಶ್ನಿಸುತ್ತಾರೆ? ಇದನ್ನು ಕೇಳಿ ಕೆಂಡಮಂಡಲ ವಾದ ದಿವಾಕರ ಕುಡಿದ ಮತ್ತಿನಲ್ಲಿ ಲಕ್ಷ್ಮಿಗೆ ಹೀನಾಯವಾಗಿ ಬೈದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಹೆಣ್ಣು ಎಂದು ನೋಡದೆ ಕ್ರಿಕೆಟ್ ಬ್ಯಾಟಿಂಗ್ ನಲ್ಲಿ ತಲೆಗೆ ಹೊಡೆಯಲು ಮುಂದಾಗುತ್ತಾನೆ. ಇದನ್ನು ತಪ್ಪಿಸಿಕೊಳ್ಳಲು ಯತ್ನಿಸಿ ಕೈಕೊಟ್ಟ ಲಕ್ಷ್ಮಿಗೆ ಕೈ ಮುರಿಯುತ್ತದೆ . ದಿವಾಕರ ಆತನ ಹೆಂಡತಿ ಲತಾ ಹಾಗೂ ಮಗಳು ಅಪೇಕ್ಷ ಮೂರು ಜನ ಸೇರಿ ಶ್ರೀಧರನ ಹೆಂಡತಿ ಲಕ್ಷ್ಮಿ ಹಾಗೂ ಆಕೆಯ ತಮ್ಮನಿಗೆ ಹೊಡೆದು ಬೈದು ನಿಂದಿಸುತ್ತಾರೆ.
ನಂತರ ಆಶಾ ಕಾರ್ಯಕರ್ತೆ ಲಕ್ಷ್ಮಿ ತೀರ್ಥಹಳ್ಳಿ ಆಸ್ಪತ್ರೆಗೆ ಹೋಗಿ ವೈದ್ಯರ ಶಿಫಾರಸ್ಸಿನ ಮೇರೆಗೆ ಅಲ್ಲಿಂದ ಮೇಗನ್ ಆಸ್ಪತ್ರೆಗೆ ಹೋಗುತ್ತಾಳೆ:
ತೀವ್ರತರದ ಹೊಡೆತ ಬಿದ್ದಿದ್ದರಿಂದ ಕೈ ಫ್ಯಾಕ್ಚರ್ ಆಗಿದ್ದು ಆಶಾ ಕಾರ್ಯಕರ್ತೆ ಲಕ್ಷ್ಮಿಯ ಕೈಗೆ ಬ್ಯಾಂಡೇಜ್ ಹಾಕಲಾಗಿದೆ. ಕನಿಷ್ಠ ಆಕೆ ಇನ್ನೊಂದು ತಿಂಗಳು ಕಾರ್ಯನಿರ್ವಹಿಸುವಂತೆ ಇಲ್ಲ.
ಇತ್ತ ಗಂಡನಿಗೂ ಹೊಡೆತ, ತನಗೂ ಕೈ ಮುರಿತ , ತಮ್ಮನಿಗೂ ಹೊಡೆತ, ಇವೆಲ್ಲವನ್ನೂ ಇಟ್ಟುಕೊಂಡು ದಿವಾಕರ ಆತನ ಪತ್ನಿ ಮಗಳ ವಿರುದ್ಧ ದೂರು ನೀಡಲು ಸ್ಥಳೀಯ ಠಾಣೆ ಮಾಲೂರಿಗೆ ತೆರಳುತ್ತಾರೆ.
ಆಶಾ ಕಾರ್ಯಕರ್ತೆ ಕುಟುಂಬಕ್ಕೆ ಸ್ಪಂದಿಸದ ಮಾಲೂರು ಠಾಣೆಯ ಪೋಲಿಸರು:
ದೂರು ನೀಡಲು ಠಾಣೆಗೆ ಹೋದ ಆಶಾ ಕಾರ್ಯಕರ್ತೆ ಲಕ್ಷ್ಮಿ ಹಾಗೂ ಕುಟುಂಬಕ್ಕೆ ಮಾಳೂರು ಠಾಣೆಯ ಪೊಲೀಸರು ಸರಿಯಾಗಿ ದೂರನ್ನು ದಾಖಲಿಸಿ ಕೊಳ್ಳದೆ ವಿನಾಕಾರಣ ಕಾಲಹರಣ ಮಾಡಿದ್ದಾರೆ. ನಂತರ ಸತಾಯಿಸಿ ದೂರು ದಾಖಲಿಸಿದ್ದಾರೆ. ಆದರೆ ಆರೋಪಿಯನ್ನು ಬಂಧಿಸಿಲ್ಲ ಕ್ರಮ ತೆಗೆದುಕೊಂಡಿಲ್ಲ. ಬದಲಿಗೆ ಆರಾಮಾಗಿ ಓಡಾಡಿಕೊಂಡು ಬಿಟ್ಟಿರುವುದು ಎಷ್ಟು ಸರಿ? ಹಲವು ಅನುಮಾನಗಳನ್ನು ಮೂಡಿಸುತ್ತದೆ ಪೊಲೀಸರ ಈ ನಡೆ.
ರಾಜಿಗೆ ಒಪ್ಪದ ಲಕ್ಷ್ಮಿ ಕುಟುಂಬ:
ಒಂದು ಹಂತದಲ್ಲಿ ಇನ್ನೇನು ರಾಜಿಯಾಗಿ ಬಿಡೋಣ ಒಂದಷ್ಟು ಹಣ ತೆಗೆದುಕೊಂಡು ಎಂದು ಮನಸ್ಸು ಮಾಡಿದ ಲಕ್ಷ್ಮಿ ಕುಟುಂಬಕ್ಕೆ ಇವರು ಕೇಳಿದ ಹಣ ಕೊಡದಿದ್ದ ಸಮಯದಲ್ಲಿ, ನಾವು ರಾಜಿಯಾಗುವ ಪ್ರಶ್ನೆಯೇ ಇಲ್ಲ ನಮಗೆ ತೊಂದರೆಯಾಗಿದೆ ಹಾಗೂ ಅಕ್ರಮ ಮದ್ಯ ಮಾರಾಟ ಹೆಚ್ಚಳವಾಗಿದೆ. ಅದು ನಿಯಂತ್ರಣ ವಾಗಬೇಕು. ಹೆಣ್ಣು ಎಂಬುವದನ್ನು ನೋಡದೆ ಮೃಗದಂತೆ ವರ್ತಿಸಿರುವ ಆತನಿಗೆ ಶಿಕ್ಷೆ ವಿಧಿಸಬೇಕು ಎನ್ನುವ ಮಾತುಗಳನ್ನು ಪತ್ರಿಕೆ ಜೊತೆ ಹಂಚಿಕೊಂಡಿದ್ದಾರೆ.
ರಾಜಿಯಾಗಲು ಒಪ್ಪದಿದ್ದಾಗ ಕೂಡಲೇ ಕೌಂಟರ್ ಕಂಪ್ಲೇಂಟ್ ಕೊಟ್ಟ ದಿವಾಕರ್ ಕುಟುಂಬ:
ಯಾವಾಗ ಆಶಾ ಕಾರ್ಯಕರ್ತೆ ಲಕ್ಷ್ಮಿ ಕುಟುಂಬ ರಾಜಿಯಾಗಲು ಒಪ್ಪಲಿಲ್ಲ ವೋ? ಅಕ್ರಮ ಮದ್ಯ ಮಾರಾಟ ಗಾರ ದಿವಾಕರನ ಕುಟುಂಬ ನಮ್ಮ ಮೇಲೆ ಹಲ್ಲೆಯಾಗಿದೆ. ಕ್ರಮ ತೆಗೆದುಕೊಳ್ಳಬೇಕು ಎಂದು ಮಾಲೂರು ಠಾಣೆಯಲ್ಲಿ ಕೌಂಟರ್ ಕಂಪ್ಲೇಂಟನ್ನು ಲಕ್ಷ್ಮಿ ಕುಟುಂಬದ ಮೇಲೆ ನೀಡಿದ್ದಾನೆ.
ಆಶಾ ಕಾರ್ಯಕರ್ತೆಯ ಕೈ ಮುರಿದರು ಕ್ರಮ ತೆಗೆದುಕೊಳ್ಳದ ಮಾಳೂರು ಠಾಣೆಯ ಸಿಬ್ಬಂದಿ ಗಳು:
ತಾಲೂಕಿನ ಮಾಲೂರು ಪೊಲೀಸ್ ಠಾಣೆ ಒಂದಲ್ಲ ಒಂದು ವಿಷಯಗಳಿಗೆ ವಿವಾದ ಆಗುತ್ತಲೇ ಇರುತ್ತದೆ. ಈಗ ಹೊಸ ವಿವಾದ ಹುಟ್ಟಿಕೊಂಡಿದೆ. ಆಶಾ ಕಾರ್ಯಕರ್ತೆಯ ಕೈ ಮುರಿದರು ಕ್ರಮ ತೆಗೆದುಕೊಳ್ಳದೆ ಆರೋಪಿಯನ್ನು ಓಡಾಡಲು ಬಿಟ್ಟಿರುವುದು ಎಷ್ಟು ಸರಿ? ಅಕ್ರಮ ಮದ್ಯ ಮಾರಾಟಕ್ಕೆ ಮಾಳೂರು ಠಾಣೆಯ ಪೊಲೀಸರ ಕುಮ್ಮಕ್ಕು ಇದೆಯಾ? ಆಶಾ ಕಾರ್ಯಕರ್ತೆಯ ಕೈ ಮುರಿದಿರುವ ದಿವಾಕರನ ವಿರುದ್ಧ ಯಾವ ಸೆಕ್ಷನ್ ಗಳನ್ನು ಹಾಕಿದ್ದೀರಾ? ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ದಿವಾಕರನಿಗೆ ಯಾವ ಸೆಕ್ಷನ್ ಹಾಕಿದ್ದೀರಾ? ಒಬ್ಬ ಮಹಿಳೆಯ ಮೇಲೂ ಕೈ ಮುರಿಯುವ ಹಾಗೆ ಹಲ್ಲೇ ಮಾಡಿ ಒಬ್ಬ ಆರೋಪಿ ಆರಾಮಾಗಿ ಓಡಾಡಿಕೊಂಡು ಇರಬಹುದಾ? ಮೊದಲೇ ಮಾಲೂರು ಪೊಲೀಸ್ ಠಾಣೆಗೆ ಒಂದಿಲ್ಲ ಒಂದು ವಿವಾದಗಳು ಸುತ್ತಿಕೊಳ್ಳುತ್ತದೆ ಇರುತ್ತವೆ. ಅಷ್ಟಾದರೂ ಮತ್ತೆ ಏಕೆ ಇತರ ವರ್ತನೆ ಮಾಡುತ್ತಿದ್ದೀರಾ?
ದಕ್ಷ ಪ್ರಾಮಾಣಿಕ ಅಧಿಕಾರಿ ನವೀನ್ ಅವರ ಗಮನಕ್ಕೆ:
ಹಿಂದೆ ಇದ್ದ ಇನ್ಸ್ಪೆಕ್ಟರ್ ಅಕ್ರಮ ಮರಳು ಮಾಫಿಯಾದಲ್ಲಿ ಕೈಜೋಡಿಸಿ ಅಮಾನತ್ತುಗೊಂಡ ನಂತರ ಅವರ ಸ್ಥಾನಕ್ಕೆ ಬಂದಿರುವ ನವೀನ್ ಮಠಪತಿ ಅವರು ಇಲ್ಲಿಯವರೆಗೂ ಹೆಸರು ಕೆಡಿಸಿಕೊಂಡಿಲ್ಲ, ಕೂಡಲೇ ಅವರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು. ಆರೋಪಿಯನ್ನು ಬಂಧಿಸಿ ಕ್ರಮ ತೆಗೆದುಕೊಳ್ಳಲಿ ಹಾಗೆ ಮಾಳೂರು ಠಾಣೆಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲಿ ಇಲ್ಲವಾದಲ್ಲಿ ಇನ್ನೊಂದಷ್ಟು ಈ ತರದ ಪ್ರಕರಣಗಳು ಬರುವುದರಲ್ಲಿ ಸಂಶಯವಿಲ್ಲ.
ಹಣಗೇರಿ ಗ್ರಾಮ ಪಂಚಾಯಿತಿ ನಡುವಳಿ ಮಾಡಿ ಅಕ್ರಮ ಮದ್ಯ ಮಾರಾಟವನ್ನು ಬಂದ್ ಮಾಡಿ ಎಂದಿದ್ದರು ಕ್ರಮ ತೆಗೆದುಕೊಳ್ಳದ ಅಬಕಾರಿ ಅಧಿಕಾರಿಗಳು:
ಹಣಗೆರೆ ಗ್ರಾಮ ಪಂಚಾಯಿತಿ ಹಣಗೇರಿ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ನಡುವಳಿ ಮಾಡಿ ಕ್ರಮ ತೆಗೆದುಕೊಳ್ಳಿ ಎಂದು ಅಬಕಾರಿ ಅಧಿಕಾರಿಗಳಿಗೆ ಪತ್ರ ಬರೆದರು ಏನು ಕ್ರಮ ತೆಗೆದುಕೊಳ್ಳದ ಅಬಕಾರಿ ಅಧಿಕಾರಿಗಳು. ಲಂಚದ ಆಸೆಗೆ ಬಿದ್ದು ಮಧ್ಯ ಮಾರಾಟಕ್ಕೆ ಬಿಟ್ಟಿದ್ದಾರೆ.
ತಮ್ಮ ಜೀವದ ಹಂಗನ್ನು ತೊರೆದು ಕಾರ್ಯ ನಿರ್ವಹಿಸಿದವರಿಗೆ ಇದೇನಾ ಗೌರವ?
ಕೋವಿಡ್ ನಂತಹ ಭೀಕರ ಪರಿಸ್ಥಿತಿಯಲ್ಲಿ ತಮ್ಮ ಜೀವದ ಹಂಗನ್ನು ತೊರೆದು ಕಾರ್ಯನಿರ್ವಹಿಸಿದ ಆಶಾ ಕಾರ್ಯಕರ್ತರಿಗೆ ಒಬ್ಬ ಅಕ್ರಮ ಮದ್ಯ ಮಾರಾಟಗಾರ ಕೈ ಮುರಿದರು ಕ್ರಮ ತೆಗೆದುಕೊಳ್ಳದೆ ಇರುವುದು ಎಷ್ಟರ ಮಟ್ಟಿಗೆ ಸರಿ? ಕೂಡಲೇ
ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಂಡು ಅಕ್ರಮ ಮದ್ಯವನ್ನು ನಿಲ್ಲಿಸುವುದರ ಜೊತೆಗೆ ಆಶಾ ಕಾರ್ಯಕರ್ತ ಮೇಲೆ ಕೈ ಮುರಿಯುವ ಹಾಗೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುವ ದಿವಾಕರ ನನ್ನು ಬಂಧಿಸಿ ಜೈಲಿಗೆ ಕಳಿಸಬೇಕು ಎನ್ನುವುದು ಸ್ಥಳೀಯರ ಆಗ್ರಹ….
ರಘುರಾಜ್ ಹೆಚ್. ಕೆ….
######################₹₹#########₹₹₹₹₹₹
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…