
ಮಾಸೂರು:- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ವಿಧಾನಸಭಾ ಕ್ಷೇತ್ರದ ಮಾಸೂರು ಗ್ರಾಮ ಪಂಚಾಯಿತಿ ಮಜಿರೆ ಗ್ರಾಮವಾದ ಮನೆಘಟ್ಟ ನಿವಾಸಿಯಾದ ಶ್ರೀಮತಿ ರೇಣುಕಮ್ಮ ಕೋಂ ಚೌಡಪ್ಪ ಎಂಬುವವರು ಮಾಸೂರು ಗ್ರಾಮ ಪಂಚಾಯಿತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸುಮಾರು 15 ವರ್ಷದ ಹಿಂದೇ ಅಪೂರ್ಣಗೊಂಡ ಸುಮಾರು 70 ಅಡಿ ಆಳದ ಬಾವಿಗೆ ಕೈಪಿಡಿ ನಿರ್ಮಿಸದ ಬಾವಿಗೆ ಕುಡಿಯಲು ನೀರು ತರಲು ಹೋದಾಗ ಕಾಲು ಜಾರಿ ಬಾವಿಗೆ ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣ ಹಾನಿಯಾಗದೇ ಕಾಲು ಮುರಿದುಕೊಂಡಿದ್ದೂ ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳೀಯ ನಿವಾಸಿಗಳು ಈ ಬಾವಿಗೆ ಕೈಪಿಡಿ ನಿರ್ಮಿಸಿ ಕೊಡುವಂತೆ ಲಿಖಿತವಾಗಿ ಹಾಗೂ ಮೌಖಿಕವಾಗಿ ಎಷ್ಟೇ ಮನವಿ ಸಲ್ಲಿಸಿದರೂ ಸಂಬಂಧ ಪಟ್ಟ ಮಾಸೂರು ಗ್ರಾಮ ಪಂಚಾಯಿತಿ ಅಧಿಕಾರಿಗಳಾಗಲಿ, ಚುನಾಯಿತ ಜನಪ್ರತಿನಿಧಿಗಳಾಗಲಿ ಇತ್ತ ಗಮನಹರಿಸದೇ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಸಂಬಂಧ ಪಟ್ಟ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾಪಂಚಾಯತ್ ಶಿವಮೊಗ್ಗ ರವರು ಮುಂದೊಂದು ಅನಾಹುತ ಸಂಭವಿಸುವುದಕ್ಕೂ ಮುನ್ನವೇ ತೆರೆದ ಬಾವಿಗೆ ಕೈ ಪಿಡಿ ನಿರ್ಮಿಸಿ, ಈ ಅನಾಹುತಕ್ಕೆ ಕಾರಣರಾದವರ ವಿರುದ್ಧ ತನಿಖೆ ನೆಡೆಸಿ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ
✒️ಓಂಕಾರ ಎಸ್. ವಿ. ತಾಳಗುಪ್ಪ…
##########₹###########₹##₹₹₹######₹###
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305..