
ತಾಳಗುಪ್ಪ:- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತಾಳಗುಪ್ಪ ಗ್ರಾಮ ಪಂಚಾಯಿತಿ ದುರಾಡಳಿತಕ್ಕೆ ಇದೊಂದು ಪ್ರತ್ಯಕ್ಷ ನಿದರ್ಶನ. ರಾಷ್ಟ್ರೀಯ ಹೆದ್ದಾರಿ ಅಷ್ಟೇ ಅಲ್ಲದೇ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಮನೆ ಎದುರೇ ಈ ಅವ್ಯವಸ್ಥೆ. ಈ ಹಿಂದೇ ಸುಮಾರು 60000/- ಕ್ಕೂ ಹೆಚ್ಚಿನ ಗ್ರಾಮ ಪಂಚಾಯಿತಿ ಅನುದಾನ ವಿನಿಯೋಗಿಸಿ ಚರಂಡಿ ಕಾಮಗಾರಿ ನೆಡೆಸಿದ್ದರೂ ಪಾದಚಾರಿಗಳು ಹಾಗೂ ವಾಹನ ಸವಾರರ ಕಿರಿಕಿರಿ ತಪ್ಪಿಲ್ಲ. ಸರ್ಕಾರಿ ಶಾಲಾ ಶಿಕ್ಷಕಿಯ ಮಾಲೀಕತ್ವದ ಈ ಕಟ್ಟಡ ಮಾಲೀಕರು ಚರಂಡಿಗೆ ಅಡ್ಡಲಾಗಿ ಅವೈಜ್ಞಾನಿಕವಾಗಿ ಪೈಪ್ ಅಳವಡಿಸಿದ ಪರಿಣಾಮ ಸುಮಾರು 50 ಕ್ಕೂ ಹೆಚ್ಚಿನ ಮನೆಗಳಿಂದ ಬಚ್ಚಲು ನೀರು ಸರಾಗವಾಗಿ ಚರಂಡಿಯಲ್ಲಿ ಹರಿಯದೇ ಹೆದ್ದಾರಿಯಲ್ಲಿ ಹರಿಯುತ್ತಿದ್ದೂ ಪಾದಚಾರಿಗಳುವಾಹನ ಸವಾರರು ಅದರಲ್ಲೂ ಶಾಲಾ ಕಾಲೇಜು ಮಕ್ಕಳಿಗೆ ಹೆದ್ದಾರಿಯಲ್ಲಿ ಹರಿಯುವ ಬಚ್ಚಲು ನೀರು ವೇಗವಾಗಿ ಸಂಚರಿಸುವ ವಾಹನಗಳು ಬಚ್ಚಲು ನೀರಿನ ಮೇಲೆ ಸಂಚರಿಸಿದಾಗ ಪಾದಚರಿಗಳಿಗೆ ಸಿಡಿಯುವುದು ಸರ್ವೇಸಾಮಾನ್ಯವಾಗಿದ್ದೂ ಈ ಬಗ್ಗೆ ಗ್ರಾಮ ಪಂಚಾಯಿತಿ ಕಣ್ಣಿದ್ದೂ ಕುರುಡುತನದತ್ತ ದಿವ್ಯ ನಿರ್ಲಕ್ಷತನ ವಹಿಸಿರುವುದು ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಸರ್ಕಾರಿ ಶಾಲಾ ಶಿಕ್ಷಕಿಯಾಗಿ ತಮ್ಮಿಂದ – ತಮ್ಮ ತಪ್ಪಿನಿಂದ ಈ ರೀತಿ ಅವ್ಯವಸ್ಥೆ ಕಣ್ಣಾರೆ ಕಂಡು ಸುಮ್ಮನೆಯಿರುವುದು ನೋಡಿದರೆ ಇನ್ನೂ ಸ್ವಚ್ಛತೆ ಬಗ್ಗೆ ಶಾಲಾ ಮಕ್ಕಳಿಗೆ ಯಾವ ರೀತಿ ಭೋಧಿಸುತ್ತಾರೆ ಎಂಬುದೇ ಯಕ್ಷ ಪ್ರೆಶ್ನೆಯಾಗಿದೆ
ಇನ್ನೂ ಮುಂದಾದರೂ ಚರಂಡಿಗೆ ಅಳವಡಿಸಿದ ಅವೈಜ್ಞಾನಿಕ ಪೈಪ್ ತೆರವು ಸರಾಗವಾಗಿ ಚರಂಡಿಯಲ್ಲೇ ಬಚ್ಚಲು ನೀರು ಹರಿಯುವಂತೆ ಸೂಕ್ತ ಕ್ರಮಕ್ಕೆ ಮುಂದಾಗಲಿ ಸಾಂಕ್ರಮಿಕ ರೋಗಗಳು ಹರಡದಂತೆ ಎಚ್ಚರ ವಹಿಸಲಿ ..
…ಓಂಕಾರ ಎಸ್. ವಿ. ತಾಳಗುಪ್ಪ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ: 9449553305..