
ಸಿದ್ದಾಪುರ : ಇಂಡಿಯಾ ಬುಕ್ ಆಫ್ ರೇಕಾರ್ಡ್ ನಲ್ಲಿ ಸಿದ್ದಾಪುರದ ಯುವತಿಯ ಹೆಸರು ರೆಕಾರ್ಡ್ ಆಗಿದ್ದು.
ಸಿದ್ದಾಪುರದ ಬಿಳಗಿ ಸಮೀಪದ ಹೊಸಮಂಜು ಊರಿನವರಾದ ಮಂಜುನಾಥ ನಾಯ್ಕ್ ಹಾಗೂ ಮೋಹಿನಿ ನಾಯ್ಕ್ ದಂಪತಿಯ ಪುತ್ರಿ ತೃಪ್ತಿ ಮಂಜುನಾಥ ನಾಯ್ಕ್ ಇವರು ಸುಮಾರು ಎರಡು ವರ್ಷಗಳಿಂದ ಲೀಫ್ ಆಟ್೯ನ್ನು ಮಾಡುತ್ತಿದ್ದು ಪ್ರಸ್ತುತ ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಬಾಡ ಕಾರವಾರದಲ್ಲಿ ದ್ವಿತೀಯ ವಷ೯ದ ಬಿ. ಎಡ್ ನ್ನು ಪಡೆಯುತ್ತಿದ್ದಾರೆ.
ಮೊದಲು ಅನೇಕ ರೀತಿಯ ಪ್ರಾಣಿ, ಪಕ್ಷಿ, ಹೂಗಳ ಲೀಪ್ ಆಟ್೯ನ್ನು ಮಾಡುತ್ತಿದ್ದು, ಪ್ರಸ್ತುತವಾಗಿ ನಮ್ಮ ದೇಶದ ರಾಷ್ಟ್ರಗೀತೆಯನ್ನು ಹಿಂದಿಭಾಷೆಯಲ್ಲಿ ಲೀಫ್ ಆಟ್೯ನ್ನು ಮಾಡುವುದರ ಮೂಲಕ ಇಂಡಿಯಾ ಬುಕ್ ಆಫ್ ರೇಕಾಡ್೯ನಲ್ಲಿ ದಿನಾಂಕ 19 ಮಾಚ್೯ 2022 ರಂದು ದಾಖಲಾಗಿದೆ.
ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯಶಸ್ಸು ತೆಗೆದುಕೊಂಡು ಸಿದ್ದಾಪುರದ ಕೀರ್ತಿ ಹೆಚ್ಚಿಸಲಿ ಸ್ಥಳೀಯರ ಆಶಯ…
✒️ ಓಂಕಾರ ಎಸ್. ವಿ. ತಾಳಗುಪ್ಪ..
####################################₹
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305..