
ಮಲೆನಾಡಿನ ಸ್ವರ್ಗ ಕರ್ನಾಟಕದ ಚಿರಾಪುಂಜಿ ಎಂದೆಲ್ಲಾ ಕರೆಸಿಕೊಳ್ಳುವ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಪ್ರವಾಸಿಗರ ನೆಚ್ಚಿನ ತಾಣ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗುಂಬೆಗೆ ಭೇಟಿ ನೀಡುತ್ತಾರೆ. ಆದರೆ ಇಲ್ಲಿ ವಾಸಿಸುವ ಜನರ ಪಾಡು ಮಾತ್ರ ನರಕಯಾತನೆ ಕಾಡುಕೋಣಗಳ ನಿರಂತರ ಹಾವಳಿ, ರೈತರ ನಿದ್ದೆಗೆಡಿಸಿದೆ. ಸರ್ಕಾರವಾಗಲಿ ಸಂಬಂಧಪಟ್ಟ ಅಧಿಕಾರಿಗಳಾಗಲಿ ರೈತರ ನೆರವಿಗೆ ಧಾವಿಸಿಲ್ಲ ಕಾಡುಕೋಣಗಳ ಹಾವಳಿಯಿಂದ ಹಾಳಾದ ಫಸಲಿಗೆ ಸಮರ್ಪಕವಾದ ಪರಿಹಾರವನ್ನು ಘೋಷಿಸಿಲ್ಲ. ಶಾಸಕರಾದ ಆರಗ ಜ್ಞಾನೇಂದ್ರ ಅವರು ಕಾಡುಪ್ರಾಣಿಗಳ ಹಾವಳಿ ಬಗ್ಗೆ ಪತ್ರಿಕೆ ಹಿಂದೆ ಬರೆದಾಗ ವಿಧಾನಸೌಧದಲ್ಲಿ ಇದರ ವಿರುದ್ಧ ಧ್ವನಿಯೆತ್ತಿದ್ದರು. ಆ ಸಮಯದಲ್ಲಿ ಅರಣ್ಯ ಸಚಿವರಾದ ಅರವಿಂದ ಲಿಂಬಾವಳಿಯವರು ಕೂಡ ಸೂಕ್ತ ಸ್ಪಂದನೆ ವ್ಯಕ್ತಪಡಿಸಿದ್ದರು. ಆದರೆ ನಂತರ ಕೊರೋನಾ ಸಾಂಕ್ರಮಿಕ ಕಾಯಿಲೆ ತೀವ್ರವಾಗಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಅದು ಅಲ್ಲಿಯೇ ನಿಂತು ಹೋಯಿತು. ಶಾಸಕರು ಇದರ ಬಗ್ಗೆ ಮತ್ತೆ ಧ್ವನಿಯೆತ್ತಲಿ ಆಗುಂಬೆ ಭಾಗದ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿ ಎನ್ನುವುದು ಪತ್ರಿಕೆಯ ಆಶಯ ಜೊತೆಗೆ ನಿರಂತರವಾಗಿ ವಿದ್ಯುತ್ಇರುವುದಿಲ್ಲ ಇದರಿಂದ ವಿದ್ಯಾರ್ಥಿಗಳಿಗೆ ಅಂತೂ ಈಗಿನ ಸಮಯದಲ್ಲಿ ತುಂಬಾ ಕಷ್ಟಕರವಾದ ಪರಿಸ್ಥಿತಿಯಾಗಿದೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಆಗುಂಬೆ ಜನತೆ ಮಾತ್ರ ಎಲ್ಲಾ ನೋವುಗಳನ್ನು ನುಂಗಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವೆಲ್ಲ ಸಮಸ್ಯೆಗಳ ಮಧ್ಯೆ ಆಗುಂಬೆ ಮುಖ್ಯರಸ್ತೆಯಲ್ಲಿ ಗ್ರಾಮ ಪಂಚಾಯಿತಿ ಎದುರುಗಡೆ ಮಳೆಯ ನೀರು ರಸ್ತೆಯ ಮೇಲೆ ನಿಂತಿರುವುದು ದುರಂತವೇ ಸರಿ ಇದನ್ನು ನೋಡಿಕೊಂಡು ಸಂಬಂಧಪಟ್ಟ ಅಧಿಕಾರಿಗಳು ಮೌನ ವಹಿಸಿರುವುದು ಅವರು ತೆಗೆದುಕೊಳ್ಳುವ ಸಂಬಳಕ್ಕೆ ದ್ರೋಹ ಮಾಡಿದಂತೆ ಕೂಡಲೇ ಇದಕ್ಕೆ ಸಂಬಂಧಪಟ್ಟಂತೆ ಸೂಕ್ತ ಕ್ರಮ ತೆಗೆದುಕೊಂಡು ನೀರು ಸರಾಗವಾಗಿ ಚರಂಡಿಗೆ ಹೋಗುವಂತೆ ಮಾಡಿ ಪುಣ್ಯಕಟ್ಟಿಕೊಳ್ಳಿ ಎನ್ನುವುದು ಆಗುಂಬೆ ಭಾಗದ ಜನರ ಮನವಿ ಹಾಗೆ ಪ್ರವಾಸಿಗರದು ಕೂಡ…#( ವರದಿ… ರಘುರಾಜ್ ಹೆಚ್, ಕೆ…9449553305….)#