
ಸಾಗರ :- ತಾಲ್ಲೂಕಿನ ಉಪ ವಿಭಾಗೀಯ ಆಸ್ಪತ್ರೆಯು ಕರ್ನಾಟಕ ರಾಜ್ಯಕ್ಕೆ ಮಾದರಿ ಆಸ್ಪತ್ರೆಯಾಗಿದ್ದೂ, ಈ ಆಸ್ಪತ್ರೆಯಲ್ಲಿ ಅಳವಡಿಸಿದ ಮೂರು ಕಣ್ಣು(C. C. CAMERA ) ಗಳು ಸಮರ್ಪಕವಾಗಿ ನಿರ್ವಹಣೆ ಕೊರತೆಯಿಂದ ನೆನೆಗುದಿಗೆ ಬಿದ್ದಿದ್ದೂ ಚಿತ್ರೀಕರಣವಾದ ವಿಡಿಯೋ ಸಂಗ್ರಹಣೆ ಮಾಡುವ ಉಪಕರಣ ಲಭ್ಯವಿಲ್ಲದೇ ಆಸ್ಪತ್ರೆ ಒಳಭಾಗದಲ್ಲಿ ನಿತ್ಯ ಕಳ್ಳರ ಕೈಚಳಕದಿಂದ ರೋಗಿಗಳು ಪರದಾಟ ನೆಡೆಸುತ್ತಿದ್ದೂ, ಸುರಕ್ಷಿತವಲ್ಲದ ಆಸ್ಪತ್ರೆ ಎಂದು ಅಪಕೀರ್ತಿಗೆ ತುತ್ತಾಗಿದೆ.

ವೈಧ್ಯ ಸೇವೆಯಲ್ಲಿ ಪ್ರಾಮಾಣಿಕರೂ, ಜನಸ್ನೇಹಿ ವೈದ್ಯರಾಗಿದ್ದೂ, ಸಾಗರ ಉಪ ವಿಭಾಗೀಯ ಆಸ್ಪತ್ರೆಯ ಆಡಳಿತ ವೈಧ್ಯಾಧಿಕಾರಿಗಳಾದ ಶ್ರೀ ಪರಪ್ಪ ರವರು ಕೂಡಲೇ ಮೂರನೇ ಕಣ್ಣು (C. C. CAMERA ) ಗಳನ್ನೂ ಸುಸ್ಥಿತಿಯನ್ನಾಗಿ ನಿರ್ವಹಣೆ ಮಾಡಿಸಿ, ವಿಡಿಯೋ ಚಿತ್ರೀಕರಣವನ್ನೂ ಸಂಗ್ರಹಣೆ ಮಾಡುವಂತಹ ಉತ್ತಮ ಗುಣಮಟ್ಟದ ಉಪಕರಣ ಅಳವಡಿಸಿ, ಆಸ್ಪತ್ರೆ ಒಳಭಾಗದಲ್ಲಿ ದಿನನಿತ್ಯ ನೆಡೆಯುತ್ತಿರುವ ಕಳ್ಳರಿಂದ ಆಗುತ್ತಿರುವ ತೊಂದರೆಯನ್ನೂ ತಪ್ಪಿಸಿ, ಸುಭದ್ರ – ಸುರಕ್ಷಿತ ಸಾಗರ ಉಪ ವಿಭಾಗೀಯ ಆಸ್ಪತ್ರೆಯಾಗುವಂತೆ ಮನವಿ ಮಾಡುತ್ತಿರುವ ನೊಂದ ನಾಗರಿಕರು…
ಓಂಕಾರ ಎಸ್. ವಿ. ತಾಳಗುಪ್ಪ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ::9449553305…