
ಕಾರ್ಗಲ್ :- ಇತ್ತೀಚಿಗೆ ಬಾರಿ ಸುದ್ದಿಯಲ್ಲಿದ್ದ ಎಂಪಿಎಂ ಅರಣ್ಯದಲ್ಲಿ ಅಕ್ರಮ ನಾಟ ಸಾಗಾಟ ಸುದ್ದಿಗಳನ್ನು ಬೆನ್ನತ್ತಿದ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ದಿನಾಂಕ 16/05/2022 ರಂದು ಸಂಜೆ 07:00 ಗೆ ಫಿರ್ಯಾದಿದಾರಾದ ಪಾಸ್ಕಲ್ ರೋಡ್ರಿಗ್ರಸ್ ಸಹಾಯಕ ಅರಣ್ಯಧಿಕಾರಿಗಳು ಎಂಪಿಎಂ ಸುಳ್ಳಳ್ಳಿ ಘಟಕ ಸಾಗರ ತಾಲ್ಲೂಕು ಇವರುಗಳು ದೂರಿನ ಸಾರಾಂಶದಂತೆ ಕರೂರು ಹೋಬಳಿಯ ನಾಡುಕಿರುವಾಸೆ ಗ್ರಾಮದ ಸರ್ವೇ ನಂಬರ್ 207, 185 ರಲ್ಲಿ ನಡುತೋಪು ಕರೂರು ಬ್ಲಾಕ್ ನಂಬರ್ 2008 ಸಂಖ್ಯೆ 240 ಎ ರಲ್ಲಿ 16.40 ಹೆಕಟೆರಲ್ಲಿ ಅಕೇಶಿಯಾ ಹೈ ಬ್ರಿಡ್ ನಡುತೋಪು ಪ್ರದೇಶವಿದ್ದು ಈ ಪ್ರದೇಶಕ್ಕೆ ಮಂಜುನಾಥ ಎಂಬುವವನು ಕಾವಲುಗಾರನಾಗಿ ನೇಮಕ ಮಾಡಲಾಗಿತ್ತು. ಈ ನಡುತೋಪಿನಲ್ಲಿ ಬೆಳೆದಿದ್ದ ಮರಗಳನ್ನು ಕಟಾವು ಮಾಡಿ ಸಾಗಾಣಿಕೆ ಮಾಡಲು ಗುತ್ತಿಗೆದಾರರಾದ ಅಬ್ದುಲ್ ರಹಮಾನ್ ಬೇಗ್ ರವರಿಗೆ ಇಲಾಖೆಯಿಂದ ಗುತ್ತಿಗೆ ನೀಡಿದ್ದು ಅವರು 06/02/2022 ರಿಂದ 09/05/2022 ರವರಿಗೆ ಮರಗಳನ್ನು ಕಟಾವು ಮಾಡಿ ಸಾಗಾಣಿಕೆ ಕೆಲಸ ಮಾಡಿಸಿದ್ದರು. ನಂತರದ ದಿನಗಳಲ್ಲಿ ಮಳೆ ಬಿದ್ದಿದ್ದರಿಂದ ಕೆಲಸವನ್ನು ನಿಲ್ಲಿಸಿದ್ದರು. ದಿನಾಂಕ 15/05/2022 ರಂದು ನಡು ತೋಪಿನಲ್ಲಿದ್ದ ಅಕೇಶಿಯಾ ಮರಗಳನ್ನು ಇಲಾಖೆಯ ಅಧಿಕಾರಿಗಳಿಗೆ ಗೊತ್ತಾಗದಂತೆ ಅಕ್ರಮವಾಗಿ ಅಕೇಶಿಯಾ ಮರಗಳನ್ನು ಕಟಾವು ಮಾಡಿಸಿ 150000/- ರೂ ಮೌಲ್ಯದ ಸುಮಾರು 30 ಮೆಟ್ರಿಕ್ ಟನ್ ಪಲ್ಸ್ ವುಡ್ ಅಕೇಶಿಯ ಮರಗಳನ್ನು 2 ಲಾರಿ ಲೋಡ್ ಮಾಡಿ ಸಾಗಾಟ ಮಾಡಿದ್ದರಿಂದ ಮಂಜುನಾಥ ಮೇಲೆ ಕಾನೂನು ಕ್ರಮ ಜರುಗಿಸಿವಂತೆ ನೀಡಿದ ದೂರಿನ ಕಾರ್ಗಲ್ ಠಾಣೆ ಸಿ ಆರ್ ನಂಬರ್ 33/2022 ಕಲಂ 381, 408 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಳ್ಳಲಾಗಿತ್ತು
ದೂರಿನ ಜಾಡು ಹಿಡಿದು ಮಾನ್ಯ ಜಿಲ್ಲಾ ರಕ್ಷಣಾಧಿಕಾರಿಗಳಾದ . ಎಂ. ಲಕ್ಷ್ಮಿ ಪ್ರಸಾದ್ ಐಪಿಎಸ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ. ವಿಕ್ರಂ ಅಮಟೆ ಶಿವಮೊಗ್ಗ ರವರು ಕಳ್ಳತನ ಪ್ರಕರಣವನ್ನೂ ಪತ್ತೆ ಹಚ್ಚಲು ಅದೇಶಿಸಿದ ಮೇರೆಗೆ ರೋಹನ್ ಜಗದೀಶ್ ಐಪಿಎಸ್ ಮಾನ್ಯ ಸಹಾಯಕ ಪೊಲೀಸ್ ಅಧೀಕ್ಷಕರು ಸಾಗರ ಉಪ ವಿಭಾಗ ಸಾಗರ ಮತ್ತು ಕಾರ್ಗಲ್ ಪೊಲೀಸ್ ಇನ್ಸ್ಪೆಕ್ಟರ್ ಕೃಷ್ಣಪ್ಪ ಕೆ. ವಿ. ರವರ ಮಾರ್ಗದರ್ಶನದಲ್ಲಿ ತಿರುಮಲೇಶ್ ಪಿ ಎಸ್ ಐ ಕಾರ್ಗಲ್ ಠಾಣೆ ರವರ ನೇತೃತ್ವದಲ್ಲಿ ಕಾರ್ಗಲ್ ಪೊಲೀಸ್ ಠಾಣೆಯ ಎ ಎಸ್ ಐ ಕರಿಬಸಪ್ಪ, ಸಿಬ್ಬಂದಿಗಳಾದ ಪಿಸಿ 832 ಪುರುಷೋತ್ತಮ್, ಪಿಸಿ 1440 ಸುನಿಲ್ ಕುಮಾರ್, ಪಿಸಿ. 2056 ಕೊಟ್ರೇಶ, ಮ ಪಿಸಿ 872 ಶಿಲ್ಪಾ, ಪಿಸಿ 1304 ಜಗದೀಶ್ ನಾಯ್ಕ್, ಪಿಸಿ 11 ಶರತ್ ಕುಮಾರ್, ಪಿಸಿ 768 ಭರತ್ ಕುಮಾರ್, ಪಿಸಿ 1628 ಬಸವರಾಜ್, ಪಿಸಿ 1559 ಕಿರಣಾಚಾರಿ ರವರುಗಳನ್ನು ಒಳಗೊಂಡ ತಂಡ ದಿನಾಂಕ 18/05/2022 ರಂದು ಆರೋಪಿ ಮಂಜುನಾಥ್ ತಂದೆ ಕೊರಗ ಪೂಜಾರಿ 54 ವರ್ಷ ವಾಸ ಕರೂರು ಗ್ರಾಮ ಸಾಗರ ತಾಲ್ಲೂಕು ಈತನನ್ನು ದಸ್ತಗಿರಿ ಮಾಡಿದ್ದೂ ಈತನು ನೀಡಿದ ಮಾಹಿತಿ ಮೇರೆಗೆ ಕೃತ್ಯ ನೆಡೆದ ಸ್ಥಳದಿಂದ ಮರಗಳನ್ನು ಸಾಗಾಣಿಕೆ ಮಾಡಿದ್ದ ಲಾರಿಗಳನ್ನು ಅದೇ ದಿವಸ ದಾಂಡೇಲಿ ವೆಸ್ಟ್ ಕೋರ್ಸ್ ಪೇಪರ್ ಮಿಲ್ ನ ಆವರಣದಲ್ಲಿದ್ದ ಕೆ ಎ 65 1069 ಲಾರಿ ಹಾಗೂ ಕೆ ಎ 22 ಬಿ 0906 ಲಾರಿಗಳಲ್ಲಿ ತುಂಬಿದ್ದ 14 ಮೆಟ್ರಿಕ್ ಟನ್ ಅಕೇಶಿಯಾ ಹಾಗೂ 16 ಮೆಟ್ರಿಕ್ ಟನ್ ನೀಲಗಿರಿ ಮರಗಳ ಸಮೇತ ಅಮಾನತ್ತು ಪಡಿಸಿಕೊಡಿದ್ದಾರೆ.
ದಿನಾಂಕ 29/05/2022 ರಂದು ಈ ಪ್ರಕರಣದಲ್ಲಿ ಕೃತ್ಯಕ್ಕೆ ಸಹಕರಿಸಿದ ಆರೋಪಿ ಮಂಜುನಾಥ ರವರ ಮಗನಾದ ಮಣಿ ಕಂಠ ತಂದೆ ಮಂಜುನಾಥ 27 ವರ್ಷ ವಾಸ ಕರೂರು ಸಾಗರ ತಾಲ್ಲೂಕು ಈತನನ್ನು ದಸ್ತಗಿರಿ ಮಾಡಿ ಕೃತ್ಯ ವೇಸಗುವ ಸಮಯದಲ್ಲಿ ಬಳಸಿದ ಕೆ ಎ 03 ಎಂ ಕೆ 2337 ರ ಮಾರುತಿ ಆಲ್ಟೊ ಕಾರಿನ ಮೌಲ್ಯ 400000/- ರೂ ಅಮಾನತ್ತು ಪಡಿಸಿಕೊಂಡು ಆರೋಪಿಗಳನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಮಾನ್ಯ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಜರುಪಡಿಸಿದ್ದಾರೆ.

ಅತೀ ಶೀಘ್ರದಲ್ಲಿ ಪ್ರಕರಣ ಭೇಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡಕ್ಕೆ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಅಭಿನಂದನೆ ಸಲ್ಲಿಸಿದ್ದಾರೆ.
ಎಂಪಿಎಂ ಅಕ್ರಮ ಮಾರಾಟ ಜಾಲದ ವಿಷಯಕ್ಕೆ ಸಂಬಂಧಿಸಿದಂತೆ ನ್ಯೂಸ್ ವಾರಿಯರ್ಸ್ ಪತ್ರಿಕೆ ಜಿಟಿ ಸತ್ಯನಾರಾಯಣ ಹಾಗೂ ಓಂಕಾರ ಎಸ್ ತಾಳಗುಪ್ಪ ಅವರ ಮಾಹಿತಿ ಮೇರೆಗೆ ವಿಸ್ತೃತವಾಗಿ ಸುದ್ದಿ ಮಾಡಿತ್ತು.ಸುದ್ದಿ ಸುದ್ದಿ ಬಂದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ಟಿಪ್ಪಣಿಗಳು ವ್ಯಕ್ತವಾಗಿದ್ದವು. ಶೀಘ್ರದಲ್ಲಿಯೇ ಎಂಪಿಎಂ ಅಕ್ರಮ ಮಾರಾಟ ಜಾಲವನ್ನೂ ಪತ್ತೆ ಪತ್ತೆ ಹಚ್ಚಿ ಪ್ರಕರಣಕ್ಕೆ ತಿಲಾ0ಜಲಿ ಹಾಡಿದ ಪೊಲೀಸ್ ಇಲಾಖೆಗೆ ನ್ಯೂಸ್ ವಾರಿಯರ್ಸ್ ಬಳಗದಿಂದ ಅಭಿನಂದನೆಗಳು.
ಓಂಕಾರ ಎಸ್. ವಿ. ತಾಳಗುಪ್ಪ…..
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…