
ಹೊಸನಗರ:- ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾರ್ಗಲ್ ನಲ್ಲಿ ಎರಡು ಲಾರಿ ಅಕ್ರಮ ಮರಗಳ ಕಳ್ಳ ಸಾಗಾಣಿಕೆ ಬಗ್ಗೆ ಪತ್ರಿಕೆ ವಿವರವಾದ ವರದಿ ಪ್ರಕಟಿಸಿತ್ತು.
ವರದಿ ಬೆನ್ನಲ್ಲೇ ಶಿವಮೊಗ್ಗದ ಎಸ್ಬಿಯ ಆದೇಶದ ಮೇರೆಗೆ ಸಾಗರದ ದಕ್ಷ ಡಿವೈಎಸ್ಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು.
ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ ತಂಡ ಅರ್ಧಕೋಟಿಗೂ ಅಧಿಕ ಬೆಲೆಬಾಳುವ ಮರಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದರು.
ಕಾವಲುಗಾರನೇ ಕಳ್ಳ ನಾಗಿದ್ದ:
ಸಾಗರದಲ್ಲಿ ಅಕ್ರಮ ಮರಗಳ ಸಾಗಾಣಿಕೆಯಲ್ಲಿ ನೆಡುತೋಪನ್ನು ಕಾಯುತ್ತಿದ್ದ ಕಾವಲುಗಾರ ಮಂಜುನಾಥನ ಕಳ್ಳ ನಾಗಿದ್ದ ಆತನ ಮೇಲೆಯೇ ಆರ್ ಎಪ್ ಒ ದೂರು ದಾಖಲಿಸಿದ್ದರು.
ಮೇಲ್ನೋಟಕ್ಕೆ ಕಾವಲುಗಾರ ಕಳ್ಳನಾಗಿದ್ದು ಆತನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ. ಆದರೆ ಇಷ್ಟು ದೊಡ್ಡ ಹಗರಣದಲ್ಲಿ ಆತನೊಬ್ಬನೇ ಇರಲು ಸಾಧ್ಯವಿಲ್ಲ ಇದರ ಹಿಂದೆ ದೊಡ್ಡ ವ್ಯವಸ್ಥೆಯಿದೆ ಅದು ಬಹಿರಂಗವಾಗಬೇಕು.
ಸಾಗರದ ಅಕ್ರಮದ ಬೆನ್ನಲ್ಲೇ ಹೊಸನಗರದಲ್ಲಿ ಅಕ್ರಮ ಕಟಾವು ಶುರು:
ಹೊಸನಗರ ತಾಲ್ಲೂಕು ಜಯನಗರದಿಂದ ಸುತ್ತಾ ಗ್ರಾಮಕ್ಕೆ ಹೋಗುವ ದಾರಿ ನಂದಿಕೊಪ್ಪ ಬಳಿ 07 ಹೇಕ್ಟರ್ ಎಂಪಿಎಂ ನಡುತೋಪಿನಲ್ಲಿ ಅಕ್ರಮವಾಗಿ ಮರಗಳನ್ನೂ ಕಡಿತಲೆ ಮಾಡುತ್ತಿರುವ ಮಾಹಿತಿ ಬಂದಿದ್ದು.
ಎಂಪಿಎಂ ಗುತ್ತಿಗೆದಾರ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಿವಾಸಿ ಅಬ್ದುಲ್ಲ ಎಂಬುವವನರಿಗೆ ಟೆಂಡರ್ ಪ್ರಕ್ರಿಯೆ ಆಗಿದ್ದು , ಆದರೇ ಜಿಲ್ಲಾಧಿಕಾರಿಗಳು ಹಾಗೂ ಎಂಪಿಎಂ M. D. ರವರಾದ ಸೆಲ್ವಮಣಿ ರವರಿಂದ ಇನ್ನೂ ಅನುಮತಿ ದೊರೆಯದೇ OMR ಸಿಕ್ಕಿಲ್ಲ ಅಗ್ರಿಮೆಂಟ್ ಕೂಡ ಆಗದೇ ಹೋದರೂ ಈಗಾಗಲೇ ಎಂಪಿಎಂ ಗುತ್ತಿಗೆದಾರ ಅಕ್ರಮವಾಗಿ ಎಂಪಿಎಂ ನಡುತೋಪಿನಲ್ಲಿ ಮರಗಳ ಕಡಿತಲೆ ಮಾಡಿ ಸುಮಾರು 30 ಲಾರಿಗೂ ಹೆಚ್ಚಿನ ಲಾರಿಗಳಲ್ಲಿ ಅಕ್ರಮವಾಗಿ ಮರದ ದಿಮ್ಮೆಗಳನ್ನೂ ಸಾಗಾಟ ಮಾಡಿರುವ ಬಗ್ಗೆ ಬಲ್ಲ ಮೂಲಗಳಿಂದ ಮಾಹಿತಿ ದೊರೆತಿದೆ.
ಎಂಪಿಎಂ M. D. ರವರು ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿಗಳಾದ ಸೆಲ್ವಮಣಿ ರವರು ಕೂಡಲೇ ತನಿಖೆ ನೆಡೆಸಿ ಅಕ್ರಮವಾಗಿ ಎಂಪಿಎಂ ನಡುತೋಪಿನಲ್ಲಿ ಮರಗಳನ್ನೂ ಕಡಿತಲೆ ಮಾಡಿರುವ ಎಂಪಿಎಂ ಗುತ್ತಿಗೆದಾರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಎಂಪಿಎಂ ಲೈಸನ್ಸ್ ವಜಾ ಮಾಡಿ ಸೂಕ್ತ ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮ ತೆಗೆದುಕೊಂಡು ಮುಂದೆ ಹೀಗಾಗದಂತೆ ಎಚ್ಚರ ವಹಿಸ ಎಂಪಿಎಂ ನೆಡುತೋಪು ಉಳಿಸಿ…
ಓಂಕಾರ ಎಸ್. ವಿ. ತಾಳಗುಪ್ಪ….
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…