
ತಮ್ಮ ರಾಜಿನಾಮೆ ಪತ್ರದ ಮುಖಾಂತರ ಡಾಕ್ಟರ್ ನಾಡೋಜ ಪಂಪ ನಾಗರಾಜಯ್ಯ ನವರು ಹಿರಿಯ ಚೇತನ ಸಾಹಿತಿ ಕುವೆಂಪು ಅವರನ್ನು ಅವಹೇಳನಕಾರಿಯಾಗಿ ಚಿತ್ರಿಸುವುದು, ಮಾತನಾಡುವುದು, ನೋಡಿದರೆ ಬಾಳ ಬೇಸರವಾಗುತ್ತದೆ.
ಹುಟ್ಟಿದ ಜನಾಂಗ, ಬರೆದ ನಾಡಗೀತೆ, ಹಾಗೂ ವೈಯಕ್ತಿಕವಾಗಿ ಕುವೆಂಪು ಅವರನ್ನು ನಿಂದನೆ ಮಾಡಿರುವುದು ಶೋಭೆ ತರುವಂತದ್ದಲ್ಲ.
ಸರ್ವ ಜನಾಂಗದ ಶಾಂತಿಯ ತೋಟ ಅಂದ ವ್ಯಕ್ತಿಗೆ ಅವಮಾನ:
ಯಾವುದೇ ಜಾತಿ ಮತ ಲಿಂಗ ಬೇಧವಿಲ್ಲದೆ ಸರ್ವ ಜನರು ಸುಖಿ ಆಗಿರಬೇಕು ಎನ್ನುವ ಮೂಲ ತತ್ವದೊಂದಿಗೆ ಬಾಳಿ ಬದುಕಿದ ಎಲ್ಲರನ್ನೂ ಪ್ರೀತಿಯಿಂದ ನೋಡಿದ ಹೆಮ್ಮೆಯ ಸಾಹಿತಿ ಕವಿ ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಅವಮಾನ ವಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ಸುಸೂತ್ರವಾಗಿ ಬಗೆಹರಿಸಬೇಕು. ಅವಮಾನ ಮಾಡಿದ ವ್ಯಕ್ತಿಗೆ ಶಿಕ್ಷೆ ಆಗಬೇಕು ಇಂಥ ಅವಮಾನ ಮುಂದೆ ಆಗದಂತೆ ನೋಡಿಕೊಳ್ಳಬೇಕು..
ರಘುರಾಜ್ ಹೆಚ್. ಕೆ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…