
ಸಾಗರ :- ಶಿವಮೊಗ್ಗ ಜಿಲ್ಲಾ ಸಾಗರ ತಾಲ್ಲೂಕು ಶ್ರೀ ಮಾರಿಕಾಂಬಾ ವ್ಯವಸ್ಥಾಪಕರ ಸಮಿತಿಯು ಹಿಂದೂ ರುದ್ರಭೂಮಿಯನ್ನೂ (ಶವಾಗಾರ ) ಹಿಂದೂ ಶವಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಅಂತ್ಯಕ್ರಿಯೆ ಮಾಡಲು ಅವಕಾಶ ನೀಡಿರುವುದು ನಿಜಕ್ಕೂ ಶ್ಲಾಘನೀಯ…… ಆದರೇ ಶವಾಗಾರದ ಮೇಲ್ಬಾಗದ ಶೀಟ್ ಗಳು ಸಂಪೂರ್ಣ ತುಕ್ಕು ಹಿಡಿದು ಹಾಳಾಗಿದ್ದರಿಂದ ಮಳೆಗಾಲದಲ್ಲಿ ನೀರು ಅಂತ್ಯಕ್ರಿಯೆ ಮಾಡುವ ಕ್ರೇಟ್ ಮೇಲೆ ಬೀಳುವುದರಿಂದ ಶವ ಸಂಸ್ಕಾರ ಮಾಡಲು ಕಷ್ಟಕರವಾಗಿರುತ್ತದೆ.
ಶವಗಾರ ಸುತ್ತಮುತ್ತಲಿನ ಪ್ರದೇಶವು ಗಿಡಗಂಟಿಗಳು ಬೆಳೆದಿದ್ದು ಸ್ವಚ್ಛತೆ ಮಂಗಮಾಯವಾಗಿದೆ. ದಯಮಾಡಿ ಶ್ರೀ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿಯು ಕೂಡಲೇ ಶೀಟ್ ಅಳವಡಿಸಿ , ಶವಾಗಾರದ ಸ್ವಚ್ಛತೆಯತ್ತ ಗಮನಹರಿಸಿ ಸ್ವಚ್ಛಯ ಅವ್ಯವಸ್ಥೆಯನ್ನೂ ಸಹ ಸರಿಪಡಿಸಿ ಎಂದಿನಂತೆ ಶ್ರೀ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿಯವರ ನಿಸ್ವಾರ್ಥ ಸಮಾಜಸೇವಾ ಕಾರ್ಯ ಹೀಗೆಯೇ ಮುಂದುವರಿಯಲಿ ಎಂಬುದೇ ಆಶಯ…
ಓಂಕಾರ ಎಸ್. ವಿ. ತಾಳಗುಪ್ಪ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ: 9449553305…