
ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಮೊನ್ನೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ನೀಡಿದ್ದರು. ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಬೆಂಗಳೂರು ಮೈಸೂರಿನಲ್ಲಿ ಎರಡು ದಿನ ಇದ್ದ ಮೋದಿ ವಿವಿಧ ಕಡೆ ಸಂಚಾರ ನಡೆಸಿದ್ದರು.
ಪ್ರಧಾನಿ ಮೋದಿ ಬರುವಿಕೆ ಹಿನ್ನೆಲೆಯಲ್ಲಿ ತುರ್ತಾಗಿ ರೆಡಿಯಾದ ರಸ್ತೆ:
ಕಳೆದ ಏಪ್ರಿಲ್ ತಿಂಗಳಲ್ಲಿ ಹಲವು ರಸ್ತೆಗಳು ಗುಂಡಿಗಳಿಂದ ಕೂಡಿದ್ದವು. ಆದರೂ ಆಡಳಿತ ನಡೆಸುವ ಸರ್ಕಾರ ಇದರ ಬಗ್ಗೆ ಗಮನ ಹರಿಸಿರಲಿಲ್ಲ. ಆದರೆ ಪ್ರಧಾನಿ ಮೋದಿ ಭೇಟಿ ನೀಡುತ್ತಾರೆ ಎನ್ನುವ ಹಿನ್ನೆಲೆಯಲ್ಲಿ ತುರ್ತಾಗಿ 23 ಕೋಟಿ ವೆಚ್ಚದ ಡಾಂಬರ್ ರಸ್ತೆಯನ್ನು ನಿರ್ಮಾಣ ಮಾಡಲಾಯಿತು. ಆದರೆ 23 ಕೋಟಿ ವೆಚ್ಚದ ಡಾಂಬರ್ ರಸ್ತೆಗೆ ತಗಲಿದ ಖರ್ಚು ಮಾತ್ರ 6 ಕೋಟಿ. ಉಳಿದಿದ್ದೆಲ್ಲಾ ಲೂಟಿ ಹೋಗಲಿ ರಸ್ತೆ ಕಾಮಗಾರಿ ಯಾದರೂ ಸರಿಯಾಗಿ ಮಾಡಿದ್ದಾರೆ ಅಂದರೆ ಅದು ಇಲ್ಲ. ಮೋದಿ ಭೇಟಿಯ ಮರುದಿನವೇ ರಸ್ತೆಗಳಲ್ಲಿ ಗುಂಡಿ ಬಿದ್ದಿದೆ.
ಸದ್ಯ ಪ್ರಧಾನಿ ಮೋದಿ ಅವರ ಕಾರಿಗೆ ಏನು ಆಗಲಿಲ್ಲವಲ್ಲ ಅದೇ ಅದೃಷ್ಟ :
23 ಕೋಟಿ ವೆಚ್ಚದ ತುರ್ತು ರಸ್ತೆ ಕಾಮಗಾರಿ ನಡೆಸಿ ಕೋಟಿ ಹಣವನ್ನು ಲೂಟಿ ಮಾಡಿ ಒಂದೇ ದಿನಕ್ಕೆ ರಸ್ತೆ ಹದಗೆಡುವಂತೆ ಮಾಡಿ ಕೋಟಿ ಕೋಟಿ ಲೂಟಿ ಮಾಡಿದ್ದಾರೆ.
ಸದ್ಯ ಪ್ರಧಾನಿ ಸಂಚರಿಸುವ ದಿನ ಏನು ಆಗಲಿಲ್ಲ ಎನ್ನುವುದೇ ಸಮಾಧಾನದ ಸಂಗತಿ ಒಂದು ವೇಳೆ ಅದೇ ದಿನ ಅವರ ಕಾರಿಗೆ ತೊಂದರೆ ಆಗಿದ್ದರೆ ಈ ಲೂಟಿಕೋರರ ನಿಜಬಣ್ಣ ಭಯಲಾಗುತ್ತಿತ್ತು. ಪ್ರಧಾನಿ ಮೋದಿ ಅವರಿಗೂ ಪರ್ಸೆಂಟೇಜ್ ಲೆಕ್ಕಾಚಾರ ಗೊತ್ತಾಗುತ್ತಿತ್ತು ಅಲ್ಲವೇ?
ರಘುರಾಜ್ ಹೆಚ್.ಕೆ…9449553305….