
ಬಾಗಲೂರು (ತಮಿಳುನಾಡು) ಜೂ 25 : ಕಲಾರತ್ನ ಡಾ.ರಾಮ ರೆಡ್ಡಿ ವೇದಿಕೆ, ವಾಟಿಕ ರೇಸಾರ್ಟ ಸಭಾಂಗಣದಲ್ಲಿ 32ನೇ ಅಂತರಾಷ್ಟ್ರೀಯ ಜಾನಪದ ಸಂಭ್ರಮವನ್ನು ಮಂಜುನಾಥ್. ಎಜುಕೇಷನ್ ಟ್ರಸ್ಟ್ (ರಿ) ಮಂಗಳೂರು ಮತ್ತು ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಪರಿಷತ್ (ಇಂಡಿಯಾ) ಜಂಟಿಯಾಗಿ ಆಯೋಜಿಸಿದ್ದವು.
ಸಮಾರಂಭವನ್ನು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಜನರು ಆಧುನಿಕ ಅವಿಷ್ಕಾರಗಳ ಬೆನ್ನು ಹತ್ತುವ ಗೀಳಿನಿಂದಾಗಿ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿರುವುದು ದುರದೃಷ್ಠಕರ. ಮಕ್ಕಳ ಮೊಬೈಲ್ ಫೋನ್ಗಳ ಅತಿ ಬಳಕೆ ಅವರನ್ನು ಅನ್ಯ ಮನಷ್ಕರನ್ನಾಗಿ ಮಾಡುತ್ತಿದೆ ಇದು ಮತ್ತಷ್ಟು ಅಪಾಯಕಾರಿ ಎಂದರು.
ಐ.ಸಿ.ಎಫ್.ಸಿ.(ಇಂಡಿಯಾ) ಅಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ವಿವಿಧ ದೇಶ ಮತ್ತು ರಾಜ್ಯಗಳಲ್ಲಿ ಆಯೋಜಿಸುತ್ತಿರುವ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಇದು 32ನೆಯದಾಗಿದ್ದು ಪ್ರಥಮ ಬಾರಿಗೆ ತಮಿಳುನಾಡಿನಲ್ಲಿ ಹಮ್ಮಿಕೊಂಡಿದ್ದು ಅತ್ಯಂತ ಯಶಸ್ವಿಯಾಗಿರುವುದಕ್ಕೆ ತುಂಬಾ ಸಂತೋಷವಾಗಿದೆ. ಪ್ರತ್ಯಕ್ಷ, ಪರೋಕ್ಷವಾಗಿ ನಮ್ಮೊಂದಿಗಿದ್ದ ಸರ್ವರಿಗೂ ತುಂಬು ಹೃದಯದ ಧನ್ಯವಾದ ಎಂದರು.
ಸಮಾರಂದ ವಿಶೇಷ ಆಮಂತ್ರಿತರಾದ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರಾದ ಎಂ.ಬಿ. ನಾರಾಯಣಸ್ವಾಮಿಯವರು ಮಾತನಾಡಿ ಸಾಂಸ್ಕೃತಿಕ ಕ್ಷೇತ್ರ ಸಮಾಜಕ್ಕೆ ಕೈಗನ್ನಡಿ ಇದ್ದಂತೆ ಅದನ್ನು ಮುಂದಿನ ತಲೆಮಾರಿಗೆ ಸ್ವಸ್ಥವಾದ ತಲುಪಿಸುವುದು ನಮ್ಮೆಲ್ಲರ ಹೊಣೆ ಎಂದರು.
ಮುಖ್ಯ ಅಥಿತಿಗಳಾದ ಮಸ್ಕಟ್ ಕನ್ನಡ ಸಂಘದ ಅಧ್ಯಕ್ಷ ಎಸ್.ಡಿ.ಟಿ. ಪ್ರಸಾದ್, ಕನ್ನಡ ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್, ಬಿ.ಬಿ.ಎಂ.ಪಿ ಮತ್ತು ಕರ್ನಾಟಕ ಮಹಾನಗರ ಪಾಲಿಕೆಗಳ ನೌಕರರ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಅಮೃತ್ ರಾಜ್, ವ್ಯಾಟಿಕ ರೇಸಾಟ್ ಮತ್ತು ಕ್ಲಬ್ ಮ್ಯಾನೇಜಿಂಗ್ ಡೈರೆಕ್ಟರ್ ಕಾರ್ತಿ ಕ್ ರೆಡ್ಡಿ, ಆಸ್ಟ್ರೇಲಿಯಾದ ಬ್ರಿಸ್ಬೇನ್ ಕನ್ನಡ ಬಳಗದ ಅಧ್ಯಕ್ಷ ಪ್ರೀತಮ್ ಮತ್ತು ಲೇಖಕ ಮತ ಗಾಯಕಿ ರಮ್ಯ ವಸಿಷ್ಠ ಇವರುಗಳು ಕಲೆ ಮತ್ತು ಸಾಹಿತ್ಯ ಕುರಿತು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶ್ ಕುಮಾರ್ ಹೊಸಮನಿ ಪುಸ್ತಕ ಪ್ರೀತಿ ಸಾಂಸ್ಕತಿಕ ಕ್ಷೇತ್ರದ ಅವಿಭಾಜ್ಯ ಅಂಗ ಜ್ಞಾನಾರ್ಜನೆ ವ್ಯಕ್ತಿಯನ್ನು ಸುಸಂಸ್ಕೃತನನ್ನಾಗಿ ಮಾಡುತ್ತದೆ. ನಮ್ಮ ರಾಜ್ಯದ ಗ್ರಂಥಾಲಯ ಇಲಾಖೆ ಡಿಜಿಟಿಕರಣದಲ್ಲಿ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಕನ್ನಡಿಗರೆಲ್ಲರೂ ಹೆಮ್ಮೆ ಪಡುವ ವಿಷಯ ಎಂದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧನಶೀಲ ಗಣ್ಯರಿಗೆ ಗೌರವ ಪ್ರಶಸ್ತಿ ನೀಡಿ ಪುರಸ್ಕಾರಿಸಲಾಯಿತು. ಜನಪದ ಗಾಯಕ ಗೋ.ನಾ. ಸ್ವಾಮಿ, ಪರಿಸರ ಪ್ರೇಮಿ ಸುರೇಶ್ ಕುಮಾರ್, ಯಶಸ್ವಿ ಕೃಷಿಕ ಮ್ಯತ್ಯುಂಜಯ ವಸ್ತ್ರದ, ಮಾನವ ಹಕ್ಕುಗಳ ಹೋರಾಟಗಾರ ಬಾ.ನಂ. ಲೋಕೇಶ್ ಮತ್ತು ನೃತ್ಯ ವಿದುಷಿ ಡಾ. ಕೆ. ಆರ್. ಸತ್ಯವತಿ ಇವರನ್ನು ಗೌರವಿಸಲಾಯಿತು.
ಸುಮಾರು 70ಕ್ಕೂ ಹೆಚ್ಚು ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಬೆಂಗಳೂರಿನ ಪುಷ್ಕರ ಸೆಂಟರ್ ಫಾರ್ ಪರ್ಫಾಮಿಂಗ್ ಆರ್ಟ್ಸ ಮತ್ತು
ಪ್ರಿಯದರ್ಶನ್ ಕಲ್ಚರಲ್ ಆಟ್ಸ್ ಮತ್ತು ಶಾಂತಲಾ ನೃತ್ಯ ಸಂಗೀತ ಇನ್ಸಿಟ್ಯೂಟ್ ಹಾಗು ಚನ್ನರಾಯ ಪಟ್ಟಣದ ನೃತ್ಯಾಂಜಲಿ ಕಲಾನಿಕೇತನ ಸಂಸ್ಥೆಗಳ ಕಲಾವಿದರಿಂದ ಜನಪದ ನೃತ್ಯ ಮತ್ತು ಭರತನಾಟ್ಯ ಕಾರ್ಯಕ್ರಮಗಳು ಪ್ರದರ್ಶನಗೊಂಡವು.
ಗಾಯಕರಾದ ಶಿವು, ಕುಮಾರ್, ರಮ್ಯ ವಶಿಷ್ಠ ಮತ್ತು ಶರಣ್ಯ ಜಾನಪದ ಗೀತೆ ಮತ್ತು ಕನ್ನಡ ಗೀತೆಗಳನ್ನು ಮಧುರವಾಗಿ ಹಾಡಿದರು, ಶರಣ್ಯ ಕಾರ್ಯಕ್ರಮ ನಿರೂಪಿಸಿದರು. ಗೋ.ನಾ ಸ್ವಾಮಿ ಧನ್ಯವಾದ ಸಮರ್ಪಿಸಿದರು.
ರಘುರಾಜ್ ಹೆಚ್.ಕೆ…9449553305….