
ತೀರ್ಥಹಳ್ಳಿ : ತಾಲೂಕಿನ ಆರಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತಿಯಾದ ಮಳೆಯಿಂದ ವಾಮನ ಕಿಣಿಯವರ ಮನೆ ಗೋಡೆ ಕುಸಿತವಾಗಿದೆ.
ಗೃಹ ಸಚಿವರ ಅಧ್ಯಕ್ಷತೆಯಲ್ಲಿ ನಿನ್ನೆ ತಾಲ್ಲೂಕು ಅಧಿಕಾರಿಗಳ ಗ್ರಾಮ ಪಂಚಾಯಿತಿ ಅಧಿಕಾರಿಗಳ ಸಭೆಯನ್ನು ನಡೆಸಲಾಗಿದ್ದು ಅಧಿಕಾರಿಗಳು ದಿನದ 24ಗಂಟೆಯೂ ಅತಿವೃಷ್ಟಿ ವಿಚಾರದಲ್ಲಿ ಕರ್ತವ್ಯಕ್ಕೆ ಸಿದ್ಧರಾಗಿರಬೇಕು ಎಂಬುದಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ . ಆರಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಮನ ಕಿಣಿ ಬಿನ್ ಜನಾರ್ದನ ಕಿಣಿ ಅವರ ಮನೆ ಗೋಡೆ ಭಾರಿ ಮಳೆಯಿಂದ ಕುಸಿದು ಬಿದ್ದಿರುತ್ತದೆ .
ಸುದ್ದಿ ತಿಳಿದ ತಕ್ಷಣ ಗ್ರಾಮ ಪಂಚಾಯ್ತಿ ಸದಸ್ಯ ಮಹೇಶ್ ರವರು ಪಂಚಾಯಿತಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿದ್ದಾರೆ ತಾಲೂಕು ಆಡಳಿತಕ್ಕೆ ಮಾಹಿತಿಯನ್ನು ರವಾನಿಸಿದ್ದು .ತೀರ್ಥಹಳ್ಳಿ ತಹಸೀಲ್ದಾರ್ ರವರು ತಕ್ಷಣ ಪರಿಹಾರವನ್ನು ಘೋಷಣೆ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ .ವಾಸ ಮಾಡುವ ಮನೆಗಳಿಗೆ ಹಾನಿಯಾದಾಗ ತಕ್ಷಣ ಪರಿಹಾರವನ್ನು ನೀಡ ಬೇಕಾದ ಅತಿ ಅಗತ್ಯ ಇದೆ .ಮಳೆಗಾಲದಲ್ಲಿ ಬೇರೆ ವ್ಯವಸ್ಥೆ ಇಲ್ಲದೆ ಮಳೆಯಿಂದ ಹಾನಿಗೆ ಒಳಪಟ್ಟ ಮನೆಗಳನ್ನೇ ಸರಿಪಡಿಸಿಕೊಂಡು ವಾಸ ಮಾಡಬೇಕಾದ ಸ್ಥಿತಿ ಮಲ್ನಾಡ್ ಪ್ರದೇಶದಲ್ಲಿದೆ .ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮಳೆಯಿಂದ ರೈತರಿಗೆ ,ಜನರಿಗೆ ,ಯಾವುದೇ ಸ್ವತ್ತುಗಳಿಗೆ ,ಜಮೀನುಗಳಿಗೆ ನಷ್ಟವಾದರೆ ರಸ್ತೆಗೆ, ಕಿರುಸೇತುವೆ ಗಳಿಗೆ ಹಾನಿಯಾದರೆ ನಮ್ಮ ಗಮನಕ್ಕೆ ತಂದರೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು .
ಮಾಹಿತಿ: ಲಿಯೊ ಅರೋಜಾ…
#####################################
ರಘುರಾಜ್ ಹೆಚ್.ಕೆ…9449553305….