
ಶಿವಮೊಗ್ಗ : ಹರ್ಷನ ಅಕ್ಕ ಅಶ್ವಿನಿ ತಮ್ಮ ಬಗ್ಗೆ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ ಮಾತನಾಡಿದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ಹರ್ಷನ ಕುಟುಂಬದೊಂದಿಗೆ ನಾನಿದ್ದೇನೆ, ಎಲ್ಲವೂ ಬಹಿರಂಗವಾಗಿ ಮಾತನಾಡಲು ಆಗುವುದಿಲ್ಲ ನನ್ನದೆ ಆದ ಇತಿಮಿತಿಗಳಿವೆ ಎಂದು ಪ್ರತಿಕ್ರಿಸಿದರು.
ಅಮರನಾಥ ಯಾತ್ರಿಗಳನ್ನು ಕರೆ ತರಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ :
ಶಿವಮೊಗ್ಗದಲ್ಲಿ ಮಾತನಾಡಿದ ಗೃಹಸಚಿವ ಆರಗ ಜ್ಞಾನೇಂದ್ರರವರು ಅಮರನಾಥ ಯಾತ್ರಿಗಳನ್ನು ಕರೆತರಲು ತಂಡ ರಚಿಸಲಾಗಿದೆ. ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ. ಅತಿ ವೃಷ್ಟಿಯಿಂದ ಆಗಿರುವ ಹಾನಿಯ ಬಗ್ಗೆ ಸರ್ಕಾರ ಗಮನ ಹರಿಸಲಿದೆ ಎಂದರು.
ಹರ್ಷ ಅಕ್ಕನ ಬಳಿ ಸಮಾಧಾನದಿಂದ ಮಾತನಾಡಿದ್ದೇನೆ ಗೃಹ ಸಚಿವರ ಸ್ಪಷ್ಟನೆ :
ಹರ್ಷ ಅಕ್ಕ ಅಶ್ವಿನಿ ಬಳಿ ಸಮಾಧಾನದಿಂದ ಮಾತನಾಡಿದ್ದೇನೆ. ಶ್ರೀರಾಮ ಸೇನೆಯ20 ಕ್ಕೂ ಹೆಚ್ಚು ಕಾರ್ಯಕರ್ತರೊಂದಿಗೆ ಬಂದಿದ್ದರು. ಅವರಿಗೂ ಸಹ ಹರ್ಷನ ಅಕ್ಕನ ವರ್ತನೆಯಿಂದ ಬೇಜಾರಾಗಿದೆ ಎಂದರು.
ಗೃಹ ಸಚಿವರಾಗಿ ನನ್ನದೇ ಆದ ಇತಿಮಿತಿಗಳಿವೆ ಎಲ್ಲವನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ :
ಗೃಹ ಸಚಿವನಾಗಿ ನನಗೆ ನನ್ನದೇ ಆದ ಇತಿಮಿತಿಗಳಿದೆ. ಅವರು ಕೇಳುವ ಪ್ರತಿ ವಿಷಯಕ್ಕೂ ಉತ್ತರಿಸಲಾರೆ . ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಸೇರಿದಂತೆ ಎಲ್ಲರೂ ನನ್ನ ರಾಜೀನಾಮೆ ಕೇಳುವುದು ಸಹಜ. ಏನೇ ಆದರೂ ಸಹ ಗೃಹಸಚಿವರದ್ದೇ ರಾಜೀನಾಮೆ ಕೇಳೋದು, ಎನೂ ಮಾಡೋಣ ಎಂದು ನಕ್ಕರು.
ನಾನು ಹರ್ಷ ಕುಟುಂಬದ ಜೊತೆಗೆ ಇದ್ದೇನೆ ಭಯಪಡುವ ಅಗತ್ಯತೆ ಇಲ್ಲ ಕಾನೂನಿನ ಪ್ರಕಾರ ಎಲ್ಲರಿಗೂ ಶಿಕ್ಷೆ ಆಗುತ್ತದೆ ಗೃಹ ಸಚಿವರ ಸ್ಪಷ್ಟನೆ :
ನಾನು ಹರ್ಷನ ಕುಟುಂಬದೊಂದಿಗಿದ್ದೇನೆ. ಪರಪ್ಪನ ಅಗ್ರಹಾರದಿಂದ ಹರ್ಷ ಕೊಲೆ ಆರೋಪಿಗಳು ಮೊಬೈಲ್ ಕರೆಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ತಪ್ಪಿತಸ್ಥರ ವಿರುದ್ದ ಎಫ್ಐ ಆರ್ ದಾಖಲಿಸಲಾಗಿದೆ ಯಾರೇ ತಪ್ಪಿತಸ್ಥರಾದರು ಅವರಿಗೆ ಖಂಡಿತ ಶಿಕ್ಷೆ ಆಗಲಿದೆ ಅದರಲ್ಲಿ ಅನುಮಾನವಿಲ್ಲ. ಎಂದು ಸ್ಪಷ್ಟಪಡಿಸಿದರು..
ರಘುರಾಜ್ ಹೆಚ್.ಕೆ…9449553305….