
ಶಿವಮೊಗ್ಗ: ಸ್ವಾಭಿಮಾನಿ ಎಸ್ ಸಿ, ಎಸ್ ಟಿ ಹೋರಾಟ ಸಮಿತಿಯ ವತಿಯಿಂದ ನಿವೃತ್ತ ನ್ಯಾಯಮೂರ್ತಿ ಹೆಚ್ ಎಸ್ ನಾಗಮೋಹದಾಸ್ ನೀಡಿರುವ ವರದಿ ಯಂತೆ ಪರಿಶಿಷ್ಟ ಜಾತಿಗಳಿಗೆ ಶೇ 15 ರಿಂದ 17 ಕ್ಕೆ ಹಾಗೂ ಪರಿಶಿಷ್ಟ ಪಂಗಡಗಳಿಗೆ ಶೇ 3 ರಿಂದ 7.5 ಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ,ಹಾಗೂ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾ ನಂದ ಮಹಾ ಸ್ವಾಮಿಗಳು ನಡೆಸುತ್ತಿರುವ ಅಹೋ ರಾತ್ರಿ ಅನಿರ್ದಿಷ್ಟ ಕಾಲ ದ ಧರಣಿ ಸತ್ಯಾಗ್ರಹವನ್ನು ಬೆಂಬಲಿಸಿ ಇಂದು ಶಿವಮೊಗ್ಗ ಜಿಲ್ಲಾ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಮಾಡುವುದರ ಮೂಲಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ದ ಸಂ ಸ. ರಾಜ್ಯ ಸಂಚಾಲಕರಾದ ಎಂ ಗುರುಮೂರ್ತಿ, ಶಿಕಾರಿಪುರದ ಜೆ ಡಿ ಎಸ್ ಮುಖಂಡ ಬಳಿಗಾರ್, ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ಲಕ್ಷ್ಮಣ,ಭೋವಿ ಸಮಾಜದ ಅಧ್ಯಕ್ಷರಾದ ರವಿಕುಮಾರ್ ಮೊದಲಾದವರನ್ನು ಉಪಸ್ಥಿತರಿದ್ದರು.
ರಘುರಾಜ್.ಹೆಚ್.ಕೆ. 9449553305……..