
ಬೆಂಗಳೂರು : ಹಿಂದೂ ಧರ್ಮದ ಅದ್ವಿತೀಯ ಶ್ರೇಷ್ಠ ಪರಂಪರೆ ಎಂದರೆ ‘ಗುರು-ಶಿಷ್ಯ ಪರಂಪರೆ’ ! ರಾಷ್ಟ್ರ ಮತ್ತು ಧರ್ಮವು ಸಂಕಷ್ಟದಲ್ಲಿರುವಾಗ ಸುವ್ಯವಸ್ಥೆಯನ್ನು ನಿರ್ಮಿಸುವ ಮಹಾನ್ ಕಾರ್ಯವನ್ನು ಗುರು-ಶಿಷ್ಯರು ಮಾಡಿದ ಗೌರವಶಾಲಿ ಇತಿಹಾಸವು ಭಾರತಕ್ಕೆ ಲಭಿಸಿದೆ. ಆಯಾ ಸಮಯದಲ್ಲಿ ಅಧರ್ಮವು ಅತಿರೇಕವಾದಾಗ ಭಗವಾನ ಶ್ರೀಕೃಷ್ಣನು ಅರ್ಜುನನಿಂದ, ಆರ್ಯ ಚಾಣಕ್ಯನು ಸಾಮ್ರಾಟ ಚಂದ್ರಗುಪ್ತನಿಂದ ಮತ್ತು ಛತ್ರಪತಿ ಶಿವಾಜಿ ಮಹಾರಾಜರು ಸಂತ ತುಕಾರಾಮ ಮಹಾರಾಜರು ಹಾಗೂ ಸಮರ್ಥ ರಾಮದಾಸಸ್ವಾಮಿಯವರ ಕೃಪೆಯಿಂದ ಆದರ್ಶವಾದ ಧರ್ಮಾಧಿಷ್ಠಿತ ರಾಜ್ಯವನ್ನು ಸ್ಥಾಪಿಸಿದರು. ಇಂದಿಗೂ ರಾಷ್ಟ್ರ ಮತ್ತು ಧರ್ಮ ಇವುಗಳ ದುಃಸ್ಥಿತಿಯುಂಟಾಗಿದೆ. ಇದಕ್ಕೆ ‘ಹಿಂದೂ ರಾಷ್ಟ್ರ’ ಸ್ಥಾಪನೆಯೊಂದೇ ಪರಿಹಾರವಾಗಿದೆ. ಹಿಂದೂ ರಾಷ್ಟ್ರ ಅಂದರೆ ಧರ್ಮನಿಷ್ಠ ಸಮಾಜವನ್ನು ರೂಪಿಸಲು ಪ್ರಯತ್ನಿಸುವುದು ಕಾಲಾನುಸಾರ ಸರ್ವೋತ್ತಮ ಗುರುಸೇವೆಯೇ ಆಗಿದೆ. ಈ ಸಂದೇಶವನ್ನು ನೀಡಲು, ‘ಸನಾತನ ಸಂಸ್ಥೆ’ಯ ವತಿಯಿಂದ ೧೩ ಜುಲೈ ೨೦೨೨ ರ ಬುಧವಾರ ಸಂಜೆ ೫.೩೦ ಕ್ಕೆ ಬೆಂಗಳೂರಿನ ವಿವಿಧೆಡೆಗಳಲ್ಲಿ ಗುರುಪೂರ್ಣಿಮಾ ಮಹೋತ್ಸವವನ್ನು ಆಯೋಜಿಸಲಾಗಿದೆ. ಅದರ ವಿವರ ಈ ಕೆಳಗಿನಂತಿದೆ..
೧. ಶ್ರೀ ಪದ್ಮಾವತಿ ಕಲ್ಯಾಣ ಮಂಟಪ, ಕಾರ್ಡ್ ರಸ್ತೆ, ರಾಜಾಜಿನಗರ.
೨. ಶ್ರೀ ಭವಾನಿ ಕಲ್ಯಾಣಮಂಟಪ, ಗಾಂಧಿಬಜಾರ್, ಬಸವನಗುಡಿ.
೩. ಆರ್. ವಿ. ಕಲ್ಯಾಣಮಂಟಪ, ಮಾರುತಿನಗರ, ಯಲಹಂಕ.
ಎಲ್ಲ ರಾಷ್ಟ್ರ ಹಾಗೂ ಧರ್ಮ ಪ್ರೇಮಿ ಹಿಂದೂಗಳು ಕುಟುಂಬ ಸಮೇತರಾಗಿ ಉಪಸ್ಥಿತರಿದ್ದು ಈ ಅಮೂಲ್ಯ ಅವಕಾಶದ ಲಾಭ ಪಡೆದುಕೊಳ್ಳಬೇಕೆಂದು ಈ ಮೂಲಕ ಸನಾತನ ಸಂಸ್ಥೆಯು ಕರೆ ನೀಡುತ್ತಿದೆ.
ಈ ಮಹೋತ್ಸವದಲ್ಲಿ ಶ್ರೀ ವ್ಯಾಸಪೂಜೆ ಮತ್ತು ಪ.ಪೂ. ಭಕ್ತರಾಜ ಮಹಾರಾಜರ ಪ್ರತಿಮೆಯ ಪೂಜೆ (ಗುರುಪೂಜೆ); ‘ಧರ್ಮನಿಷ್ಠ ಸಮಾಜದ ನಿರ್ಮಾಣ ಮತ್ತು ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆಯ ಅವಶ್ಯಕತೆ’ ಈ ವಿಷಯಗಳ ಕುರಿತು ವಕ್ತಾರರಿಂದ ವಿಶೇಷ ಮಾರ್ಗದರ್ಶನ ನಡೆಯಲಿದೆ. ಈ ಗುರುಪೂರ್ಣಿಮೆಯಲ್ಲಿ ‘ರಾಷ್ಟ್ರ ಧರ್ಮ ಸಂಘಟನೆಯ ಅಧ್ಯಕ್ಷರಾದ ಶ್ರೀ. ಸಂತೋಷ ಕೆಂಚಾಂಬ, ಹಿಂದೂ ಹೋರಾಟಗಾರರಾದ ಶ್ರೀ. ಪ್ರಶಾಂತ ಸಂಬರ್ಗಿ, ವಿಶ್ವ ಸನಾತನ ಪರಿಷತ್‌ನ ಅಧಕ್ಷರಾದ ಶ್ರೀ. ಎಸ್. ಭಾಸ್ಕರನ್, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಇವರು ಮಾರ್ಗದರ್ಶನ ಮಾಡಲಿದ್ದಾರೆ. ಈ ಮಹೋತ್ಸವದಲ್ಲಿ ‘ಸ್ವಸಂರಕ್ಷಣ ಪ್ರಾತ್ಯಕ್ಷಿಕೆ’ಯು ವಿಶೇಷ ಆಕರ್ಷಣೆ ಇರಲಿದೆ. ಅಲ್ಲದೆ, ಈ ಮಹೋತ್ಸವದಲ್ಲಿ ಧರ್ಮ, ಅಧ್ಯಾತ್ಮ, ಸಾಧನೆ, ಬಾಲಸಂಸ್ಕಾರ, ಆಚಾರಧರ್ಮ, ಆಯುರ್ವೇದ, ಪ್ರಥಮ ಚಿಕಿತ್ಸೆ, ಸ್ವರಕ್ಷಣೆ, ಹಿಂದೂ ರಾಷ್ಟ್ರ ಮುಂತಾದ ವಿವಿಧ ವಿಷಯಗಳ ಗ್ರಂಥಪ್ರದರ್ಶನ ಹಾಗೂ ರಾಷ್ಟ್ರ-ಧರ್ಮಕ್ಕೆ ಸಂಬಂಧಿಸಿದ ಫಲಕಗಳನ್ನು ಪ್ರದರ್ಶಿಸಲಾಗುವುದು.
ವಿನೋದ ಕಾಮತ,
ರಾಜ್ಯ ವಕ್ತಾರರು, ಸನಾತನ ಸಂಸ್ಥೆ
ಸಂಪರ್ಕ : ೯೩೪೨೫೯೯೨೯೯…
ರಘುರಾಜ್ ಹೆಚ್.ಕೆ…9449553305…..