
ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರವನ್ನು ಸ್ವೀಕರಿಸಿದ್ದಾರೆ. ಈಗ ಎದ್ದಿರುವಂತ ತೀವ್ರ ಕುತೂಹಲವೇ ಬೊಮ್ಮಾಯಿ ಸಂಪುಟದಲ್ಲಿ ಯಾರಿಗೆ ಸಚಿವ ಸ್ಥಾನ ಸಿಗಬಹುದು.. ಯಾರಿಗೆ ಸಿಗೋದಿಲ್ಲ. ಅಲ್ಲದೇ ಉಪ ಮುಖ್ಯಮಂತ್ರಿಗಳ ಪಟ್ಟ ಯಾರಿಗೆಲ್ಲಾ ಸಿಗಲಿದೆ ಎಂಬುದಾಗಿದೆ.

ಈ ಕುರಿತಂತೆ ಬಿಜೆಪಿ ಉನ್ನತ ಮೂಲಗಳಿಂದ ಮಾಹಿತಿ ದೊರೆತಿದ್ದು, ಈ ಬಾರಿಯ ಬೊಮ್ಮಾಯಿ ಸಂಪುಟದಲ್ಲಿ ಯಾರಿಗೆಲ್ಲಾ ಸಚಿವ ಸ್ಥಾನ ನೀಡಲಾಗುತ್ತಿದೆ. ಯಾರೆಲ್ಲಾ ಹೊಸ ಮುಖಗಳನ್ನು ಪರಿಚಯಿಸಲಾಗುತ್ತದೆ. ಬಾಂಬೆ ಫ್ರೆಂಡ್ಸ್ ಗೆ ಯಾರಿಗೆಲ್ಲಾ ಸಚಿವ ಸ್ಥಾನ ಮಿಸ್ ಆಗಲಿದೆ ಎನ್ನುವ ಬಗ್ಗೆ ಒಂದಷ್ಟು ಮಾಹಿತಿ…
ಡಿಸಿಎಂ ಸ್ಥಾನದ ಸಂಭಾವ್ಯರ ಹೆಸರು!!
ಆರ್ ಅಶೋಕ್
ಶ್ರೀರಾಮುಲು
ಸುನೀಲ್ ಕುಮಾರ್
ಗೋವಿಂದ ಕಾರಜೋಳ
ಅಶ್ವತ್ಥನಾರಾಯಣ
ಅರವಿಂದ ಲಿಂಬಾವಳಿ
ನೂತನ ಸಂಪುಟದಲ್ಲಿ ಯಾರೆಲ್ಲ ಇರುತ್ತಾರೆ?

ಬ್ರಾಹ್ಮಣ ಸಮುದಾಯ – ಎಸ್ ಸುರೇಶ್ ಕುಮಾರ್, ರಾಮದಾಸ್
ನಾಯಕ ಸಮುದಾಯದ – ಬಿ ಶ್ರೀರಾಮುಲು
ಲಿಂಗಾಯತ – ಮಾಧುಸ್ವಾಮಿ
ಒಕ್ಕಲಿಗ – ಪ್ರೀತಂ ಗೌಡ, ರಾಜೇಶ್ ಗೌಡ ( ಹಾಸನ )
ಯಾದವ ಸಮುದಾಯದ – ಪೂರ್ಣಿಮಾ ಶ್ರೀನಿವಾಸ್ ( ಚಿತ್ರದುರ್ಗ )
ಎಸ್ ಟಿ ಸಮುದಾಯ – ರೂಪಾಲಿ ನಾಯ್ಕ್ ( ಉತ್ತರ ಕನ್ನಡ )
ಬಿಲ್ಲವ ಸಮುದಾಯ – ಕೋಟಾ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್ ( ಉಡುಪಿ )
ಕುರುಬ ಸಮುದಾಯದ – ಕೆ ಎಸ್ ಈಶ್ವರಪ್ಪ
ಒಕ್ಕಲಿಗ – ಅರಗ ಜ್ಞಾನೇಂದ್ರ ( ಶಿವಮೊಗ್ಗ )
ಎಸ್ಸಿ ಸಮುದಾಯದ – ಅರವಿಂದ ಲಿಂಬಾವಳಿ
ಲಿಂಗಾಯತ – ಉಮೇಶ್ ಕತ್ತಿ
ಒಕ್ಕಲಿಗ – ಸಿಪಿ ಯೋಗೇಶ್ವರ್
ದಲಿತ ಸಮುದಾಯದ – ಎಸ್ ಅಂಗಾರ
ಲಿಂಗಾಯತ – ಮುರುಗೇಶ್ ನಿರಾಣಿ..
ವಲಸಿಗರ ಪೈಕಿ ಯಾರಿಗೆ ಸಚಿವ ಸ್ಥಾನ ಸಿಗಬಹುದು…?
ಎಸ್ ಟಿ ಸೋಮಶೇಖರ್
ಬಿಸಿ ಪಾಟೀಲ್
ಡಾ.ಕೆ.ಸುಧಾಕರ್
ಕೆಸಿ ನಾರಾಯಣಗೌಡ
ಕೆ.ಗೋಪಾಲಯ್ಯ
ಬೈರತಿ ಬಸವರಾಜು
ಎಂಟಿಬಿ ನಾಗರಾಜ
ಶಿವರಾಂ ಹೆಬ್ಬಾರ್
ಆರ್.ಶಂಕರ್
ಯಾರೆಲ್ಲಾ ಹೊಸ ಮುಖಗಳು ಸಂಪುಟಕ್ಕೆ ಸೇರ್ಪಡೆ ಸಾಧ್ಯತೆ ಇದೆ…?
ಅಭಯ್ ಪಾಟೀಲ್
ಆರ್ ಮುನಿರತ್ನ
ಅರವಿಂದ ಬೆಲ್ಲದ್
ಎಂಪಿ ಕುಮಾರಸ್ವಾಮಿ
ಕುಡುಚಿ ರಾಜೀವ್
ಎಂಪಿ ರೇಣುಕಾಚಾರ್ಯ, ರವೀಂದ್ರ ನಾಥ್, ಮೂಡಾಳು ವಿರೂಪಾಕ್ಷಪ್ಪ
ಪಿ ದತ್ತಾತ್ರೇಯ ಪಾಟೀಲ ರೇವೂರ
ಕೆಜಿ ಬೋಪಯ್ಯ, ಅಪ್ಪಚ್ಚು ರಂಜನ್
ಬಸನಗೌಡ ಪಾಟೀಲ್ ಯತ್ನಾಳ್
ಜಿ.ತಿಪ್ಪಾರೆಡ್ಡಿ
ಯಾರನ್ನು ಸಂಪುಟದಿಂದ ಕೈಬಿಡಬಹುದು?
ಆನಂದ್ ಸಿಂಗ್
ಜಗದೀಶ್ ಶೆಟ್ಟರ್
ಸಿಸಿ ಪಾಟೀಲ್
ಪ್ರಭು ಚೌವ್ಹಾನ್
ಶ್ರೀಮಂತ ಪಾಟೀಲ್
ಶಶಿಕಲಾ ಜೊಲ್ಲೆ
ಇತರ ಹಲವು ರಾಜಕೀಯ ಲೆಕ್ಕಾಚಾರಗಳು ನೂತನ ಸಂಪುಟಕ್ಕೆ ನಡೆಯುತ್ತಿದ್ದು. ನೂತನ ಮುಖ್ಯಮಂತ್ರಿಯಾದ ಬಸವರಾಜ್ ಬೊಮ್ಮಾಯಿ ಅವರು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದು. ನಾಳೆ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಒಂದು ವಾರದೊಳಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ.
ಜಗದೀಶ್ ಶೆಟ್ಟರ್ ಹೇಳಿಕೆ ಬೆನ್ನಲ್ಲೇ ಮಾಜಿ ಸಚಿವ ಈಶ್ವರಪ್ಪ ಮಹತ್ವದ ಹೇಳಿಕೆ!!
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಜಗದೀಶ್ ಶೆಟ್ಟರ್ ಅವರು ನೂತನ ಸಂಪುಟದಲ್ಲಿ ಸೇರುವುದಿಲ್ಲ ಎಂದು ಈಗಾಗಲೇ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆ ಬೆನ್ನಲ್ಲೇ ಬಿಜೆಪಿಯ ಇನ್ನೋರ್ವ ಹಿರಿಯ ನಾಯಕ ಮಾಜಿ ಸಚಿವ ಈಶ್ವರಪ್ಪ ಅವರು ಇಂದು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ಕರೆದಿದ್ದು.
ಈ ಸುದ್ದಿಗೋಷ್ಠಿಯಲ್ಲಿ ಈಗಾಗಲೇ ರಾಜ್ಯಾದ್ಯಂತ ಹಲವು ಜನರು ಪಕ್ಷಾತೀತವಾಗಿ ನಾನು ಡಿಸಿಎಂ ಆಗಬೇಕೆಂದು ಅಪೇಕ್ಷೆ ಪಡುತ್ತಿದ್ದಾರೆ. ಆದರೆ ಪಕ್ಷ ಹಾಗೂ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಆ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ. ಪಕ್ಷ ಸಂಘಟಿಸುವಲ್ಲಿ ಮುಂದಿನ ದಿನಗಳಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ಮುಂದಿನ ಎರಡು ವರ್ಷಗಳಲ್ಲಿ ಪಕ್ಷ ಸಂಘಟಿಸಿ ಬಹುಮತದಿಂದ ಅಧಿಕಾರಕ್ಕೆ ತರುತ್ತೇವೆ.
ಇದೇ ಸಂದರ್ಭದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪನವರು ಬಸವರಾಜ್ ಬೊಮ್ಮಾಯಿ ರಬ್ಬರ್ ಸ್ಟಾಂಪ್ ಮುಖ್ಯಮಂತ್ರಿ ಅಲ್ಲ, ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು. ಹಾಗೆ ಉತ್ತರ ಕರ್ನಾಟಕದ ಮುಖ್ಯಮಂತ್ರಿ ಆಗಿರುವುದರಿಂದ ಉತ್ತರ ಕರ್ನಾಟಕ ಅಭಿವೃದ್ಧಿ ಪಡಿಸುವುದರ ಜೊತೆಗೆ ಇಡೀ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಪ್ರಯತ್ನಿಸುತ್ತೇವೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಜಗದೀಶ್ ಶೆಟ್ಟರ್ ನಿರ್ಧಾರದಂತೆ ನನ್ನ ನಿರ್ಧಾರ ಇಲ್ಲ!!
ಜಗದೀಶ್ ಶೆಟ್ಟರ್ ಈಗಾಗಲೇ ನೂತನ ಸಚಿವ ಸಂಪುಟದಲ್ಲಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ನಾನು ಪಕ್ಷದ ಹೈಕಮಾಂಡ್ ನಿಲುವಿಗೆ ಬದ್ಧನಾಗಿರುತ್ತೇನೆ. ಪಕ್ಷ ಯಾವ ಜವಾಬ್ದಾರಿ ಕೊಟ್ಟರು ನಿಭಾಯಿಸಿಕೊಂಡು ಹೋಗುತ್ತೇನೆ. ಎಂದು ಹೇಳಿದರು.
ವರದಿ… ರಘುರಾಜ್ ಹೆಚ್, ಕೆ….
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ….9449553305….