
ಮೂಲತಃ ಕೃಷಿ ಕುಟುಂಬದಲ್ಲಿ ಜನಿಸಿದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಅವರು 15/3/1951 ರಂದು ತೀರ್ಥಹಳ್ಳಿ ತಾಲೂಕು ಅಗ್ರಹಾರ ಹೋಬಳಿ ಆರಗ ಪಂಚಾಯತ್ ಹಿಸಣ ಗ್ರಾಮದ ರಾಮಣ್ಣ ಗೌಡ ಮತ್ತು ಚಿನ್ನಮ್ಮ ದಂಪತಿಯ ಒಂಬತ್ತು ಮಕ್ಕಳಲ್ಲಿ ಮೊದಲನೇ ಮಗನಾಗಿ ಜನಿಸಿದರು .
ಆರಗದಲ್ಲಿ ಪ್ರಾಥಮಿಕ ವಿಧ್ಯಾಭ್ಯಾಸ ಮುಗಿಸಿ ಬಡತನದ ಕಾರಣದಿಂದ ವಿಧ್ಯಾಭ್ಯಾಸ ಮೊಟಕುಗೊಳಿಸುವ ಹಂತದಲ್ಲಿ ಇದ್ದಾಗ ತಾರಗೊಳ್ಳಿ ನಾಗರಾಜ್ ರಾವ್ ಎನ್ನುವ ಆರ್ ಎಸ್ ಎಸ್ ಪ್ರಮುಖರ ಕಣ್ಣಿಗೆ ಬಿದ್ದ ಬಾಲಕ ಜ್ಞಾನೇಂದ್ರರನ್ನು ಬಿ ಕಾಂ ವರೆಗೆ ಓದಿಸಿ ಶಿಕ್ಷಣ ಕೊಡಿಸಿದ ಕೀರ್ತಿ ಶ್ರೀಯುತ ನಾಗರಾಜರಾವ್ ಅವರದ್ದು.
ಹೀಗೆ ನಾಗರಾಜರಾವ್ ಬೆಂಬಲದಿಂದ ಮುಂದೆ ಬಂದ ಆರಗ ಜ್ಞಾನೇಂದ್ರ, ಬಾಲಕನಾಗಿದ್ದಾಗ ವಿದ್ಯಾರ್ಥಿ ದೆಸೆಯಿಂದಲೇ,
RSS ಸಂಪರ್ಕ,,ಆರ್ ಎಸ್ ಎಸ್ ಪೂರ್ಣ ಶಿಕ್ಷಣ ಪಡೆದು ಶಾಖೆಯಲ್ಲಿ ಮುಖ್ಯ ಶಿಕ್ಷಕನಾಗಿ ಕಾರ್ಯ ನಿರ್ವಹಣೆ ಮಾಡಿದರು.
ತುರ್ತು ಪರಿಸ್ಥಿತಿ ಹೋರಾಟದಲ್ಲಿ ಬಾಗಿ ಭಾಗಿಯಾದ ಜ್ಞಾನೇಂದ್ರ, ಸುಮಾರು6 ತಿಂಗಳು ಕಾಲ ಜೈಲು ವಾಸ ಅನುಭವಿಸಿದರು.
ರಾಜಕೀಯಕ್ಕೆ ಪ್ರಥಮ ಹಂತದ ಪಾದಾರ್ಪಣೆ....
ಪ್ರಥಮ ಹಂತವಾಗಿ ತಾಲೂಕು ಬೋರ್ಡ್ ಚುನಾವಣೆ ಮೂಲಕ ಸಕ್ರಿಯ ರಾಜಕಾರಣಕ್ಕೆ ಧುಮುಕಿದ ಜ್ಞಾನೇಂದ್ರ ನಂತರ,
1983 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಗಿ ಸ್ಪರ್ಧಿಸಿ ಕೇವಲ 2000 ಮತಗಳ ಅಂತರದಲ್ಲಿ ಸೋಲು ಅನುಭವಿಸಿದರು.
ಸೋತರು ಮತ್ತೆ ಸ್ಪರ್ಧೆ…
ನಂತರ 1985 ರ ಚುನಾವಣೆಯಲ್ಲಿ, ಹಾಗೂ1989 ರ ಚುನಾವಣೆಯಲ್ಲಿ ಸ್ಪರ್ಧಿಸಿ ಮತ್ತೆ ಸೋಲು ಅನುಭವಿಸಿದರು.
ಈ ಮಧ್ಯೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಕಾರ್ಯ ನಿರ್ವಹಣೆ….
ವಿಧಾನಸಭೆ ಚುನಾವಣೆ ಮಧ್ಯದಲ್ಲಿ ಜಿಲ್ಲಾ ಪರಿಷತ್ ಚುನಾವಣೆಗೆ ಸ್ಪರ್ದಿಸಿ ಗೆಲವು ಸಾಧಿಸಿದರು.
ಇದೇ ಸಂಧರ್ಭದಲ್ಲಿ ಶಿವಮೊಗ್ಗ ಹಾಲು ಒಕ್ಕೂಟಕ್ಕೆ ನಿರ್ಧೆಶಕರಾಗಿ ಆಯ್ಕೆಯಾಗಿ ಶಿಮೂಲ್ ಅಧ್ಯಕ್ಷರಾಗಿಯು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದರು.
1994 ರ ಚುನಾವಣೆಯಲ್ಲಿ ಡಿ ಬಿ ಚಂದ್ರೆಗೌಡರನ್ನು ಸೋಲಿಸಿ ವಿಧಾನಸಭೆಗೆ ಆಯ್ಕೆಯಾದರು.
ನಂತರ ನಡೆದದ್ದು ಮಾತ್ರ ಇತಿಹಾಸ….
ಆ ನಂತರದಲ್ಲಿ ಸತತ ಮೂರು ಗೆಲುವು ,ತೀರ್ಥಹಳ್ಳಿ ಯಲ್ಲಿ ಒಮ್ಮೆ ಗೆದ್ದವರು ಮತ್ತೆ ಗೆಲ್ಲಲಾಲರು ಎನ್ನುವ ಧಾಖಲೆ ಮುರಿದು ಸತತ ಮೂರು ಬಾರಿ ಗೆಲುವು ಸಾಧಿಸಿದ ಕೀರ್ತಿ ಆರಗ ಜ್ಞಾನೇಂದ್ರ ಅವರದು.
ನಂತರ ಮತ್ತೆ ಸೋಲಿನ ಕಹಿ ಅನುಭವಿಸಿದ ಜ್ಞಾನೇಂದ್ರ…
2008 ವಿಧಾನಸಭಾ ಚುನಾವಣೆಯಲ್ಲಿ ಸೋಲು, 2013 ರ ವಿಧಾನಸಭಾ ಚುನಾವಣೆಯಲ್ಲಿ ಸೋಲು..
ಮತ್ತೆ ಇತಿಹಾಸ ಸೃಷ್ಟಿಸಿದ ಗೆಲುವು…
2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ಯಾರು ಗೆಲ್ಲದೇ ಇರುವಷ್ಟು ದಾಖಲೆಯ 22,000 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಈ ಮಧ್ಯೆ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ರಾಗಿ ಕಾರ್ಯ ನಿರ್ವಹಣೆ…
ಅಡಿಕೆ ಬೆಳೆಗಾರರ ಪರವಾಗಿ ಸತತ ಹೋರಾಟ, ಹತ್ತಾರು ಬಾರಿ ಅಡಿಕೆ ಬೆಳೆಗೆ ಸಂಕಷ್ಟ ಬಂದಾಗಲೆಲ್ಲ ನಿಯೋಗದೊಂದಿಗೆ ದೆಹಲಿಗೆ ಬೇಟಿ ಕೇಂದ್ರ ಸರ್ಕಾರದ ಮುಂದೆ ಅಡಿಕೆ ಪರವಾಗಿ ಹೋರಾಟ,
ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರದಿಂದ ರಚನೆಯಾದ ರಾಜ್ಯ ಅಡಿಕೆ ಬೆಳೆಗಾರರ ಕಾರ್ಯಪಡೆ ರಾಜ್ಯಾಧ್ಯಕ್ಷ, ಮತ್ತು ಯಡಿಯೂರಪ್ಪ ಸರ್ಕರದ ಅವಧಿಯಲ್ಲಿ ರಾಜ್ಯ ಹೌಸಿಂಗ್ ಬೋರ್ಡ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ.
ಒಂದೇ ಪಕ್ಷ ಒಂದೇ ಸಿದ್ದಾಂತ ಸುಮಾರು ನಲವತ್ತೈದು ವರ್ಷಗಳ ಸುಧೀರ್ಘ ರಾಜಕೀಯದ ಅನುಭವ.
1983 ರ ಚುನಾವಣೆಯಲ್ಲಿ ಯುಡಿಯೂರಪ್ಪನರ ಜೊತೆ ಚುನಾವಣೆಗೆ ಸ್ಪರ್ಧೆ ಮಾಡಿದ ಕೆಲವೇ ನಾಯಕರಲ್ಲಿ ಜ್ಞಾನೇಂದ್ರ ಕೂಡ ಒಬ್ಬರು.
ಸೈದ್ದಾಂತಿಕ ಬದ್ದತೆ, ಒಂದಷ್ಟು ಪ್ರಾಮಾಣಿಕತೆ, ಪಕ್ಷನಿಷ್ಠೆ, ಜನಪರ ಕಾಳಜಿ,ಹೋರಾಟ ಮನೋಭವ,ಅನುಭವ, ಹೊಂದಿರುವಂತ ಕೆಲವೇ ರಾಜಕೀಯ ನಾಯಕರುಗಳಲ್ಲಿ ಆರಗ ಜ್ಞಾನೇಂದ್ರ ಕೂಡ ಒಬ್ಬರು,
ಮಡದಿ ಹಾಗೂ ಎರಡು ಮಕ್ಕಳನ್ನು ಹೊಂದಿರುವಂತಹ ಜ್ಞಾನೇಂದ್ರ ಅವರು ತೀರ್ಥಹಳ್ಳಿಯ ಗುಡ್ಡೆಕೊಪ್ಪ ದ ಹಳ್ಳಿಯಲ್ಲಿ ತಮ್ಮ ಬದುಕಿಗೆ ಒಂದು ನೆಲೆ ಒದಗಿಸಿದ, ವಿದ್ಯಾಭ್ಯಾಸ ಹಾಗೂ ರಾಜಕೀಯ ನೆಲೆ ಒದಗಿಸಿದ, ತಮ್ಮ ನೆಚ್ಚಿನ ಗುರುಗಳಾದ ಶ್ರೀಯುತ ನಾಗರಾಜರಾವ್ ಅವರು ಕೊಟ್ಟಂತಹ ಮಣ್ಣಿನ ಮನೆಯಲ್ಲಿಯೇ ಈಗಲೂ ಅವರ ನೆನಪಿಗಾಗಿ ವಾಸವಾಗಿದ್ದಾರೆ.

ಹೀಗೆ ಕಡುಬಡತನದಲ್ಲಿ 9 ಮಕ್ಕಳಲ್ಲಿ ಮೊದಲೇ ಮಗನಾಗಿ ಜನಿಸಿದ ಶಾಸಕರು ಸುದೀರ್ಘ ರಾಜಕೀಯ ಅನುಭವವನ್ನು ಹೊಂದಿದ್ದಾರೆ.ಕ್ಷೇತ್ರದ ಜನರ ಸಮಸ್ಯೆ ಆಲಿಸುವುದು ಹಾಗೂ ಅದಕ್ಕೆ ಸಂಬಂಧಪಟ್ಟಂತೆ ಪರಿಹಾರ ಒದಗಿಸುವುದು ಇವರ ದಿನ ನಿತ್ಯದ ಕಾಯಕ ಹಾಗೆ ದೀರ್ಘ ರಾಜಕೀಯ ಜೀವನದ ಕೊನೆಯ ಹಂತದಲ್ಲಿ ಕೃಷಿ ಸಚಿವನಾಗುವ ಯೋಗ ಕೂಡಿ ಬಂದಿದೆ.
ಮೂಲತಃ ಕೃಷಿಕರಾಗಿರುವ ಇವರು ರೈತರ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದಾರೆ.

ಮುಂದಿನ ದಿನಗಳಲ್ಲಿ ಇವರಿಂದ ರೈತರು, ಕೃಷಿಕರು, ಒಂದಷ್ಟು ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದು…
ವರದಿ …ರಘುರಾಜ್ ಹೆಚ್ .ಕೆ…
ಸುದ್ದಿ ಮತ್ತು ಜಾಹಿರಾತು ನೀಡಲು ಸಂಪರ್ಕಿಸಿ…9449553305/7892830899…