
ಬೆಂಗಳೂರು> ಆಗಸ್ಟ್<>5->ಅಕ್ರಮ ಹಣ ವರ್ಗಾವಣೆ, ಐಎಂಎ ಹಗರಣ ಸೇರಿದಂತೆ ಹಲವಾರು ವಿಚಾರಗಳಿಗೆ ಸಂಬಂಧಪಟ್ಟಂತೆ ಜಾರಿನಿರ್ದೇಶನಾಲಯ(ಇಡಿ) ಅಧಿಕಾರಿಗಳು ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಶಾಸಕ ಜಮೀರ್ ಅಹಮ್ಮದ್‍ಖಾನ್, ಮಾಜಿ ಶಾಸಕ ರೋಷನ್ ಬೇಗ್ ಅವರುಗಳ ಮನೆ ಸೇರಿದಂತೆ ಆರು ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಮಾಜಿ ಸಚಿವರೂ ಆಗಿರುವ ಕಾಂಗ್ರೆಸ್‍ನ ಹಾಲಿ ಶಾಸಕ ಜಮೀರ್ ಅಹಮ್ಮದ್‍ಖಾನ್ ಅವರ ಕಂಟೋನ್ಮೆಂಟ್ ಬಳಿ ಬಂಬೂಬಜಾರ್ ನಲ್ಲಿರುವ ಮನೆ, ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಯುಬಿ ಸಿಟಿಯ ಪ್ಲಾಟ್, ವಸಂತನಗರದಲ್ಲಿರುವ ಹಳೆಯ ಮನೆ, ಸದಾಶಿವನಗರದಲ್ಲಿರುವ ಆಪ್ತ ಸಹಾಯಕನ ನಿವಾಸ, ಶಿವಾಜಿನಗರದಲ್ಲಿರುವ ಮಾಜಿ ಶಾಸಕ ರೋಷನ್ ಬೇಗ್ ಅವರ ಮನೆ ಸೇರಿದಂತೆ ಒಟ್ಟು ಆರು ಕಡೆ ಆದಾಯ ತೆರಿಗೆಯ ಇಬ್ಬರು ಮತ್ತು ಜಾರಿ ನಿರ್ದೇಶನಾಲಯದ 45ಕ್ಕೂ ಹೆಚ್ಚು ಅಕಾರಿಗಳು ಏಕ ಕಾಲಕ್ಕೆ ದಾಳಿ ಮಾಡಿ ತಪಾಸಣೆ ನಡೆಸಿದ್ದಾರೆ.


ಐಎಂಎ ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಮನ್ಸೂರ್ ಆಲಿಖಾನ್‍ಗೆ ಜಮೀರ್ ಅಹಮ್ಮದ್‍ಖಾನ್ ರಿಚ್ಮಡ್ ಟೌನ್‍ನಲ್ಲಿರುವ 90 ಕೋಟಿಗಳಿಗೂ ಹೆಚ್ಚು ಬೆಲೆ ಬಾಳುವ ಬಂಗಲೆಯನ್ನು ಮಾರಾಟ ಮಾಡಿದ್ದರು. ಆದರೆ, ಸರ್ಕಾರಿ ದಸ್ತಾವೇಜ್‍ಗಳಲ್ಲಿ ಮಾರಾಟದ ವಹಿವಾಟಿನ ಮೌಲ್ಯವನ್ನು 9.38 ಕೋಟಿ ಎಂದು ತೋರಿಸಿ ತೆರಿಗೆ ವಂಚಿಸಲಾಗಿತ್ತು ಎಂಬ ಆರೋಪಗಳಿವೆ. ಇತ್ತೀಚಿಗೆ ಜಮೀರ್ ಅಹ್ಮದ್ ಕೋಟಿಗಟ್ಟಲೆ ಹಣ ಖರ್ಚು ಮಾಡಿ ತಮ್ಮ್ಮ ಪುತ್ರಿಯ ವಿವಾಹ ಅದ್ದೂರಿಯಾಗಿ ಮಾಡಿದ್ದರು.
ಐ ಎಂ ಎ ಜುವೆಲರ್ಸ್ ಪ್ರಕರಣ ಜಮೀರ್ ಗೆ ಮುಳುವಾಗುತಾ, ಎರಡು ವರ್ಷಗಳಿಂದ ತೆರಿಗೆ ವಂಚನೆ ಆರೋಪ ಎದುರಿಸುತ್ತಿರುವ ಜಮೀರ್ ಶ್ರೀಲಂಕಾದಲ್ಲಿ ಮುಜಬಿಲ್ ಎಂಬ ವ್ಯಕ್ತಿಯ ಮೂಲಕ ಕ್ಯಾಸಿನೊ ಗೆ ಹಣ ಹೂಡಿಕೆ ಮಾಡಿರುವ ಆರೋಪವಿದೆ.

ಇದಕ್ಕೆ ಸಂಬಂಧಪಟ್ಟಂತೆ ಜಾರಿನಿರ್ದೇಶನಾಲಯ ಈಗಾಗಲೇ ನೋಟಿಸ್ ನೀಡಿ ವಿಚಾರಣೆ ನಡೆಸಿತ್ತು. ಆದರೆ, ಆ ಸಂದರ್ಭದಲ್ಲಿ ಅಕಾರಿಗಳ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದೆ ಮೂರು ತಿಂಗಳ ಕಾಲಾವಕಾಶ ಕೇಳಿದ್ದರು. ಆದರೆ, ನಿಗದಿತ ಕಾಲಮಿತಿಯಲ್ಲಿ ಉತ್ತರ ನೀಡಿರಲಿಲ್ಲ ಎಂದು ಹೇಳಲಾಗಿದೆ.
ಐಷಾರಾಮಿ ಬಂಗಲೆಗಳು, ಯಾವ ಅರಮನೆಗೂ ಕಮ್ಮಿ ಇಲ್ಲದ ಮನೆಗಳು, ವಿವಿಧ ಕಡೆ ಹಣಹೂಡಿಕೆ, ಸಿಕ್ಕ ಸಿಕ್ಕವರಿಗೆ ಬಹಿರಂಗವಾಗಿ ಹಣ ಹಂಚುವುದು, ವಿದೇಶದಲ್ಲಿ ಹಣ ಹೂಡಿಕೆ, ಸರಿಯಾಗಿ ತೆರಿಗೆ ಪಾವತಿಸದೆ ಇರುವುದು, ಘಟಾನುಘಟಿ ನಾಯಕರು ಗಳ ವಿರುದ್ಧ ಹೇಳಿಕೆಗಳು , ತಮ್ಮ ಪಕ್ಷದ ಅಧ್ಯಕ್ಷರಾದ ಡಿಕೆ ಶಿವಕುಮಾರ್ ವಿರುದ್ಧ ಅಸಮಾಧಾನ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಹೇಳಿಕೆ, ಮಾಜಿ ಮುಖ್ಯಮಂತ್ರಿ ಬಿಎಸ್ ವೈ ವಿರುದ್ಧ ಹೇಳಿಕೆ,
ಇವೆಲ್ಲ ಸೇರಿ ಜಮೀರ್ ಅಹ್ಮದ್ ಖಾನ್ ಇಡಿ, ಐಟಿ, ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಸುಮಾರು ಒಂದು ವಾರಗಳ ಹಿಂದೆಯೇ ಖಾಸಗಿ ಹೋಟೆಲ್ ನಲ್ಲಿ ದುಕೊಂಡು ರಹಸ್ಯ ಕಾರ್ಯಾಚರಣೆ ನಡೆಸಿದ ಸುಮಾರು 45 ಜನ ಅಧಿಕಾರಿಗಳ ತಂಡ ಏಕಕಾಲದಲ್ಲಿ ಎಲ್ಲಾ ಕಡೆ ದಾಳಿ ನಡೆಸಿದೆ.
ಮಾಹಿತಿ ಪ್ರಕಾರ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು ನಿರಂತರವಾಗಿ ದಾಳಿ ಮುಂದುವರೆಸಿದ್ದಾರೆ. ಒಂದು ವೇಳೆ ಸಮಗ್ರ ಸಾಕ್ಷಿ ಸಿಕ್ಕಿದ್ದೇ ಆದಲ್ಲಿ ಜಮೀರ್ ಜೈಲಿಗೆ ಹೋಗುವುದರಲ್ಲಿ ಸಂಶಯವಿಲ್ಲ…..
ವರದಿ …ರಘುರಾಜ್ ಹೆಚ್. ಕೆ…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…