

ಶಿವಮೊಗ್ಗ ನಗರದ ಕರ್ನಾಟಕ ಸಂಘದಲ್ಲಿ ದಿನಾಂಕ : 01-08-2021 ರಂದು ನಡೆದ ಡಾ.ಎನ್ ಆರ್ ಮಂಜುಳರವರ ಅಭಿನಂದನಾ ಸಮಾರಂಭ ವಿಶಿಷ್ಟತೆಯಿಂದ ಕೂಡಿತ್ತು. ಶೈಕ್ಷಣಿಕವಾಗಿ 39 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿದವರಿಗೆ ಅವರ ವಿದ್ಯಾರ್ಥಿಗಳು ಸಹಪಾಠಿಗಳು ಮಂಜುಳಯಾನ ಎಂಬ ಅಭಿನಂದನಾ ಗ್ರಂಥವನ್ನು ಸಮರ್ಪಿಸಿ ಅಭಿನಂದನೆಯನ್ನು ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಪುಷ್ಪಾಂಜಲಿ ಎಂಬ ಸ್ವರಚಿತ ಕವನ ಸಂಕಲನ ಬಿಡುಗಡೆ ಯಾಗಿದ್ದು ವಿಶೇಷವಾಗಿತ್ತು. ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ರಮೇಶ್ ರವರು ಶಿಕ್ಷಕರಿಗೆ ಸಂದ ಬಹುದೊಡ್ಡ ಗೌರವವಿದು. ಶಿಕ್ಷಕ ಸಮುದಾಯಕ್ಕೆ ಮಾದರಿ ಎಂದು ಮಾತನಾಡಿದರು. ಪುಷ್ಪಾಂಜಲಿ ಕವನಸಂಕಲನ ಬಿಡುಗಡೆ ಮಾಡಿದ ಡಯಟ್ ಪ್ರಾಂಶುಪಾಲರಾದ ಶ್ರೀ ಬಸವರಾಜಪ್ಪ ಬಿ ಆರ್ ರವರು ಶಿಕ್ಷಕರು ಸಂಪನ್ಮೂಲ ವ್ಯಕ್ತಿಗಳಾಗಿ ಬೆಳೆದು ಶಿಕ್ಷಣ ಕ್ಷೇತ್ರಕ್ಕೆ ಸಮಾಜಕ್ಕೆ ಆಸ್ತಿಯಾಗಿರುವುದು ಸಂತೋಷದ ವಿಷಯ ಎಂದು ಶುಭ ಹಾರೈಸಿದರು. ಪ್ರಸಿದ್ಧ ಸಾಹಿತಿಗಳಾದ ಎಂ ಎನ್ ಸುಂದರಾಜ್ ರವರು ಮಂಜುಳಾ ರವರ ಜೀವನ ಮುಂದಿನ ಪೀಳಿಗೆಗೆ ಆದರ್ಶ ಅವರ ಸಾಮಾಜಿಕ ಶೈಕ್ಷಣಿಕ ಸೇವೆಗೆ ಸಂದ ಅನೇಕ ಗೌರವ ಸನ್ಮಾನಗಳು ಎಲ್ಲರಿಗೂ ಮಾದರಿ ಎಂದು ತಿಳಿಸಿದರು. ಅಭಿನಂದನಾ ಗ್ರಂಥದ ಸಂಪಾದಕರಾದ ಡಾ. ಬಸವರಾಜಪ್ಪ ಎಂ ರವರು ಮಂಜುಳಾರವರ ಜೀವನ ಇತರರಿಗೆ ಪಾಠವೂ ಹೌದು ಆದರ್ಶವೂ ಹೌದು. ಈ ಕೃತಿ ಶಿಕ್ಷಕಿಯೊಬ್ಬರ ಬಹುಮುಖ ವ್ಯಕ್ತಿತ್ವವನ್ನು ಪರಿಚಯ ಮಾಡಿಕೊಡಲಿದೆ ಹಾಗೂ ಇದೊಂದು ಆಕರ ಕೃತಿಯಾಗಿದೆ.ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಎಂದು ಮಾತನಾಡಿದರು. ಪುಷ್ಪಾಂಜಲಿ ಕವನಸಂಕಲನವನ್ನು ಸಾಹಿತಿಗಳಾದವರು ಜಿ ಎಸ್ ಅನಂತರವರು ಪರಿಚಯಿಸಿದರು ಸಮಾರಂಭದ ಅಧ್ಯಕ್ಷರಾದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ ಬಿ ಶಂಕರಪ್ಪನವರು ಶಿಕ್ಷಕರಿಗೆ ಈ ರೀತಿಯ ಅಭಿನಂದನೆ ಅಪರೂಪ. ಮುಂದಿನ ದಿನಗಳಲ್ಲಿ ಈ ರೀತಿಯ ಮಾದರಿ ಕಾರ್ಯಕ್ರಮಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮೂಡಿ ಶಿಕ್ಷಕರನ್ನು ಗೌರವಿತವಾಗಿ ನಿವೃತ್ತಿ ಜೀವನವನ್ನು ಕಾಣುವ ಹಾಗೆ ಮಾಡುವುದು ಸಮಾಜದ ಕರ್ತವ್ಯ ಎಂದು ಅಧ್ಯಕ್ಷೀಯ ಮಾತುಗಳನ್ನು ಆಡಿದರು. ಈ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳು ಮಂಜುಳಾ ರವರನ್ನು ಅಭಿನಂದಿಸಿದರು. ಈ ಕಾರ್ಯಕ್ರಮವನ್ನು ಚನ್ನಬಸಪ್ಪ ನ್ಯಾಮತಿ ಇವರು ನಿರೂಪಿಸಿದರು, ಶಿವ್ಯಾ ನಾಯ್ಕರವರು ಸ್ವಾಗತಿಸಿ, ನಾಗರತ್ನ ಅವರು ವಂದಿಸಿದರು. ಬಾಬು ಜಾನ್ ರವರು ಹಾಜರಿದ್ದರು

ಡಾ. ಬಸವರಾಜ್ ಎಂ
ಸಂಪಾದಕರು
ಮಂಜುಳಯಾನ ಅಭಿನಂದನಾ ಗ್ರಂಥ ಸಮಿತಿ..
ವರದಿ.. ರಘುರಾಜ್ ಹೆಚ್. ಕೆ..
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…