
ಮಣಿಪುರದಲ್ಲಿ ನಿಧನರಾದ ರಿಪ್ಪನಪೇಟೆಯ ಯೋಧ ಸಂದೀಪ ಇವರ ಪಾರ್ಥಿವ ಶರೀರವನ್ನು ಸ್ವ ಗ್ರಾಮದಲ್ಲಿ ಎಲ್ಲಾ ಗೌರವದೊಂದಿಗೆ ಪಂಚಭೂತ ದಲ್ಲಿ ವಿಲೀನವಾಯಿತು. ಮೃತರ ಆಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಯೋಧರು, ಮಾಜಿಯೋಧರು ಮತ್ತು ಎಲ್ಲಾ ಗಣ್ಯರಿಗೆ ಮಾಜಿ ಯೋಧರ ಕಲ್ಯಾಣ ಟ್ರಸ್ಟ್ ವತಿಯಿಂದ ಧನ್ಯವಾದಗಳನ್ನು. ಸಂಘದ ಅದ್ಯಕ್ಷರಾದ ಅಣ್ಣಪ್ಪ DK, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ಸುಭಾಷ್ಚಂದ್ರ ತೇಜಸ್ವಿ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ, ಶಿವಮೊಗ್ಗ ಘಟಕದ ಕಾರ್ಯದರ್ಶಿಯಾದ ದಿನೇಶ್ , ಮಾಜಿ ಸೈನಿಕರಾದ ಕಿಶೋರ್, ಭಾಸ್ಕರ್, ಸೋಮನ್, ಹರೀಶ್, ಚಂದಪ್ಪ, ಧರ್ಮಪ್ಪ, ಗಂಗಾಧರಪ್ಪ ರಂಗರಾಜು ಮತ್ತು ಹಾಲಿ ಸೇವೆಯಲ್ಲಿರುವ ರಮಾಕಾಂತ್ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಈ ಕ್ರಿಯೆ ಯಶಸ್ವಿಗೆ ಕಾರಣರಾಗಿದ್ದಾರೆ. ಮತ್ತು ಪೊಲೀಸ್ ಅಧಿಕಾರಿಗಳು, ಊರಿನ ಗಣ್ಯರು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.
ನಂತರ ಮಾತನಾಡಿದ ಅವರು ಒಂದೊಂದು ಘಟನೆಗಳು ನಮಗೆ ಒಂದೊಂದು ಪಾಠ ಕಲಿಸುತ್ತದೆ ಎನ್ನೋದು ನಾವೆಲ್ಲಾ ಮರೆಯಬಾರದು. KPC ಜೋಗ ದಲ್ಲಿ ನಡೆದ ಘಟನೆ, ಇಂದು ಯೋಧನ ಪಾರ್ಥಿವ ಶರೀರವನ್ನು ಅವರ ಮನೆಗೆ ಸೇರಿದ ರೀತಿ ಮತ್ತು ಇನ್ನಿತರೆ ಕಾರ್ಯಗಳು ನಮ್ಮ ಸಂಘದ ಬೆಳವಣಿಗೆಯನ್ನು ಸೂಚಿಸುತ್ತದೆ. ಇದು ನಾವೆಲ್ಲಾ ಒಗಟ್ಟಾಗಿದ್ದೇವೆ ಅನ್ನೋದು ಸೂಚಿಸುತ್ತದೆ. ಯಾರು ಮಾಜಿ ಯೋಧರ ಕಲ್ಯಾಣ ಟ್ರಸ್ಟ್ ಸಾಗರ ತಾಲ್ಲೂಕು ಸೇರಿಲ್ಲವೋ ಇವರು ನನಗೆ ಕರೆ ಮಾಡಿ. ಸಂಘಕ್ಕೆ ಸೇರಿಕೊಳ್ಳಿ
ಯೋಧ ಸಂದೀಪ್ ಅವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ ನಮ್ಮ ಟ್ರಸ್ಟ್ ಗೌರವಾಧ್ಯಕ್ಷರಾದ ಸೋಮನ್ , ರಾಜ್ಯ ಉಪಾಧಕ್ಷರಾದ ಶುಭಾಶ್ಚಂದ್ರ ತೇಜಸ್ವಿ, ಕಾರ್ಯದರ್ಶಿಗಳಾದ ಭಾಸ್ಕರ್, ನಿರ್ದೇಶಕರುಗಳಾದ ಗಂಗಾಧರಪ್ಪ, ರಂಗರಾಜು ಬಾಳೆಗುಂಡಿ, ಧರ್ಮಪ್ಪ, ಕಿಶೋರ್ ಬೈರಾಪುರ, ಚಂದ್ರಪ್ಪ, ಹರೀಶ್ ಬಿ, ಹಾಗೂ ಶಿವಮೊಗ್ಗ ಜಿಲ್ಲಾ ಸಂಘದ ಕಾರ್ಯದರ್ಶಿಗಳಾದ ದಿನೇಶ್ ಹಾಗೂ ಅವರ ತಂಡ, ಹಾಜರಿದ್ದ ಹಾಲಿ ಯೋಧರು ಎಲ್ಲರಿಗೂ ಮಾಜಿ ಯೋಧರ ಕಲ್ಯಾಣ ಟ್ರಸ್ಟ್ ಸಾಗರದ ಪರವಾಗಿ ಹೃದಯಪೂರ್ವಕ ವಂದನೆಗಳನ್ನು ಸಲ್ಲಿಸಿದರು. ಕಳೆದ ಮೂರು ದಿನಗಳಿಂದ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರುವಲ್ಲಿ ವಿವಿಧ ರೂಪದಲ್ಲಿ ನಿರಂತರವಾಗಿ ನಮ್ಮೊಂದಿಗೆ ಸಹಕರಿಸಿದ ಹಾಲಿ ಸೇವಯಲ್ಲಿರುವ ರಾಮಕಾಂತ್ ಕೆಳದಿ, ಶುಭಾಶ್ಚಂದ್ರ ತೇಜಸ್ವಿ, ಭಾಸ್ಕರ್ ಟಿ.ಪಿ, ಕಿಶೋರ್ ಬೈರಾಪುರ, ಇವರುಗಳಿಗೆ ವಿಶೇಷವಾದ ವಂದನೆ ಅಭಿನಂದನೆಗಳು. ಹಾಗೂ ಈ ಕಾರ್ಯದಲ್ಲಿ ನಮ್ಮ ಕರೆಗಳಿಗೆ ಸ್ಪಂದಿಸಿ ಸಹಕರಿಸಿದ ಶಿವಮೊಗ್ಗ ಜಿಲ್ಲಾಡಳಿತ, ರಿಪ್ಪಿನಪೇಟೆ ಹಾಗೂ ಹೊಸನಗರ ಪೊಲೀಸ್ ಇಲಾಖೆ, ನಮ್ಮ ಸಾಗರದ ಶಾಸಕರಾದ ಹರತಾಳು ಹಾಲಪ್ಪ ಇವರುಗಳಿಗೆ ವಂದನೆಗಳು ಅರ್ಪಿಸುತ್ತೇನೆ ಎಂದರು…

ಓಂಕಾರ ಎಸ್. ವಿ. ತಾಳಗುಪ್ಪ….