
ಶಿವಮೊಗ್ಗ ಮಾರ್ಚ್ 26:- ಇಲ್ಲಿನ ಸ್ಕೌಟ್ ಭವನದಲ್ಲಿ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತು (ರಿ) ಬೆಂಗಳೂರು ಹಾಗೂ ಜಿಲ್ಲಾ ಶಿಕ್ಷಕರ ಸಾಹಿತ್ಯ ಪರಿಷತ್ತು ಶಿವಮೊಗ್ಗ ಇವರ ಸಹಯೋಗದಲ್ಲಿ “ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸಾಧಕ ಮಹಿಳೆಯರಿಗೆ ಸನ್ಮಾನ” ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಪರಿಷತ್ತಿನ ಗೌರವ ಸಲಹೆಗಾರರಾದ ಶ್ರೀಮತಿ ಮಂಜುಳಾ ಎನ್.ಆರ್.ರವರು ಪ್ರಾರ್ಥನೆಯನ್ನು ಕೋರಿದರು. ಆಗಮಿಸಿದ ಸರ್ವರನ್ನೂ ಶ್ರೀಯುತ ನಾಗರಾಜ್ ಗೌರವಾಧ್ಯಕ್ಷರು ಸ್ವಾಗತ ಕೋರಿದರು. ಕರ್ನಾಟಕ ಶಿಕ್ಷಕರ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಶ್ರೀಮತಿ ಅನಿತಾ ಕೃಷ್ಣ ರವರು ಆಶಯದ ನುಡಿಗಳನ್ನು ಹೇಳುತ್ತಾ ಶಿಕ್ಷಕರಿಗೆ ಭಾಷಾ ಪ್ರೌಢಿಮೆ ಇರುತ್ತದೆ. ಅದನ್ನು ಸದುಪಯೋಪಡಿಸಿಕೊಳ್ಳಲು ಸಾಹಿತ್ಯ ರಚನೆಯಲ್ಲೂ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು. ನಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರೊ. ಅನುರಾಧ ಪಾಟೀಲ್. ನಿರ್ದೇಶಕರು ಡಿ ದೇವರಾಜ್ ಅರಸು ಸಂಶೋಧನಾ ಸಂಸ್ಥೆ ಬೆಂಗಳೂರು ಇವರು ಮಾತನಾಡಿ ಸಮಯ ಪಾಲನೆಗೆ ನಾವೆಲ್ಲರೂ ಬದ್ಧರಾಗಿರಬೇಕು ಹಾಗೂ ನಮ್ಮ ಸುತ್ತಮುತ್ತಲೂ ಇರುವ ಮಹಿಳಾ ಸಾಧಕಿಯರ ಚರಿತ್ರೆಯನ್ನು ನಾವು ತಿಳಿದುಕೊಳ್ಳಬೇಕು. ಅವರೇ ನಮಗೂ ಸ್ಪೂರ್ತಿಯಾಗಬೇಕು ಎಂಬ ಸಂದೇಶವನ್ನು ತಿಳಿಸಿದರು.
ಶ್ರೀಯುತ ಗುರುಮೂರ್ತಿ. ರಾಜ್ಯ ಸಂಚಾಲಕರು. ದಲಿತ ಸಂಘರ್ಷ ಸಮಿತಿ (ರಿ) ಶಿವಮೊಗ್ಗ ಇವರು ಮಾತನಾಡಿ ನಮಗೆ ಪ್ರಪ್ರಥಮ ಮಹಿಳಾ ಶಿಕ್ಷಕಿಯಾಗಿ ಮಹಿಳೆಯ ಏಳ್ಗೆಗೆ ಶ್ರಮಿಸುತ್ತಾ, ಅನೇಕ ಕಟ್ಟುಪಾಡುಗಳನ್ನು ತೊಲಗಿಸಲು ಶ್ರಮಿಸಿದ ಸಾವಿತ್ರಿಬಾಯಿ ಪುಲೆರವರು ಸ್ಪೂರ್ತಿಯಾಗಬೇಕು ಎಲ್ಲಾ ಮಹಿಳೆಯರಿಗೆ ಹಾಗೂ ಡಾ. ಬಿ. ಆರ್ ಅಂಬೇಡ್ಕರ್ ಮತ್ತು ಅವರ ತಾಯಿ ಈಗಿನ ಸಮಾಜಕ್ಕೆ ದೊಡ್ಡ ಸ್ಪೂರ್ತಿ ಎಂದು ಹೇಳುತ್ತಾ ಪ್ರಸ್ತುತ ನಮ್ಮ ಸಮಾಜದಲ್ಲಿ ಈಗಲೂ ಬೇರು ಬಿಟ್ಟಿರುವ ಅಸ್ಪೃಶ್ಯತೆಯನ್ನು ತೊಲಗಿಸಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂಬ ಜಾಗೃತಿಯ ಸಂದೇಶವನ್ನು ರವಾನಿಸಿದರು.
ಶಿಕ್ಷಕರ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಶ್ರೀಯುತ ಶಿವಕುಮಾರ್ ಮಾತನಾಡಿ.. ಶಿವಮೊಗ್ಗ ಕವಿಗಳ ತವರೂರು, ಸಾಹಿತಿಗಳಿಗೆ ಅನುಕೂಲಕರ ವಾತಾವರಣ ಇಲ್ಲಿ ಆಗಾಧವಾಗಿದೆ. ಎಲ್ಲಾ ಶಿಕ್ಷಕರನ್ನೂ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸುವ ಕಾರ್ಯ ನಡೆಯಬೇಕಿದೆ.. ಎಂದು ಹೇಳುತ್ತಾ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ವಿವರಿಸಿ, ಶಿವಮೊಗ್ಗ ಜಿಲ್ಲೆಯ ಶಿಕ್ಷಕರ ಸಾಹಿತ್ಯ ಪರಿಷತ್ತಿನ ಕಾರ್ಯವನ್ನು ಶ್ಲಾಘಿಸಿದರು. ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ರಾಜ್ಯ ಮಟ್ಟದ ಸ್ಪೂರ್ತಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿಗೆ ಭಾಜನರಾದ ಶ್ರೀಮತಿ ಅನುರಾಧ ಪಾಟೀಲ್, ಶ್ರೀಮತಿ ರಜಿಯಾ, ಶ್ರೀಮತಿ ಸಾವಿತ್ರಿ, ಶ್ರೀಮತಿ ಜ್ಯೋತಿ ಸೋಮಶೇಖರ್, ಶ್ರೀಮತಿ ಸವಿತಾ, ಶ್ರೀಮತಿ ಲತಾ ರಾಜ್ ಕುಮಾರ್, ಶ್ರೀಮತಿ ಬನಶಂಕರಿ, ಶ್ರೀಮತಿ ಸುಮತಿ ಜಿ, ಡಾ. ತ್ರಿವೇಣಿ, ಡಾ. ಮಂಜುಳಾ ಎನ್ ಆರ್, ಸಿಸ್ಟರ್ ಎಲಿಸ್ ಲೂರ್ಗ್, ಶ್ರೀಮತಿ ಮೇರಿ ಡಿ ಸೋಜ, ಶ್ರೀಮತಿ ಚಂದ್ರಕಾಂತಿ, ಶ್ರೀಮತಿ ಕೋಕಿಲಾ ಎಲ್ಲರೂ ತಮ್ಮ ಗೌರವವನ್ನು ಮನಃಪೂರ್ವಕವಾಗಿ ಸ್ವೀಕರಿಸಿ ಸಮಾಜಕ್ಕೆ ಮಾದರಿಯಾದರು. ಕಾರ್ಯಕ್ರಮದಲ್ಲಿ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಶ್ರೀ ಅರಳೀಹಳ್ಳಿ ಅಣ್ಣಪ್ಪ, ಶ್ರೀ ರಂಗನಾಥ ಕ ನಾ ದೇವರಹಳ್ಳಿ, ಶ್ರೀ ವಾಗೀಶ್ ಆರಾಧ್ಯ, ಶ್ರೀ ಹಸನ್ ಬೆಳ್ಳಿಗನೂಡು, ಶ್ರೀಮತಿ ನಾಗರತ್ನ, ಶ್ರೀಮತಿ ಸುಜಾತ ಬಸವರಾಜ್, ಶ್ರೀಮತಿ ಸಾವಿತ್ರಮ್ಮ ಎಂ. ಜಿ. , ಶ್ರೀ ಉಮಾಪತಿ ಗಂಗಾರಾಮ್, ಶ್ರೀ ಬಸವನಗೌಡ, ಶ್ರೀಚನ್ನಬಸಪ್ಪ ನ್ಯಾಮತಿ, ಇವರು ಮಹಿಳೆಯ ಕುರಿತ ಕವನ ವಾಚನ ಮಾಡಿ ಮಹಿಳಾ ದಿನಾಚರಣೆಯ ಘನತೆಯನ್ನು ಹೆಚ್ಚಿಸಿದರು.
ಕಾರ್ಯಕ್ರಮದಲ್ಲಿ ಡಾ||ಗಾಯಿತ್ರಿ ಹಾಗೂ ಶ್ರೀಮತಿ ಸಾವಿತ್ರಿ. ಉಪನಿರ್ದೇಶಕರು ಖಜಾನೆ ಶಿವಮೊಗ್ಗ. ಇವರು ಭಾಗವಹಿಸಿ ಪ್ರಶಸ್ತಿಗಳನ್ನು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಸಂಪೂರ್ಣ ತೊಡಗಿಸಿಕೊಂಡು ಅರ್ಥಪೂರ್ಣವಾಗಿ ನಿರೂಪಣೆ ಮಾಡಿದ ಜ್ಯೂನಿಯರ್ ವಿಷ್ಣುವರ್ಧನ್ ಖ್ಯಾತಿಯ ಅಪೇಕ್ಷಾ ಮಂಜುನಾಥ್ ಸರ್ವರಿಗೂ ವಂದಿಸಿ ಅಭಿನಂದಿಸಿದರು. ಜಿಲ್ಲಾಧ್ಯಕ್ಷರಾದ ಶ್ರೀಮತಿ ಅನಿತಾ ಕೃಷ್ಣಾರವರು ಒಂದು ಅಚ್ಚುಕಟ್ಟಾದ ಕಾರ್ಯಕ್ರಮ ಆಯೋಜಿಸಿ ಎಲ್ಲರ ಗಮನವನ್ನು ಸೆಳೆದರು….

ರಘುರಾಜ್ ಹೆಚ್.ಕೆ..9449553305…