
ಶಿವಮೊಗ್ಗ: ನಾಳೆ ಅಂದರೆ ದಿನಾಂಕ 27.03.23 ರ ಸೋಮವಾರ ಬೆಳಿಗ್ಗೆ 11.30 ಗಂಟೆಗೆ ಜಿಲ್ಲೆಯ ನಾಲ್ಕು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತುಂಗಾನಗರ, ಸೀಗೆಹಟ್ಟಿ, ಬೊಮ್ಮನಕಟ್ಟೆ ಹಾಗೂ ಭದ್ರಾವತಿ ತಾಲ್ಲೂಕಿನ ಅಶ್ವಥನಗರ ಗಳಲ್ಲಿ ಮಹಿಳೆಯರ ವಿಶೇಷ ಆರೋಗ್ಯ ತಪಾಷಣೆಗಾಗಿ ಆಯುಷ್ಮತಿ ಕ್ಲಿನಿಕ್ ಪ್ರಾರಂಭಿಸಲಾಗುತ್ತಿದ್ದು.
ಸ್ವಸ್ಥ ಮಹಿಳೆಯರು, ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಎಲ್ಲಾ ತಜ್ಞ ವೈದ್ಯರಿಂದ ಪ್ರತಿ ದಿನಾ ಮಹಿಳೆಯರ ಆರೋಗ್ಯ ತಪಾಷಣೆ ಮಾಡಲಾಗುತ್ತದೆ ರಾಜ್ಯದಲ್ಲಿ ಒಟ್ಟು 95 ಆಯುಷ್ಮತಿ ಕ್ಲಿನಿಕ್ ಗಳನ್ನು ಕರ್ನಾಟಕದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ರವರು ಹಾಗೂ ಆರೋಗ್ಯ ಸಚಿವರಾದ ಡಾ. ಸುಧಾಕರ್ ರವರು ವರ್ಚುವಲ್ ಮೂಲಕ ಬೆಂಗಳೂರಿನಿಂದ ಉದ್ಘಾಟನೆ ಮಾಡಲಿದ್ದು.
ಶಿವಮೊಗ್ಗ ದಲ್ಲಿ ಪ್ರಸೂತಿ ಆರೋಗ್ಯ ಕೇಂದ್ರ ತುಂಗಾನಗರ ದಲ್ಲಿ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮಹಿಳೆಯರು ಈ ಎಲ್ಲಾ ಆಯುಷ್ಮತಿ ಕ್ಲಿನಿಕ್ ಗೆ ಭೇಟಿನೀಡಿ ತಜ್ಞ ವೈದ್ಯರ ಸೇವೆ ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ ಮತ್ತು ಆರ್,ಸಿ, ಹೆಚ್ ಅಧಿಕಾರಿ ಡಾ. ನಾಗರಾಜ ನಾಯ್ಕ್. ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ…

ರಘುರಾಜ್ ಹೆಚ್.ಕೆ…9449553305…