
ಅಭಿವೃದ್ಧಿ ಕುಂಟು ನೆಪದಲ್ಲಿ ರಸ್ತೆ ಕಾಮಗಾರಿ ಅನುಷ್ಠಾನ ಸಂಪೂರ್ಣ ಕಳಪೆ – ಕಳಪೆ ಕಾಮಗಾರಿ ಅಪಘಾತಕ್ಕೆ ಅಹ್ವಾನ – ತಪ್ಪಿದ ಬಾರಿ ದುರಂತ – ಇನ್ನಾದರೂ ಸಂಭಂದ ಪಟ್ಟ ಅಧಿಕಾರಿಗಳು ಇತ್ತ ಗಮನಹರಿಸುತ್ತಾರೋ……?!
ಬ್ಯಾಕೋಡು:- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ವಿಧಾನಸಭಾ ಕ್ಷೇತ್ರದ ಬ್ಯಾಕೊಡು ಬಳಿ ತೋಟದ ಕೆಲಸಕ್ಕೆ ಹಿಟಾಚಿ ಯಂತ್ರವನ್ನು ಹೊತ್ತು ತರುತ್ತಾ ಇದ್ದ ಲಾರಿ ಮಗುಚಿ ಬಿದ್ದ ಘಟನೆ ಬ್ಯಾಕೋಡು ಸಮೀಪದ ಕಾನುಗೋಡು ಹಳ್ಳಿಯಲ್ಲಿ ನಡೆದಿದ್ದು ಅಚ್ಚರಿ ರೀತಿಯಲ್ಲಿ ವಾಹನ ಚಾಲಕ ಮತ್ತು ನಿರ್ವಾಹಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದ್ದು ಮಣ್ಣು ಬ್ಯಾಂಕ್ ಹಾಕಿದ್ದ ನೂತನ ರಸ್ತೆಯಲ್ಲಿ ಲಾರಿ ಚಲಿಸುವಾಗ ಏಕಾಏಕಿ ಮಣ್ಣು ಕುಸಿದ ಕಾರಣ ನಿಯಂತ್ರಣ ತಪ್ಪಿ ಹದಿನೈದು ಅಡಿ ಆಳಕ್ಕೆ ಲಾರಿ ಬಿದ್ದಿದೆ.
ಈ ಘಟನೆಗೆ ಶಾಸಕರ ಅನುದಾನದಲ್ಲಿ ಕೆಲವು ತಿಂಗಳ ಹಿಂದೆ ರಸ್ತೆ ನವೀಕರಣ ಕಾಮಗಾರಿ ನಡೆಸಿದ್ದಾಗ ಕಳಪೆ ಕಾಮಗಾರಿ ನಡೆಸಿದ್ದೆ ಕಾರಣ ಎಂದು ಗ್ರಾಮಸ್ತರು ಆರೋಪಿಸಿದ್ದಾರೆ.
” ರಸ್ತೆ ಬೇಕು ಅಂದೆವು. ಶಾಸಕರು ಊರಿಗೆ ಬಂದರು, ಅನುದಾನ ಕೊಟ್ಟರು. ಆದರೆ ರಸ್ತೆ ಹೀಗೆ ಮಾಡಿದ್ದಾರೆ .ಇಂಜಿನಿಯರ್ ಸುಳ್ಳೇ ಹೇಳ್ತಾರೆ, ಇವತ್ತು ಹಿಟಾಚಿ ಜತೆಗೆ ಟಿಪ್ಪರ್ ಕಣ್ಣೆದುರೇ ಮಗುಚಿ ಬಿತ್ತು, ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಅನ್ನೋ ಕತೆ, ಕಳಪೆ ಕಾಮಗಾರಿ ನಡೆಸಿದ್ದಾರೆ”
ಎಂದು ಯುವ ಮುಖಂಡ ಮಣಿಕಂಠ ಅಸಮಾಧಾನ ವ್ಯಕ್ತಪಡಿಸಿದರು.
ಕಾಮಗಾರಿ ಸರಿಯಾಗಿ ನಿರ್ವಹಣೆ ಮಾಡಿಲ್ಲ. ಎರಡು ಕಡೆ ಇದ್ದ ಮೋರಿಯನ್ನು ಕಾಮಗಾರಿ ವೇಳೆ ಮುಚ್ಚಲಾಗಿದೆ. ಹೊಸಾ ಪೈಪ್ ಹಾಕದೇ ಕೆಲಸ ನಿರ್ವಹಣೆ ಮಾಡಲಾಗಿದೆ. ಮಳೆಗಾಲದಲ್ಲಿ ಈ ರಸ್ತೆ ಉಳಿಯುವುದು ಕಷ್ಟ ಎಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದು ಕಾಮಗಾರಿ ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ…

ಓಂಕಾರ ಎಸ್. ವಿ. ತಾಳಗುಪ್ಪ….