Wednesday, April 30, 2025
Google search engine
Homeಶಿವಮೊಗ್ಗಶ್ರೀರಾಮನವಮಿ ಅಂಗವಾಗಿಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ಶ್ರೀ ಪುಟ್ಟರಾಜ ಗವಾಯಿಗಳ ಅಂಧ ಮಕ್ಕಳ ಸಂಗೀತ ಶಾಲೆಗೆ...

ಶ್ರೀರಾಮನವಮಿ ಅಂಗವಾಗಿ
ಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ಶ್ರೀ ಪುಟ್ಟರಾಜ ಗವಾಯಿಗಳ ಅಂಧ ಮಕ್ಕಳ ಸಂಗೀತ ಶಾಲೆಗೆ ದಿನಸಿ ಸಾಮಾನು-ತರಕಾರಿ ವಿತರಣೆ..!!

ಶಿವಮೊಗ್ಗ : ಜೆಸಿಐ-ಇಂಡಿಯಾ ಹಾಗೂ ಜೋನ್-೨೪ನ ದಾನ್ ಪ್ರಾಜೆಕ್ಟ್ ಅಡಿಯಲ್ಲಿ ಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ಶ್ರೀ ಪುಟ್ಟರಾಜ ಗವಾಯಿಗಳ ಅಂಧ ಮಕ್ಕಳ ಸಂಗೀತ ಶಾಲೆಗೆ ಒಂದು ತಿಂಗಳಿಗೆ ಬೇಕಾದ ದಿನಸಿ ಸಾಮಾನು-ತರಕಾರಿ ವಿತರಣೆ ಮಾಡಲಾಯಿತು.


ಈ ಸಂದರ್ಭದಲ್ಲಿ ಘಟಕಾಧ್ಯಕ್ಷರಾದ ಜೆಸಿ.ಶೋಭಾ ಸತೀಶ್ ಮಾತನಾಡಿ ಕೊಡುವ ಕೈಗಳು ಎಂದಿಗೂ ಬರಿದಾಗದಿರಲಿ, ಮಲೆನಾಡಿನಲ್ಲಿ ಅನೇಕ ಸಂಘ-ಸಂಸ್ಥೆಗಳು ಜನಸೇವೆಯಲ್ಲಿ ನಿರತವಾಗಿದೆ, ವಸತಿ ಸೌಕರ್ಯ ಹೊಂದಿರುವ ಈ ಅಂಧರ ಸಂಗೀತ ಶಾಲೆಯಲ್ಲಿ ಅನೇಕರು ಕಲಾವಿದರಾಗಿ ಹೊರಹೊಮ್ಮಿದ್ದಾರೆ, ಅದಕ್ಕೆ ಸಂಗೀತ ದೇವರೆಂದೇ ಪ್ರಸಿದ್ದಿಯಾಗಿರುವ ಶ್ರೀ ಪುಟ್ಟರಾಜ ಗವಾಯಿಗಳ ಕೃಪಾಕಟಾಕ್ಷವೇ ಸಾಕ್ಷೀಯಾಗಿದೆ, ಇಲ್ಲಿ ಕೂಡ ಯಾವ ನೀರಿಕ್ಷೆಗಳಿಲ್ಲದೆ ಸೇವೆ ಸಲ್ಲಿಸುತ್ತಿರುವವರು ಕಲಾವಿದರನ್ನಾಗಿ ರೂಪುಗೊಳಿಸಿ ಸಾರಸ್ವತಾಲೋಕದಲ್ಲಿ ಅಣಿಗೊಳಿಸುತ್ತಿರುವುದು ಶ್ಲಾಘನೀಯ ಎಂದರು.


ಐಪಿಪಿ.ಜೆಸಿ ಸೌಮ್ಯ ಅರಳಪ್ಪನವರು ಮಾತನಾಡಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಇಲ್ಲಿ ಸೇರ್ಪಡೆಯಾಗಿ ಉಚಿತವಾಗಿ ಸಂಗೀತ ಅಭ್ಯಾಸಿಗಳಾಗಿ ಭಕ್ತಿ ಶ್ರದ್ಧೆ ಹೊಂದಿರುವುದಕ್ಕೆ ಇಲ್ಲಿನ ಸಂಗೀತಮಯದ ವಾತಾವರಣವೇ ಕಾರಣವಾಗಿದೆ, ಭಗವಂತನ ಸೃಷ್ಟಿಯಲ್ಲಿ ಹುಟ್ಟು ಅಂಗವಿಕಲತೆ, ಅಂಧರಾಗಿರುವ ಮಕ್ಕಳು, ವಯಸ್ಕರು, ಸಂಗೀತ ಶಾಲೆಯಲ್ಲಿ ಆತ್ಮರಾಗವನ್ನು ಕಲಿತು ದೊಡ್ಡ-ದೊಡ್ಡ ವೇದಿಕೆಗಳಲ್ಲಿ ಪ್ರಸ್ತುತ ಪಡಿಸಿರುವುದು ಇಂದಿನ ರಿಯಾಲಿಟಿ ಶೋ ಗಳಲ್ಲಿ ನಾವು ನೋಡಿದ್ದೇವೆ ಈ ಸಂಸ್ಥೆಯಿಂದಲು ಸ್ಪರ್ಧಿಗಳಾಗಿರುವುದು ದರ್ಶಿಸಿದ್ದೇವೆ ಎನ್ನುವುದಕ್ಕೆ ಶ್ರೀ ಗಳ ಅಂತರ್ಮುಖಿ ಆಶೀರ್ವಾದವೇ ಕಾರಣ ಎನ್ನಬಹುದು ಎಲ್ಲಾ ಮಕ್ಕಳಿಗೂ ಒಳಿತಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಜೆಸಿ. ಸ್ಮಿತಾ ಮೋಹನ್, ಜೆಸಿ.ಗಾರಾ.ಶ್ರೀನಿವಾಸ್, ಜೆಸಿ.ಪರಮೇಶ್ವರ, ಜೆಸಿ.ದಿವ್ಯಾ ಪ್ರವೀಣ್, ಜೆಸಿ.ಸ್ವಪ್ನಸಂತೋಷ್ ಗೌಡ, ಜೆಸಿ.ಚಿರಂಜೀವಿ ಬಾಬು, ಜೆಸಿ.ಚಂದ್ರಹಾಸ್ ಎನ್ ರಾಯ್ಕರ್, ಜೆಸಿ.ಮಂಜುನಾಥ್, ಜೆಸಿ.ಸಂದೇಶ್ ಸೇರಿದಂತೆ ಸಂಗೀತ ಶಾಲೆಯ ವ್ಯವಸ್ಥಾಪಕರು ಉಪಸ್ಥಿತರಿದ್ದರು….

ರಘುರಾಜ್ ಹೆಚ್.ಕೆ…9449553305…

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...