
ದಾವಣಗೆರೆ : ಜಿಲ್ಲಾ ಬೆರಳು ಮುದ್ರೆ ಘಟಕದಲ್ಲಿ ಪ್ರಸ್ತುತ ಪದನ್ನೂತಿ ಹೊಂದಿ ಹೆಡ್ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಕ್ತರ್ ಎಸ್ ,ಎಂ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.
ಏನು ಇವರ ಕಾರ್ಯಸಾಧನೆಗಳು :
ಜಗಳೂರು ಟೌನ್ ಎಡಿ ಕಾಲೋನಿ ಮಹಮದ್ ಅಲಿ ಮತ್ತು ಯಮನಬಾಯಿ ದಂಪತಿಗಳ ಮಗನಾಗಿ ಜನಿಸಿದ ಇವರು ಎಂ ಎ ಕನ್ನಡ ಪದವೀಧರರಾಗಿದ್ದು. 2011ರಲ್ಲಿ ಪೊಲೀಸ್ ಇಲಾಖೆಗೆ ಸೇರುತ್ತಾರೆ. ನಂತರ ಚಿತ್ರದುರ್ಗ ಹಾಗೂ ಶಿವಮೊಗ್ಗದಲ್ಲಿ ಬೆರಳು ಮುದ್ರೆ ಘಟಕದಲ್ಲಿ ಕಾರ್ಯನಿರ್ವಹಿಸುತ್ತಾರೆ.
ನಂತರ ನವದೆಹಲಿಯಲ್ಲಿ 2015 ರಲ್ಲಿ ಜರಗುವ ಅಖಿಲ ಭಾರತ ಬೆರಳು ಮುದ್ರೆ ತಜ್ಜರ ಪರೀಕ್ಷೆ ಪಾಸು ಮಾಡಿ ದಾವಣಗೆರೆ ಬೆರಳು ಮುದ್ರೆ ಘಟಕಕ್ಕೆ ಹೆಡ್ ಕಾನ್ಸ್ಟೇಬಲ್ ಆಗಿ ಪದನ್ನೂತಿ ಹೊಂದುತ್ತಾರೆ.
170ಕ್ಕೂ ಹೆಚ್ಚು ಸ್ವತ್ತು ಕಳುವು ಪ್ರಕರಣಗಳ ಪತ್ತೆ ಮತ್ತು 4 ಕೊಲೆ ಪ್ರಕರಣಗಳ ಪತ್ತೆ ಹಚ್ಚಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಸಂಶೆಗೆ ಪಾತ್ರರಾಗಿ 159 ನಗದು ಬಹುಮಾನ ಶ್ಲಾಘನ ಪತ್ರಗಳನ್ನು ಪಡೆದಿದ್ದಾರೆ.
ಪ್ರಸ್ತುತ 2021/ 22ನೇ ಸಾಲಿನಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ಭೇದಿಸಿ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ…
ಇವರ ಈ ಸಾಧನೆಗೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿಬಿ ರಿಶ್ವಂತ್ ಹಾಗೂ ಬೆರಳು ಮುದ್ರೆ ಘಟಕದ ಡಿವೈಎಸ್ಪಿ ರುದ್ರೇಶ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ….
ರಘುರಾಜ್ ಹೆಚ್.ಕೆ…9449553305…