ಶಿವಮೊಗ್ಗ ನಗರದ ಶೇಷಾದ್ರಿಪುರಂ ಜನರ ಗೋಳು ಕೇಳುವವರು ಇಲ್ಲವಾಗಿದೆ.ಎನ್ನುವುದು ಶೇಷಾದ್ರಿಪುರಂ ನಾಗರಿಕ ಸಮಿತಿಯ ಸದ್ಯಸ್ಯರ ದೂರು.ದಿನನಿತ್ಯ ಹಲವಾರು ರೈಲುಗಳು ಓಡಾಡುವ ಜಾಗದಲ್ಲಿ, ಹಾಗೂ ಹಲವಾರು ಬಸ್ಸುಗಳು, ವಾಹನಗಳು ಓಡಾಡುವ ಜಾಗದ ಕೆಳಗೆ, ಶೇಷಾದ್ರಿಪುರಂ ಜನರ ಜೀವನ ನಡೆಯುತ್ತಿದೆ.


ಈ ಮೇಲಿನ ಎರಡು ಫೋಟೋಗಳನ್ನು ನೋಡಿ ಈ ವ್ಯಕ್ತಿಗಳಿಗೆ ಯಾವುದೇ ಗುರುತಿನ ಚೀಟಿಗಳಾಗಲಿ, ನಿರ್ದಿಷ್ಟವಿಳಾಸವಾಗಲಿ ಇಲ್ಲ, ಆದರೆ ಇವರ ಕಾಯಂ ವಾಸ ಇದೆ ಶೇಷಾದ್ರಿಪುರಂ ನಲ್ಲಿ ಕೋವಿಡ್ ಎರಡು ಅಲೆಗಳು ಮುಗಿದು ಈಗ ಮೂರನೇ ಅಲೆ ಪ್ರಾರಂಭವಾಗುವ ಹಂತದಲ್ಲಿದೆ.ಸಾಂಕ್ರಮಿಕ ಕಾಯಿಲೆ ತೀವ್ರವಾಗಿ ಹೆಚ್ಚಳವಾಗುತ್ತಿರುವ ಇಂತಹ ಸಂದರ್ಭದಲ್ಲಿ ಇವರಿಗೆ ಸೂಕ್ತ ವ್ಯವಸ್ಥೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಕಲ್ಪಿಸಬೇಕು. ಇಲ್ಲವಾದಲ್ಲಿ ಕೋವಿಡ್ ನಂತಹ ಸಾಂಕ್ರಾಮಿಕ ಕಾಯಿಲೆ ಒಂದು ವೇಳೆ ಇವರಿಗೆ ಬಂದಿದ್ದರೆ ಅದು ಎಲ್ಲರಿಗೂ ಹರಡುವ ಸಾಧ್ಯತೆ ಇದೆ.

ಈ ಮೇಲಿನ ಫೋಟೋ ನೋಡಿ ಇಲ್ಲಿರುವ ಬೀದಿ ಲೈಟಿನ ಕಂಬದಲ್ಲಿ ಬಲ್ಪ್ ಹಾಳಾಗಿ ಬೆಳಕು ಇರುವುದಿಲ್ಲ ಹಾಳಾಗಿ ತುಂಬಾ ಸಮಯವೇ ಹಿಡಿದಿದೆ.
ಹಾಗಾಗಿ ಕತ್ತಲಿರುವ ಇಂತಹ ಜಾಗದಲ್ಲಿ ಹೆಣ್ಣುಮಕ್ಕಳು ಓಡಾಡುವುದು ಕಷ್ಟಕರವಾಗಿದೆ.
ಹಲವು ಅನೈತಿಕ ಅಕ್ರಮ ಚಟುವಟಿಕೆಗಳು ಈ ಕತ್ತಲಲ್ಲಿ ನಡೆಯುತ್ತಿವೆ.ಎನ್ನುವುದು ಸ್ಥಳೀಯರ ದೂರು ಸಂಬಂಧಪಟ್ಟ ಕೋಟೆ ಠಾಣೆಯ ಪೊಲೀಸ್ ಅಧಿಕಾರಿ ಚಂದ್ರಶೇಖರ್ ಅವರು ಹೇಳಿದ ಸಮಯಕ್ಕೆ ಸ್ಥಳಕ್ಕೆ ಭೇಟಿ ನೀಡುತ್ತಾರಾದರೂ ಅವರು ಬಂದಾಗ ಅಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರು ಪರಾರಿಯಾಗುತ್ತಾರೆ.
ಇದು ದಿನನಿತ್ಯದ ಗೋಳಾಗಿದೆ ಸಾರ್ವಜನಿಕರು ಓಡಾಡುವುದು ದುಸ್ತರವಾದ ಇಂಥ ಸ್ಥಳಕ್ಕೆ ಮೊದಲು ಬೀದಿ ದೀಪದ ಅಳವಡಿಕೆ ಆಗಬೇಕು.ನಂತರ ಅಲ್ಲಿ ಅಕ್ರಮ ಚಟುವಟಿಕೆಗಳನ್ನು ನಡೆಸುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಹಾಗೆ ಫೋಟೋದಲ್ಲಿರುವ ವ್ಯಕ್ತಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳು , ಇಲಾಖೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಎನ್ನುವುದು ಸ್ಥಳೀಯ ನಾಗರಿಕ ಸಮಿತಿಯ ಸದಸ್ಯರಾದ ಸುಂದರ್, ವಿಜಯಕುಮಾರ್, ಕುಮಾರ್, ವಡಿವೇಲು, ರಾಜಣ್ಣ ಇವರುಗಳು ಸ್ಥಳೀಯರ ಪರವಾಗಿ ಸಂಬಂಧಪಟ್ಟ ಇಲಾಖೆಗೆ ಅಧಿಕಾರಿಗಳಿಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಆಗ್ರಹ ಹಾಗೂ ಮನವಿ ಮಾಡಿದ್ದಾರೆ. ಪತ್ರಿಕೆ ಕಾಳಜಿ ಕೂಡ ಅದೇ ಆಗಿದೆ…
ವರದಿ… ರಘುರಾಜ್ ಹೆಚ್. ಕೆ…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…