
ಸಂಸದ ಬಿ ವೈ ರಾಘವೇಂದ್ರ ಗರಂ ಆದ ಬೆನ್ನಲ್ಲೇ ವಿಮಾನ ಸಂಚಾರಕ್ಕೆ ಇಂಡಿಗೋ ವಿಮಾನಯಾನ ಸಂಸ್ಥೆ, ಸಕಲ ಸಿದ್ಧತೆ ಪೂರ್ವಭಾವಿ ತಯಾರಿ ನಡೆಸಲಾರಂಭಿಸಿದೆ.
ಶಿವಮೊಗ್ಗ- ಬೆಂಗಳೂರು ನಡುವೆ 78 ಆಸನ ಸಾಮರ್ಥ್ಯದ ವಿಮಾನ ಸಂಚಾರಕ್ಕೆ ಸಂಸ್ಥೆ ಮುಂದಾಗಿದೆ. ಪ್ರತಿದಿನ ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲಿರುವ ವಿಮಾನವು, ಬೆಳಗ್ಗೆ 10.30ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದ್ದು.ನಂತರ ಅದೇ ರೀತಿ ಮಧ್ಯಾಹ್ನ 12 ಗಂಟೆಗೆ ಶಿವಮೊಗ್ಗದಿಂದ ಹೊರಟು 1.30ಕ್ಕೆ ಬೆಂಗಳೂರು ತಲುಪಲಿದೆ ಮುಂದಿನ ಆಗಸ್ಟ್ 11ರಂದು ವಿಮಾನ ಹಾರಾಟ ಪ್ರಾರಂಭವಾಗಲಿದೆ ಎಂದು ಇಂಡಿಗೋ ಸಂಸ್ಥೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ…
ಸೋಗಾನೆಯಲ್ಲಿ ಸರಿಸುಮಾರು ನಾಲ್ಕು ತಿಂಗಳ ಹಿಂದೆ ಅಂದರೆ ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ್ದರು.
ಉದ್ಘಾಟನೆ ಆದ ನಂತರ ನಾಲ್ಕು ತಿಂಗಳ ಬಳಿಕ ಮಲೆನಾಡಿನ ಜನರ ಕನಸು ನನಸಾಗುವ ಕಾಲ ಕೂಡಿ ಬಂದಿದೆ.
ಮುಂದಿನ ದಿನಗಳಲ್ಲಿ ಪ್ರಯಾಣಿಕರ ಅಗತ್ಯತೆಗಳನ್ನು ಗಮನಿಸಿ ಇತರ ರಾಜ್ಯಗಳಿಗೆ ಹಾಗೂ ದೇಶಗಳಿಗೆ ಇಂಡಿಗೋ ಸಂಸ್ಥೆಯಿಂದ ವಿಮಾನ ಬಿಡುವ ಸಾಧ್ಯತೆ ಇದೆ….