
ಶಿವಮೊಗ್ಗ : ನಗರದ ತುಂಗಾನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಗೆ ಒಳಪಡುವ ವಿಜಯನಗರದ ಎರಡನೇ ತಿರುವಿನಲ್ಲಿರುವ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಲ್ಲಿಕಾರ್ಜುನ್ ಅವರ ಪತ್ನಿ ಸುಮಾರು 54 ವರ್ಷದ ಕಮಲಮ್ಮ ಎನ್ನುವ ಮಹಿಳೆಯ ಕೊಲೆಯಾಗಿದ್ದು. ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ :
ಎಕ್ಸಿಕ್ಯೂಟಿವ್ ಇಂಜಿನಿಯರ್ ಮಲ್ಲಿಕಾರ್ಜುನ್ ಅವರು ಶಿವಮೊಗ್ಗ ವಿಜಯನಗರದ 2ನೇ ತಿರುವಿನಲ್ಲಿ ಕಮಲಮ್ಮ ಜೊತೆ ವಾಸವಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು ಒಬ್ಬ ಮಗಳು ಇಂಜಿನಿಯರಿಂಗ್ ಮಾಡಿದ್ದಾರೆ. ಮಗ ಎಂಬಿಬಿಎಸ್ ಮುಗಿಸಿ ಎಂಡಿ ಸೀಟಿಗಾಗಿ ಕಾಯುತ್ತಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಮಗನ ನೇಮಕಾತಿ ಆಗೋದರಲಿತ್ತು . ಅದಕ್ಕೋಸ್ಕರ ಮಲ್ಲಿಕಾರ್ಜುನ್ ಅವರು ಒಂದಷ್ಟು ಹಣವನ್ನು ತಂದು ಮನೆಯಲ್ಲಿ ಇಟ್ಟಿದರು ಇದನ್ನು ಗಮನಿಸಿದ್ದ ಮಲ್ಲಿಕಾರ್ಜುನ್ ಅವರ ಡ್ರೈವರ್ ಮಲ್ಲಿಕಾರ್ಜುನ್ ಅವರ ಮನೆಗೆ ಒಂದಷ್ಟು ಜನರ ಜೊತೆಗೆ ಬಂದು ಹಣ ಕೇಳಿದ್ದನು ಆಗ ಮಲ್ಲಿಕಾರ್ಜುನ ಅವರು ಇಷ್ಟು ಹೊತ್ತಿನಲ್ಲಿ ಏಕೆ ಬಂದಿರಿ ಎಂದು ಬೈದು ಕಳಿಸಿದ್ದರು. ನಂತರ ಮಲ್ಲಿಕಾರ್ಜುನ್ ಅವರು ಸ್ನೇಹಿತರೊಂದಿಗೆ ಗೋವಾ ಪ್ರವಾಸ ಹೋದರು ಇತ್ತ ಮಲ್ಲಿಕಾರ್ಜುನ್ ಮನೆಯಲ್ಲಿ ಇಲ್ಲದ್ದನ್ನು ನೋಡಿಕೊಂಡು ತನ್ನ ಗುಂಪಿನೊಂದಿಗೆ ಮನೆಗೆ ಬಂದು ಪತ್ನಿ ಕಮಲಮ್ಮನ ಹತ್ತಿರ ದುಡ್ಡಿಗಾಗಿ ಬೇಡಿಕೆ ಇಟ್ಟಿದ್ದಾನೆ ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಡ್ರೈವರ್ ಮತ್ತು ಆತನ ಗ್ಯಾಂಗ್ ಕಮಲಮ್ಮನ ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಸಾಯಿಸಿರುವ ಶಂಕೆ ಇದೆ..?! ನಂತರ ಹಣ ತೆಗೆದುಕೊಂಡು ಊರು ಬಿಟ್ಟಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ ?!
ಇತ್ತ ಪ್ರವಾಸದಲ್ಲಿದ್ದ ಮಲ್ಲಿಕಾರ್ಜುನ್ ಪತ್ನಿ ಕಮಲಮ್ಮನಿಗೆ ಕರೆ ಮಾಡಿದ್ದಾರೆ.ಆದರೆ ಕಮಲಮ್ಮ ಕರೆ ಸ್ವೀಕರಿಸಲಿಲ್ಲ ಗಾಬರಿಗೊಂಡ ಪತಿ ಮಲ್ಲಿಕಾರ್ಜುನ್ ತಮ್ಮ ಸ್ನೇಹಿತರಿಗೆ ಕರೆ ಮಾಡಿ ಮನೆಗೆ ಹೋಗಿ ನೋಡುವಂತೆ ಹೇಳಿದ್ದಾರೆ ನಂತರ ಸ್ನೇಹಿತರು ಮನೆಯ ಬಳಿ ಹೋಗಿದ್ದಾಗ ಕತ್ತಲಾದರೂ ಮನೆಯ ಲೈಟ್ ಆನ್ ಆಗಿರಲಿಲ್ಲ ಮನೆಯ ಬಾಗಿಲು ತೆರೆದಿತ್ತು ಮೊಬೈಲ್ ಚಾರ್ಜ್ ಬಳಸಿಕೊಂಡು ಒಳಹೋದ ಸ್ನೇಹಿತರಿಗೆ ಕಾದಿತ್ತು ಶಾಕ್ ಸ್ನೇಹಿತರ ಪತ್ನಿ ಕಮಲಮ್ಮ ಶವವಾಗಿ ಬಿದ್ದಿದ್ದರು. ತಕ್ಷಣ ಸ್ನೇಹಿತರು ಮಲ್ಲಿಕಾರ್ಜುನ್ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ .
ಅಲರ್ಟ್ ಆದ ಶಿವಮೊಗ್ಗ ಪೊಲೀಸರು :
ಇತ್ತ ಅಲರ್ಟ್ ಆದ ಶಿವಮೊಗ್ಗ ಪೊಲೀಸರು ಕೊಲೆಯ ಬಗ್ಗೆ ಮಾಹಿತಿ ಕಲೆಹಾಕಲು ಶುರು ಮಾಡಿದ್ದಾರೆ.
ಪತ್ರಿಕೆ ನಡೆಸಿದ ತನಿಖಾ ವರದಿಯ ಪ್ರಕಾರ ಮಲ್ಲಿಕಾರ್ಜುನ್ ಅವರ ಡ್ರೈವರ್ ಕೊಲೆಗಾರ ಆತನ ಜೊತೆ ಮೂರರಿಂದ ನಾಲ್ಕು ಜನ ಗ್ಯಾಂಗ್ ಇರಬಹುದು ಹಾಗೂ ಮಲ್ಲಿಕಾರ್ಜುನ್ ಅವರು ಮಗನ ಎಂಡಿ ಸೀಟಿಗಾಗಿ ತಂದಿಟ್ಟ ಹಣವನ್ನು ಪಡೆಯಲು ಡ್ರೈವರ್ ಮಾಡಿದ ಕೊಲೆ ಎನ್ನುವುದು ಪತ್ರಿಕೆಗೆ ಇರುವ ಮಾಹಿತಿ.
ಒಟ್ಟಾರೆ ಶಿವಮೊಗ್ಗ ಪೊಲೀಸರು ಫುಲ್ ಅಲರ್ಟ್ ಆಗಿದ್ದು ಎಲ್ಲಾ ಮಾಹಿತಿಯನ್ನು ಕಲೆ ಹಾಕುತ್ತಿದ್ದು. ಸದ್ಯದಲ್ಲಿಯೇ ಕೊಲೆಗಾರರನ್ನು ಬಂಧಿಸುವ ಸಾಧ್ಯತೆ ಇದೆ…
ರಘುರಾಜ್ ಹೆಚ್.ಕೆ…9449553305…