Wednesday, April 30, 2025
Google search engine
Homeರಾಜ್ಯತೀರ್ಥಹಳ್ಳಿ :ABVP ಅಧ್ಯಕ್ಷ ನಿಂದ ಯುವತಿಯರ ನಗ್ನ ಚಿತ್ರ ರೆಕಾರ್ಡ್ ಮಾಡಿ ಬ್ಲಾಕ್ ಮೇಲ್..!NSUI ತೀರ್ಥಹಳ್ಳಿ...

ತೀರ್ಥಹಳ್ಳಿ :ABVP ಅಧ್ಯಕ್ಷ ನಿಂದ ಯುವತಿಯರ ನಗ್ನ ಚಿತ್ರ ರೆಕಾರ್ಡ್ ಮಾಡಿ ಬ್ಲಾಕ್ ಮೇಲ್..!NSUI ತೀರ್ಥಹಳ್ಳಿ ಘಟಕದಿಂದ ಬಂಧಿಸುವಂತೆ ಒತ್ತಾಯ..! ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ ಖಡಕ್ ಎಸ್ ಪಿ ಮಿಥುನ್ ಕುಮಾರ್ ಹೇಳಿದ್ದೇನು..?!


ತೀರ್ಥಹಳ್ಳಿ : ಇತ್ತೀಚಿಗೆ ತೀರ್ಥಹಳ್ಳಿಯಲ್ಲಿ ಅಶ್ಲೀಲ ವಿಡಿಯೋ ಒಂದು ವೈರಲ್ ಆಗುತ್ತಿತ್ತು ಅದು ತೀರ್ಥಹಳ್ಳಿಯಲ್ಲಿ ಎಬಿವಿಪಿ ಅಧ್ಯಕ್ಷ ಹಾಗೂ ಬಿಜೆಪಿಯ ಯುವ ಮುಖಂಡ ಎನ್ನಲಾಗುತ್ತಿದ್ದ ಪ್ರತಿಕ್ ಗೌಡ ಎಂಬ ಯುವಕನದ್ದು ಎಂದು ಈಗ ಬಯಲಿಗೆ ಬಂದಿದೆ.

ಕಾಲೇಜು ಯುವತಿಯರ ನಗ್ನ ಚಿತ್ರಗಳನ್ನು ರೆಕಾರ್ಡ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಪ್ರತಿಕ್ ಗೌಡ :

ಕಾಲೇಜು ಯುವತಿಯರ ನಗ್ನ ಚಿತ್ರಗಳನ್ನು ವಿಡಿಯೋ ರೆಕಾರ್ಡ್ ಮಾಡಿ ನಂತರ ಅವರಿಗೆ ಬ್ಲಾಕ್ ಮೇಲ್ ಮಾಡಿ ಹಣ ತೆಗೆದುಕೊಳ್ಳುವುದು ತನ್ನೊಂದಿಗೆ ಸಹಕರಿಸುವಂತೆ ಪ್ರಚೋದಿಸುವುದು ಮಾಡುತ್ತಿದ್ದ ತೀರ್ಥಹಳ್ಳಿ ಎಬಿವಿಪಿ ಅಧ್ಯಕ್ಷ ಪ್ರತಿಕ್ ಗೌಡ ಎನ್ನುವ ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ತೀರ್ಥಹಳ್ಳಿ ಎನ್ ಎಸ್ ಯು ಐ NSUI ಘಟಕ ಡಿ ವೈ ಎಸ್ ಪಿ ಗಜಾನನ್ ಸುತಾರ್ ಅವರಿಗೆ ಮನವಿ ನೀಡಿ ಒತ್ತಾಯಿಸಿತ್ತು. ಹಾಗೂ ತೀರ್ಥಹಳ್ಳಿಯ ತಾಲೂಕಿನದ್ಯಂತ ತೀವ್ರ ಸಂಚಲನ ಮೂಡಿಸಿತ್ತು ಈ ವಿಡಿಯೋಗಳು ಸಭ್ಯ ಸುಸಂಸ್ಕೃತರ ನಾಡಾದ ತೀರ್ಥಹಳ್ಳಿಯಲ್ಲಿ ಇತ್ತೀಚಿನ ದಿನಗಳಲ್ಲಿ ವಾಟ್ಸಪ್, ಫೇಸ್ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಕೃತ್ಯಗಳು ಹೆಚ್ಚಾಗಿದ್ದು ಅದರಲ್ಲೂ ಆಶ್ಲೀಲ ವಿಡಿಯೋ ಚಿತ್ರಿಸಿ ಬ್ಲಾಕ್ ಮೇಲ್ ಮಾಡುವುದು ಹೆಚ್ಚಾಗಿದೆ. ಈ ಪ್ರಕರಣ ಬೆಳಕಿಗೆ ಬಂದಿದ್ದು ಇನ್ನೆಷ್ಟೋ ಪ್ರಕರಣಗಳು ಮುಚ್ಚಿಹೋಗಿರುವ ಹೋಗಿವೆ ಈ ಯುವಕ ಪ್ರತಿಕ್ ಗೌಡ ಇದೇ ತಿಂಗಳ ಹದಿನಾರರಂದು ಅಶ್ಲೀಲ ವಿಡಿಯೋವನ್ನು ವಾಟ್ಸಪ್ ನಲ್ಲಿ ಹರಿಬಿಟ್ಟಿದ್ದಾನೆ ಯುವತಿಯರಿಗೆ ಎಬಿವಿಪಿ ಸದಸ್ಯತ್ವ ಕೊಡುವುದಾಗಿ ಮೋಸ ಮಾಡಿ ವಂಚಿಸಿ ಅವರ ನಗ್ನ ಚಿತ್ರಗಳನ್ನು ರೆಕಾರ್ಡ್ ಮಾಡಿ ಆಮೇಲೆ ಬ್ಲಾಕ್ ಮೇಲ್ ಮಾಡುತ್ತಿದ್ದ ಎನ್ನಲಾಗುತ್ತಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷರಾದ ಸುಜಿತ್, ಯುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ
ಅಮರ್ ನಾಥ್ ಶೆಟ್ಟಿ, ಪಟ್ಟಣ ಪಂಚಾಯತ್ ಸದಸ್ಯರಾದ ಜಯಪ್ರಕಾಶ್ ಶೆಟ್ಟಿ, ಕಾಂಗ್ರೆಸ್ ಮುಖಂಡ ಅಶ್ವಲ್ ಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ನಗ್ನ ಚಿತ್ರ ಕಳುಹಿಸುವವರಿಗೆ ಎಚ್ಚರಿಕೆ ನೀಡಿದ ಸಿ ಇ ಎನ್ ಪೋಲಿಸ್ ಇನ್ಸ್ಪೆಕ್ಟರ್ ಶಿವಮೊಗ್ಗ:

ಯಾರಾದರೂ ಸಾಮಾಜಿಕ ಜಾಲತಾಣಗಳಲ್ಲಿ ನಗ್ನ ಚಿತ್ರಗಳನ್ನು ಕಳುಹಿಸುವುದು ಬೇರೆಯವರಿಗೆ ಹಿಂಸಿಸುವುದು ಪ್ರಚೋದಿಸುವುದು ಮಾಡಿದರೆ ಅಂತವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ತೀರ್ಥಹಳ್ಳಿ ಯುವಕನನ್ನು ಬಂಧಿಸಿ ಎಫ್ ಐಆರ್ ದಾಖಲಿಸಿ, ಜೈಲಿಗೆ ಕಳುಹಿಸಿದ ತೀರ್ಥಹಳ್ಳಿ ಪೊಲೀಸರು :

ಆರೋಪಿ ಯುವಕನನ್ನು ಈ ಪ್ರಕರಣದಲ್ಲಿ ಬಂಧಿಸಿ ಎಫ್ ಐಆರ್ ದಾಖಲಿಸಿ ತೀರ್ಥಹಳ್ಳಿ ಪೊಲೀಸರು ಇದೀಗ ಜೈಲಿಗೆ ಕಳುಹಿಸಿದ್ದಾರೆ…

ಯುವತಿಯರೇ ಎಚ್ಚರ ,

ಯುವತಿಯರೇ ಎಚ್ಚರವಾಗಿರಿ ಯಾವುದೇ ಆಮಿಷಗಳಿಗೆ ಬಲಿಯಾಗಬೇಡಿ ನಿಮ್ಮನ್ನು ನಂಬಿ ತಂದೆ, ತಾಯಿಗಳು ಬಂದು ಬಳಗದವರು, ಸ್ನೇಹಿತರು ,ಇರುತ್ತಾರೆ ನೀವು ಮಾಡುವ ತಪ್ಪುಗಳಿಗೆ ಅವರು ತಲೆತಗ್ಗಿಸುವುದು ಎಷ್ಟು ಸರಿ ಇಂತಹ ಪ್ರಕರಣಗಳಲ್ಲಿ ಯುವಕರದ್ದು ಎಷ್ಟು ತಪ್ಪು ಇರುತ್ತದೆಯೋ ಅಷ್ಟೇ ತಪ್ಪು, ಯುವತಿಯರದ್ದು ಇರುತ್ತದೆ.. ಆದರೆ ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆ ಮಾತ್ರ ಯುವಕರಿಗೆ ಆಗಿರುತ್ತದೆ ಯುವತಿಯರ ಸಪೋರ್ಟ್ ಇಲ್ಲದೆ ಯುವಕರು ಈ ಕೃತ್ಯ ಎಸಗಲು ಹೇಗೆ ಸಾಧ್ಯ..?!

ಒಟ್ಟಾರೆಯಾಗಿ ಸಭ್ಯ ಸುಸಂಸ್ಕೃತರ ನಾಡು ತೀರ್ಥಹಳ್ಳಿ ಪ್ರಜ್ಞಾವಂತ ನಾಗರಿಕರು ಈ ಪ್ರಕರಣದ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದು ಪ್ರಕರಣಗಳು ಮತ್ತೆ ಮರುಕಳಿಸಬಾರದು ತೀರ್ಥಹಳ್ಳಿಯ ಜನತೆ ತಲೆತಗ್ಗಿಸುವಂತಹ ಘಟನೆ ನಡೆಯಬಾರದು ಇದಕ್ಕೆ ತಕ್ಕ ಶಿಕ್ಷೆ ಆಗಬೇಕು ಎಂದು ಅಭಿಪ್ರಾಯ ಪಡುತ್ತಾರೆ….

ರಘುರಾಜ್ ಹೆಚ್.ಕೆ..9449553305…

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...