
ತೀರ್ಥಹಳ್ಳಿ : ತಾಲೂಕಿನಲ್ಲಿ ನಡೆಯುತ್ತಿರುವ ಮರಳು ಮತ್ತು ಕಲ್ಲು ಮಾಫಿಯಾ ಹಾಗೂ ಮಣ್ಣು ಮಾಫಿಯಾ ಇಡೀ ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿದೆ. ಅದರಲ್ಲಿ ಕೆಲವು ಭ್ರಷ್ಟ ನೀಚ ಅಧಿಕಾರಿಗಳು ಎಂಜಲು ಕಾಸಿಗೆ ಕೈ ಒಡ್ಡಿ ನಿಂತಿರುವುದು ನಾಚಿಕೆಗೇಡಿತನ ಅದಕ್ಕೊಂದು ತಾಜಾ ಉದಾಹರಣೆ ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಶಿವಮೊಗ್ಗದ ಗಣಿ ಇಲಾಖೆಯ ತೀರ್ಥಹಳ್ಳಿ ವಿಭಾಗದ ಉಸ್ತುವಾರಿ ಅಧಿಕಾರಿಯ ಮದುವೆ ನಡೆಯಿತು. ಸದರಿ ಮದುವೆ ಮತ್ತು ರಿಸೆಪ್ಷನ್ನಲ್ಲಿ ಮದುವೆಯ ಗಂಡಿನ ನೆಂಟರಿಷ್ಟರಿಗಿಂತ ಬಂಧು ಬಳಗಕ್ಕಿಂತ ತೀರ್ಥಹಳ್ಳಿಯ ಮಣ್ಣು ಮರಳು ಕಲ್ಲು ಮಾಫಿಯಾದವರೇ ಕಾಣಿಸಿಕೊಂಡಿದ್ದರು. ಗಬ್ಬಡಿಯ ಗಣೇಶನ ಇನ್ನೊಂದು ಹೆಸರಿನ ವ್ಯಕ್ತಿ ಒಬ್ಬ ಮದುವೆಯ ಮತ್ತು ರಿಸೆಪ್ಶನ್ ಎಲ್ಲ ಉಸ್ತುವಾರಿ ಹೊತ್ತಂತೆ ತಿರುಗಾಡುತ್ತಿದ್ದ .ಮದುವೆ ದಿನ ಗಣಿ ಅಧಿಕಾರಿಯ ಮೈ ಮೇಲೆ ತೀರ್ಥಹಳ್ಳಿಯ ಮಣ್ಣು ,ಮರಳು ,ಕಲ್ಲು ಮಾಫಿಯಾದವರು ಕನಿಷ್ಠ 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಮೌಲ್ಯದ ಬ್ರಾಸ್ ಲೈಟ್, ಉಂಗುರ ,ಸರವನ್ನು ಹಾಕಿದ್ದರು… ಎಂದು ಮದುವೆಗೆ ಬಂದವರೆಲ್ಲ ಪತ್ರಿಕೆಗೆ ಕರೆ ಮಾಡಿ ಮಾಹಿತಿ ನೀಡುತ್ತಿದ್ದಾರೆ .
ನಾನೊಬ್ಬ ಸಾಚ ಎಂದು ಪೋಸ್ ಕೊಡುತ್ತಿದ್ದ ಈ ಭ್ರಷ್ಟ ಅಧಿಕಾರಿಗೆ ಇನ್ನು ಮೇಲೆ ಏನಿದ್ದರೂ ಇವರ ಋಣ ತೀರಿಸುವ ಹೊರೆ ಇಂಥವರಿಗೆಲ್ಲಾ ಕೆಲಸ ಏಕೆ ಬೇಕು ..?! ಅಕ್ರಮದ ಹಣದಲ್ಲಿ ಮದುವೆಯಾಗುವ ಇವರದು ಒಂದು ಜೀವನವೇ..?! ಇದರಲ್ಲಿ ಮಾಫಿಯಾ ದವರ ತಪ್ಪಿಲ್ಲ ಅವರು ಇವನ ಮೇಲೆ ಇನ್ವೆಸ್ಟ್ ಮಾಡಿದ್ದಾರೆ ಅಷ್ಟೇ .. ಅದನ್ನು ಮರಳಿ ಪಡೆದುಕೊಳ್ಳುತ್ತಾರೆ ಅಲ್ಲಿಗೆ ಹಾಕಿದ ದುಡ್ಡಿಗೆ ಎರಡರಷ್ಟು ಲಾಭ ಬಂದಂತಾಗುತ್ತದೆ… ಇಷ್ಟೇ ಲೆಕ್ಕಾಚಾರ…
ರಘುರಾಜ್ ಹೆಚ್.ಕೆ..9449553305….