

ಶಿವಮೊಗ್ಗ : ತಾಲೂಕಿನ ಹುಣಸೋಡು ಗ್ರಾಮದಲ್ಲಿ ಸೀತಾಬಾಯಿ(50) ಎಂಬುವರು ಆತ್ಮಹತ್ಯೆಗೆ ಯತ್ನಿಸಿದ್ದು
ಆತ್ಮಹತ್ಯೆಗೆ ಕಾರಣ :
ಇದೇ ಜೂನ್ 17ರಂದು ಹಣದಾಸೆಗೆ ಶಿವಮೊಗ್ಗದ ವಿಜಯನಗರದಲ್ಲಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಲ್ಲಿಕಾರ್ಜುನ್ ಅವರ ಪತ್ನಿ ಕಮಲಮ್ಮ ಎಂಬುವರನ್ನು ಕೊಲೆ ಮಾಡಲಾಗಿತ್ತು.
ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಕಾರು ಚಾಲಕ ಹನುಮಂತ ನಾಯ್ಕ ನಾಪತ್ತೆಯಾಗಿದ್ದ.
ಕಮಲಮ್ಮ ನವರನ್ನು ಕೊಲೆಗೈದು ಸುಮಾರು 35 ಲಕ್ಷ ಹಣವನ್ನು ದೋಚಲಾಗಿತ್ತು.
ಈ ಹಿನ್ನೆಲೆಯಲ್ಲಿ ಕೊಲೆಗಾರನ ಸುಳಿವು ಪಡೆದ ಶಿವಮೊಗ್ಗದ ತುಂಗಾನಗರ ಪೊಲೀಸರು ಆರೋಪಿ ಹನುಮಂತ ನಾಯ್ಕ ನ ಬೆನ್ನು ಬಿದ್ದಿದ್ದರು.
ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ
ಮಗ ಹನುಮಂತ ನಾಯ್ಕ , ಪತಿ
ರೂಪ್ಲಾ ನಾಯ್ಕ ಇಬ್ಬರು ಮನೆ ಬಿಟ್ಟು ಪರಾರಿಯಾಗಿದ್ದರು.
ಇದರಿಂದ ಮನನೊಂದ ಸೀತಾಬಾಯಿ ಸಂಬಂಧಿಕರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಇಂದು ಬೆಳಗ್ಗೆ 10ಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಸೀತಾಬಾಯಿಯನ್ನು ರಕ್ಷಿಸಿ ಸಂಬಂಧಿಕರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸೀತಾ ಬಾಯಿ ಚಿಕಿತ್ಸೆಗೆ ದಾಖಲಾಗಿದ್ದು. ವೈದ್ಯರು ಐಸಿಯುವಿನಲ್ಲಿ ಚಿಕಿತ್ಸೆ ನೀಡುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ….