
ಶಿವಮೊಗ್ಗ: ಮಾಜಿ ಉಪ ಮುಖ್ಯಮಂತ್ರಿ, ಮಾಜಿ ಶಾಸಕರು ಬಿಜೆಪಿಯ ಹಿರಿಯ ಮುಖಂಡರಾಗಿರುವ ಕೆ ಎಸ್ ಈಶ್ವರಪ್ಪನವರ ಪುತ್ರ ಕೆಇ ಕಾಂತೇಶ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಜಿಲ್ಲೆಯಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು ಅಧಿಕೃತವಾಗಿ ಘೋಷಣೆ ಒಂದೇ ಬಾಕಿ ಎನ್ನಲಾಗುತ್ತಿದೆ.
ಈಗಾಗಲೇ ಹಾವೇರಿಯ ಜಿಲ್ಲೆಯ ಮಾಜಿ ಸಚಿವರಾದ ದಿವಂಗತ ಸಿ ಎಂ ಉದಾಸಿ ಅವರ ಪುತ್ರ ಸಂಸದ ಶಿವಕುಮಾರ್ ಉದಾಸಿ ಯವರು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೆ ಇ ಕಾಂತೇಶ್ ಸ್ಪರ್ಧೆ ಬಹುತೇಕ ಖಚಿತವಾಗಿದೆ.
ಶಿವಮೊಗ್ಗ ಜಿಲ್ಲೆ ಹೊರತುಪಡಿಸಿ ಬೇರೆ ಕಡೆ ಆಫರ್ ಬಂದಾಗ ನಿರಾಕರಿಸಿದ್ದ ಕೆಇ ಕಾಂತೇಶ್ :
ಹಿಂದೆ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರಕ್ಕೆ ಕೆಇ ಕಾಂತೇಶ್ ಹೆಸರು ಕೇಳಿ ಬಂದಿತ್ತು ಆಗ ತಂದೆ ಈಶ್ವರಪ್ಪ ಒಪ್ಪಿರಲಿಲ್ಲ. ಹಾಗೆ ಹಾವೇರಿಯ ಸಿಎಂ ಉದಾಸಿ ತೀರಿಕೊಂಡಾಗ ನಡೆದ ಮರು ಚುನಾವಣೆಗೂ ಕೂಡ ಕಾಂತೇಶ ಹೆಸರು ಕೇಳಿಬಂದಿತ್ತು . ಆಗ ಕೂಡ ತಂದೆ ಈಶ್ವರಪ್ಪ ಅದನ್ನು ನಿರಾಕರಿಸಿದ್ದರು. ಈಶ್ವರಪ್ಪ ನವರಿಗೆ ತಮ್ಮ ತವರು ಜಿಲ್ಲೆ ಶಿವಮೊಗ್ಗದಲ್ಲಿಯೇ ಮಗನನ್ನು ಅಭ್ಯರ್ಥಿಯಾಗಿ ನಿಲ್ಲಿಸಬೇಕೆಂಬ ಆಸೆ ಇತ್ತು . ಆದರೆ ಕಳೆದ ಚುನಾವಣೆಯಲ್ಲಿ ಕೊನೆಯವರೆಗೂ ಕೆ ಇ ಕಾಂತೇಶ್ ಕೇಳಿಬಂದಿತ್ತು ನಂತರ ಚನ್ನಬಸಪ್ಪ ಗೆ ಬಿಜೆಪಿ ಟಿಕೆಟ್ ನೀಡುವುದರ ಮೂಲಕ ಕೆ ಕಾಂತೇಶ್ ಗೆ ಟಿಕೆಟ್ ಕೈತಪ್ಪಿತು. ಮಾಜಿ ಸಚಿವ ಈಶ್ವರಪ್ಪನವರು ಕೂಡ ರಾಜಕೀಯ ನಿವೃತ್ತಿ ತೆಗೆದುಕೊಂಡಿದ್ದರು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತರ ಪಕ್ಷಕ್ಕೆ ಸೆಡ್ಡು ಹೊಡೆಯದೆ ನಿಷ್ಠರಾಗಿ ಬಿಜೆಪಿ ಪಕ್ಷಕ್ಕೆ ಇದ್ದ ಕಾರಣ ಬಿಜೆಪಿ ಹೈಕಮಾಂಡ್ ನಲ್ಲಿ ಈಶ್ವರಪ್ಪನವರ ಮೇಲೆ ಒಲವು ಹೆಚ್ಚಾಗಿದೆ ಆ ಕಾರಣದಿಂದ ಈ ಸಲ ಹಾವೇರಿ ಕ್ಷೇತ್ರದಿಂದ ಮಗ ಕೆಇ ಕಾಂತೇಶ್ ಟಿಕೆಟ್ ಸಿಗುವ ಸಾಧ್ಯತೆ ಅಧಿಕವಾಗಿದೆ.
ಹಾಗಾದಲ್ಲಿ ಶಿವಮೊಗ್ಗದಲ್ಲಿ ಬಿ ವೈ ರಾಘವೇಂದ್ರ, ಹಾವೇರಿಯಿಂದ ಕೆಇ ಕಾಂತೇಶ್ ಸ್ಪರ್ಧಿಸುವ ಸಾಧ್ಯತೆ ಇದೆ ಇನ್ನುಳಿದಂತೆ ಶಿವಮೊಗ್ಗದಲ್ಲಿ ಕಾಂಗ್ರೆಸ್ ನಿಂದ ಈಗಾಗಲೇ ಗೀತಾ ಶಿವರಾಜ್ ಕುಮಾರ್ ಹೆಸರು ಕೇಳಿ ಬರುತ್ತಿದೆ. ಹಾಗೆ ಇನ್ನೊಂದು ಮೂಲಗಳ ಪ್ರಕಾರ ಕುಮಾರ್ ಬಂಗಾರಪ್ಪ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದು ನಿಲ್ಲಿಸುವ ರಣತಂತ್ರ ಕೂಡ ನಡೆಯುತ್ತಿದೆಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಕಾಂಗ್ರೆಸ್ ಪಕ್ಷ ಅದರಲ್ಲೂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಿಗೆ ಈ ಚುನಾವಣೆಯಲ್ಲಿ ಸೋತಿರುವ ಕಿಮ್ಮನೆ ರತ್ನಾಕರ್ ನಿಲ್ಲಿಸುವ ಹಂಬಲ ಇದೆ ಎನ್ನಲಾಗುತ್ತಿದೆ .
ಎಲ್ಲಾ ಲೆಕ್ಕಾಚಾರ ಉಲ್ಟಾ ಆಗಿ ಆರ್ ಎಂ ಮಂಜುನಾಥ್ ಗೌಡ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಅಭ್ಯರ್ಥಿ ಆಗ್ತಾರಾ..?!
ಕಳೆದ ವಿಧಾನಸಭಾ ಚುನಾವಣೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದ ಆರ್ ಎಂ ಮಂಜುನಾಥ್ ಗೌಡ ಅವರು ಕೊನೆಯ ಕ್ಷಣದಲ್ಲಿ ಪಕ್ಷದ ನಾಯಕರ ಮಾತಿಗೆ ಒಪ್ಪಿ, ಕಿಮ್ಮನೆ ರತ್ನಾಕರ್ ಅವರಿಗೆ ಚುನಾವಣೆಯಲ್ಲಿ ಸಂಪೂರ್ಣ ಜೊತೆಯಾಗಿ ನಿಂತು ಅಧಿಕ ಮತಗಳು ಬರುವಂತೆ ನೋಡಿಕೊಂಡು ಕ್ಷೇತ್ರದ ತುಂಬಾ ಓಡಾಡಿದ್ದರು.
ಆದರೆ ಚುನಾವಣೆಯಲ್ಲಿ ಕಿಮ್ಮನೆ ರತ್ನಾಕರ್ ಗೆಲುವು ಕಾಣಲಿಲ್ಲ ಆದರೆ ಮತಗಳು ಮಾತ್ರ ಅಧಿಕ ಸಂಖ್ಯೆಯಲ್ಲಿ ಬಂದಿದ್ದು ಅದಕ್ಕೆ ಕಾರಣ ಮಂಜುನಾಥ್ ಗೌಡರ ಶ್ರಮ ಎನ್ನುವುದು ಕಾಂಗ್ರೆಸ್ ಹಿರಿಯ ನಾಯಕರಿಗೆ ಅರಿವಿದೆ ಆದ್ದರಿಂದ ಅವರನ್ನೇ ಮುಂಬರುವ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ನಿಲ್ಲಿಸಿದರೆ ಹೇಗೆ ಎನ್ನುವ ಚರ್ಚೆಗಳು ಸಹ ಶುರುವಾಗಿದೆ ಎನ್ನಲಾಗುತ್ತಿದೆ…
ಒಟ್ಟಿನಲ್ಲಿ ಮುಂಬರುವ ಲೋಕಸಭಾ ಚುನಾವಣೆ ಕುತೂಹಲ ಕೆರಳಿಸಿದ್ದು ಕಾಂಗ್ರೆಸ್ ಹಾಗೂ ಬಿಜೆಪಿಯ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ ಇನ್ನೊಂದು ಕಡೆ ಬಿಜೆಪಿ ಜೊತೆ ಜೆಡಿಎಸ್ ಕೈಜೋಡಿಸುವ ಸಾಧ್ಯತೆ ಅಧಿಕವಾಗಿದೆ…
ಬಿಜೆಪಿ ಮತ್ತು ಜೆಡಿಎಸ್ ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಲೋಕಸಭಾ ಚುನಾವಣೆಯಲ್ಲಿ ಎದುರಿಸುವ ಸಾಧ್ಯತೆ ಇದೆ…
ರಘುರಾಜ್ ಹೆಚ್.ಕೆ..9449553305…