
ತೀರ್ಥಹಳ್ಳಿ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಹಲವು ದಿನಗಳಿಂದ ಗುಸು-ಗುಸು ಪಿಸು ಪಿಸು ಎನ್ನುತ್ತಿದ್ದ ಹನಿ ಟ್ರ್ಯಾಪ್ ಪ್ರಕರಣ ಒಂದು ಈಗ ಬೆಳಕಿಗೆ ಬಂದಿದ್ದು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಜ್ಜವಳ್ಳಿ ಮೂಲದ ಯುವತಿ ಒಬ್ಬಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು ಗಂಟೆ ಹಕ್ಲು ಮೂಲದ ಯುವಕನೊಬ್ಬನನ್ನು ಬಂಧಿಸಿದ್ದಾರೆ. ಎನ್ನುವ ಮಾಹಿತಿಗಳು ಲಭ್ಯವಾಗಿದ್ದು.
ಇವರ ಹಿಂದೆ ದೊಡ್ಡದಾದ ಗ್ಯಾಂಗ್ ಒಂದು ಕಾರ್ಯನಿರ್ವಹಿಸುತ್ತಿದ್ದು ಈಗಾಗಲೇ ತೀರ್ಥಳ್ಳಿಯ ಪ್ರತಿಷ್ಠಿತ ಜ್ಯುವೆಲರ್ಸ್ ಮಾಲೀಕರು ಒಬ್ಬರಿಗೆ ಹನಿ ಟ್ರ್ಯಾಪ್ ಮಾಡಿದ್ದು ಉಡುಪಿ ಮೂಲದ ಮೂರು ನಾಲ್ಕು ಜನರಿಗೆ ಹನಿ ಟ್ರ್ಯಾಪ್ ಮಾಡಿರುವ ಸಾಧ್ಯತೆ ಇದೆ. ಹನಿ ಟ್ರ್ಯಾಪ್ ಮಾಡುವುದನ್ನು ವೃತ್ತಿ ಮಾಡಿಕೊಂಡ ಈ ಗ್ಯಾಂಗ್ ಮೊದಲು ಅಧಿಕಾರಿಗಳನ್ನು ಹಾಗೂ ಪ್ರಸಿದ್ಧ ವ್ಯಕ್ತಿಗಳನ್ನು ಪರಿಚಯ ಮಾಡಿಕೊಳ್ಳುವುದು ನಂತರ ನಿಧಾನವಾಗಿ ನಂಬರ್ ತೆಗೆದುಕೊಂಡು ಅವರ ಜೊತೆ ಸಂಪರ್ಕ ಹೊಂದುವುದು ಆನಂತರ ಅವರನ್ನು ಖೆಡ್ಡಕ್ಕೆಬೀಳಿಸುವುದು ಆಗಿದೆ.
ಮೇಗರಹಳ್ಳಿ ಮೂಲದ ಸರ್ಕಾರಿ ಅಧಿಕಾರಿ ಒಬ್ಬರು ಹನಿ ಟ್ರ್ಯಾಪ್ ಬಲೆಗೆ:
ತಾಲೂಕಿನ ಮೇಗರವಳ್ಳಿ ಮೂಲದ ಸರ್ಕಾರಿ ಅಧಿಕಾರಿ ಒಬ್ಬರು ಈ ಬಲೆಗೆ ಬಿದ್ದಿದ್ದು ಅವರು ನೀಡಿದ ದೂರಿನ ಮೇರೆಗೆ ಈ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಮೇಲ್ನೋಟಕ್ಕೆ ಇಬ್ಬರು ಮಾತ್ರ ಬಂಧಿತರಾಗಿದ್ದು ವ್ಯವಸ್ಥಿತವಾದ ತಂಡ ಒಂದು ಇದರ ಹಿಂದಿದ್ದು ಅವರ ಹುಡುಕಾಟದಲ್ಲಿ ಪೊಲೀಸರು ಇದ್ದಾರೆ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಈ ಪ್ರಕರಣ ಮೂಲ ಹುಡುಕಿ ಭೇಧಿಸಿದ್ದೆ ಆದಲ್ಲಿ ನಿಜವಾದ ಆರೋಪಿಗಳು ಸಿಕ್ಕಿದೆ ಆದಲ್ಲಿ ತೀರ್ಥಳ್ಳಿಯ ಪೊಲೀಸರ ಪಾಲಿಗೆ ಇದೊಂದು ಹೆಮ್ಮೆಯ ವಿಷಯವಾಗಲಿದೆ.
ಜಿಲ್ಲೆಯ ದಕ್ಷ ಪ್ರಾಮಾಣಿಕ ಎಸ್ ಪಿ ಮಿಥುನ್ ಕುಮಾರ್ ಜಿ ಕೆ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪ್ರಮುಖ ಆರೋಪಿಗಳನ್ನು ಬಂಧಿಸುತ್ತಾರಾ ಕಾದುನೋಡಬೇಕು…
ರಘುರಾಜ್ ಹೆಚ್.ಕೆ…9449553305…