Wednesday, April 30, 2025
Google search engine
Homeರಾಜ್ಯನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ..! ಕೆಂಪೇಗೌಡರ ಹಿನ್ನೆಲೆ ತಿಳಿಸಿಕೊಟ್ಟ ವಿಶ್ರಾಂತ ಪ್ರಾಂಶುಪಾಲರಾದ ಡಾ. ಎಸ್.ತಿಮ್ಮಯ್ಯ...

ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ..! ಕೆಂಪೇಗೌಡರ ಹಿನ್ನೆಲೆ ತಿಳಿಸಿಕೊಟ್ಟ ವಿಶ್ರಾಂತ ಪ್ರಾಂಶುಪಾಲರಾದ ಡಾ. ಎಸ್.ತಿಮ್ಮಯ್ಯ ನಾಯ್ಡು ..!!


ಶಿವಮೊಗ್ಗ, :ಭಾರತದ ಹೆಮ್ಮೆಯ ನಗರ ಬೆಂಗಳೂರನ್ನು ನಿರ್ಮಾಣ ಮಾಡಿರುವ ನಾಡಪ್ರಭು ಕೆಂಪೇಗೌಡರನ್ನು ಜನರು ಸ್ಮರಿಸುತ್ತಾರೆ. ಹಾಗಾಗಿ ಇತಿಹಾಸ ಯಾವಾಗಲೂ ಮಹಾಪುರುಷರನ್ನು ನೆನಪಿಸಿ ಕೊಡುತ್ತವೆ ಎಂದು ವಿಶ್ರಾಂತ ಪ್ರಾಂಶುಪಾಲರಾದ ಡಾ. ಎಸ್.ತಿಮ್ಮಯ್ಯ ನಾಯ್ಡು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾ ಒಕ್ಕಲಿಗರ ಸಂಘ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಇತಿಹಾಸದಲ್ಲಿ ಕೆಂಪೇಗೌಡರು ಗುರುತಿಸಿಕೊಳ್ಳುವುದು ಬೆಂಗಳೂರು ನಿರ್ಮಾಣದಿಂದ.

ಇವರು 1537 ರಲ್ಲಿ ಬೆಂಗಳೂರು ನಿರ್ಮಾಣ ಕಾರ್ಯವನ್ನು ಆರಂಭಿಸಿ 20 ವರ್ಷಗಳ ಪರಿಶ್ರಮ ಮತ್ತು ಹೋರಾಟದಿಂದ ಬೆಂಗಳೂರು ನಿರ್ಮಿಸಿದರು. ಇವರು ಅಧಿಕಾರಕ್ಕೆ ಬರುವ ಮುಂಚೆಯೇ ನಗರದ ಮುಂದಿನ ನಿರ್ಮಾಣದ ಬಗ್ಗೆ ಚಿಂತಿಸುತ್ತಿದ್ದರು. ಕೆಂಪೇಗೌಡ ದೂರದೃಷ್ಠಿವುಳ್ಳ ಆಡಳಿತಗಾರನಾಗಿದ್ದು, ಶೌರ್ಯ ಧೈರ್ಯ ಸಾಹಸಕ್ಕೆ ಹೆಸರುವಾಸಿಯಾಗಿದ್ದ ಇವರನ್ನು ಆ ಕಾಲದ ಮಹಾಸೇನಾನಿಯಾಗಿ ಗುರುತಿಸುತ್ತಿವೆ ಎಂದು ತಿಳಿಸಿದರು.


1510 ರಲ್ಲಿ ಯಲಹಂಕದಲ್ಲಿ ಜನಿಸಿದ ಕೆಂಪೇಗೌಡರು ತಮ್ಮ 13 ನೇ ವಯಸ್ಸಿನಲ್ಲಿಯೇ ಅಧಿಕಾರಕ್ಕೆ ಬರುತ್ತಾರೆ. ಅವರ ಕುಲದೇವತೆ ಕೆಂಪಮ್ಮ ಆಗಿರುವ ಕಾರಣ ಅವರ ವಂಶದವರಿಗೆ ಕೆಂಪೇಗೌಡ, ದೊಡ್ಡ ಕೆಂಪೇಗೌಡ, ಕೆಂಪೇವೀರಗೌಡ ಎಂಬ ಹೆಸರಿರುತ್ತಿದ್ದವು. ಇವರು ಶಿವನ ಆರಾಧಕರಾಗಿದ್ದರು. ದೈವ ಭಕ್ತಿಯ ಜೊತೆಗೆ ವೈಚಾರಿಕತೆಯನ್ನು ಮೈಗೂಡಿಸಿಕೊಂಡಿದ್ದ ಇವರು, ಬೆಂಗಳೂರಿನಲ್ಲಿ ಗವಿಗಂಗಾಧರೇಶ್ವರ, ಗಣಪತಿ, ಆಂಜನೇಯ, ಬಸವನಗುಡಿ, ಹಲಸೂರು ಸೋಮೆಶ್ವರ ಇನ್ನೂ ಹಲವಾರು ಪ್ರಮುಖ ದೇವಾಲಯಗಳನ್ನು ನಿರ್ಮಾಣ ಮಾಡಿದ್ದಾರೆ ಎಂದು ಅವರು ತಿಳಿಸಿದರು.


ಇವರು ಬೆಂಗಳೂರನ್ನು ನಿರ್ಮಿಸುವಾಗ ಸಾಮಾನ್ಯ, ವೃತ್ತಿ ಆಧಾರಿತ ಮತ್ತು ಜಾತಿ ಅಥವಾ ಸಮುದಾಯ ಆಧಾರಿತ ಮೂರು ರೀತಿಯ ಪೇಟೆಗಳನ್ನು ನಿರ್ಮಾಣ ಮಾಡಿದರು. ನಾಲ್ಕು ದಿಕ್ಕಿನಲ್ಲಿ ನಾಲ್ಕು ಕಾವಲು ಗೋಪುರಗಳನ್ನು ನಿರ್ಮಾಣ ಮಾಡಿದರು. ಇವರು ಕುಡಿಯುವ ನೀರಿಗಾಗಿ ಮತ್ತು ಕೃಷಿಗಾಗಿ ಕೆಂಪಾಬುದಿ, ಧರ್ಮಾಬುದಿ, ಸಂಪಂಗಿ, ಕಾರಂಜಿ, ಚೆನ್ನಮ್ಮ, ಯಡಿಯೂರ್, ಮಾವಳ್ಳಿ ಹೀಗೆ ಹಲವಾರು ಕೆರೆಗಳನ್ನು ಬೆಂಗಳೂರಿನಲ್ಲಿ ನಿರ್ಮಾಣ ಮಾಡಿ, ಜನರ ಮನ ಮನಸ್ಸಲ್ಲಿ ಸದಾ ನೆನಪಿರುತ್ತಾರೆ ಎಂದು ಹೇಳಿದರು.


ಸಂಸದರಾದ ಬಿ.ವೈ ರಾಘವೇಂದ್ರ ಮಾತನಾಡಿ, ಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ ಬೆಂಗಳೂರು ನಿರ್ಮಾಣ ಮಾಡಿದ್ದಾರೆ. ಹಾಗಾಗಿ ನಾವು ಅನುಕೂಲಕರವಾಗಿ ಹೋಗಿಬರಲು ಸಾಧ್ಯವಾಗಿದೆ. ಕೆಂಪೇಗೌಡ ಜಯಂತಿ ಮೊದಲು ರಾಜಕೀಯದಲ್ಲಿ ಕೆಲಸ ಮಾಡುವ ಚುನಾಯಿತ ಪ್ರತಿನಿಧಿಗಳಿಗೆ ಮಾರ್ಗದರ್ಶಕರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ನಡೆಸಿದ ಚರ್ಚಾ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮೇಘನ.ಆರ್. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹನಿರ್ದೇಶಕರಾದ ಉಮೇಶ್.ಹೆಚ್, ಮಹಾಪೌರರಾದ ಶಿವಕುಮಾರ್, ಜಿಲ್ಲಾ ಒಕ್ಕಲಿಗ ಸಂಘದ ಅಧ್ಯಕ್ಷರಾದ ಹೆಚ್.ಬಿ. ಆದಿಮೂರ್ತಿ, ತಾಲ್ಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಚಂದ್ರಕಾಂತ್, ಮಹಿಳಾ ಸಂಘಧ ಶಾಂತ ಸುರೇಂದ್ರ ಮತ್ತಿತರರು ಉಪಸ್ಥಿತರಿದ್ದರು….

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...